ಬೆಂಗಳೂರು:- ದೇಹ ಬಲಾಢ್ಯಗಾಗಿ ಪ್ರೋಟೀನ್ ಪೌಡರ್ ಬಳಸುವ ಮುನ್ನ ಎಚ್ಚರ..ICMR ವರದಿಯಲ್ಲಿ ಅಚ್ಚರಿ ವಿಷಯ ಬಹಿರಂಗವಾಗಿದೆ.
ಪಾನ್ ಬೀಡಾ ಬೆಲೆ ಹೆಚ್ಚಳ.. ಎಲ್ಲವೂ ದುಪ್ಪಟ್ಟು.. ಪಾನ್ ಪ್ರಿಯರು ಕಂಗಾಲು!
ಜಿಮ್, ಸ್ಪೋರ್ಟ್ಗಳಲ್ಲಿ ತೊಡಗಿಕೊಂಡಿರುವ ಯುವಕ ಯುವತಿಯರಂತೂ ಪ್ರೋಟೀನ್ ಹೆಸರಿನಲ್ಲಿ ಸ್ಲೋ ಪಾಯಿಸನ್ ಸೇವನೆ ಮಾಡುತ್ತಿದ್ದು, ಜೀವಕ್ಕೆ ಕುತ್ತು ತಂದು ಕೊಳ್ಳುತ್ತಿದ್ದಾರೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳಿದೆ.
13 ವರ್ಷದ ಬಳಿಕ ICMR ಭಾರತೀಯರ ಫುಡ್ ಡಯಟ್ರಿ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಪ್ರೋಟಿನ್ ಪೌಡರ್ ಬಳಕೆದಾರರನ್ನು ಅಚ್ಚರಿ ಮೂಡಿಸುವ ಅಂಶಗಳನ್ನು ವರದಿ ನೀಡಿದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಪ್ರೋಟಿನ್ ಪೌಡರ್ ಸೇವನೆಯಿಂದ ಜೀವಕ್ಕೆ ಅಪಾಯವಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ. ಭಾರತದಲ್ಲಿ ಅತಿ ಹೆಚ್ಚು ಚೀಪ್ ಪ್ರೋಟಿನ್ ಪೌಡರ್ಗಳು ಮಾರಟವಾಗುತ್ತಿದ್ದು ಅದರಲ್ಲಿ ಸಕ್ಕರೆ, ಸೋಡಿಯಂ, ಪೋಟ್ಯಾಷಿಯಂ ಸೇರಿದಂತೆ ಹಲವು ಕೆಮಿಕಲ್ ಅಂಶಗಳು ಹೆಚ್ಚಾಗಿ ಪತ್ತೆಯಾಗಿದ್ದು, ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ
ಭಾರತದಲ್ಲಿ ನೆಲೆಯೂರಿರುವ ಅನೇಕ ಚೀಪ್ ಬ್ರಾಂಡ್ ಪ್ರೋಟಿನ್ ಪೌಡರ್ಗಳಲ್ಲಿ ಜೀವಕ್ಕೆ ಕುತ್ತು ತರುವಂತಹ ಅನೇಕ ಕೆಮಿಕಲ್ ಬಳಕೆ ಮಾಡಲಾಗುತ್ತಿದೆ. ಹೆಚ್ಚಾಗಿ ಸಕ್ಕರೆ ಅಂಶಗಳು ಪ್ರೋಟಿನ್ ಪೌಡರ್ಗಳಲ್ಲಿ ಬಳಕೆ ಮಾಡಲಾಗುತ್ತಿದ್ದು ಇದರಿಂದ ಡಯಾಬಿಟಿಸ್ ನಂತಹ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ದೇಹಕ್ಕೆ ಕ್ಯಾಲೋರಿ ಒದಗಿಸುವ ಹಿನ್ನಲೆ ಅದರಲ್ಲಿ ಬಳಸುವ ಒಂದಿಷ್ಟು ಕೆಮಿಕಲ್ ಅಂಶಗಳು ಕಿಡ್ನಿ, ಲಿವರ್ ಮೇಲೆ ಸೈಡ್ ಎಫೆಕ್ಟ್ ಬೀರುವ ಸಾಧ್ಯತೆಗಳಿದ್ದು, ಅತಿಯಾಗಿ ಪ್ರೋಟಿನ್ ಪೌಡರ್ಗಳನ್ನು ಬಳಸದೆ ದೇಹ ವೃದ್ಧಿಗೆ ನ್ಯಾಚುರಲ್ ಆಹಾರ ಬಳಸುವಂತೆ ಹಿರಿಯ ಮದುಮೇಹ ತಜ್ಞ ಡಾ.ಅನೀಲ್ಕುಮಾರ್ ಸಲಹೆ ನೀಡಿದ್ದಾರೆ
ಜಿಮ್ಗಳಿಗೆ ಬರುವವರು ಆನ್ಲೈನ್ಗಳಲ್ಲಿ ಪ್ರೋಟಿನ್ ಪ್ರೌಡರ್ಗಳನ್ನು ಖರೀದಿಸುತ್ತಾರೆ. ಲೈಸೆನ್ಸ್ ಇಲ್ಲದಿರುವ ಪ್ರೋಟೀನ್ ಕಂಪನಿಗಳಿಂದ ಯಾವುದೇ ಕಾರಣಕ್ಕೂ ಪ್ರೋಟೀನ್ ಪೌಡಾರ್ ಅನ್ನು ಬಳಸಬಾರದು ಎಂದು ಜಿಮ್ ಟ್ರೈನರ್ ಒಬ್ಬರು ಹೇಳಿದ್ದಾರೆ.