ನೀವು ತೆಗೆದುಕೊಳ್ಳುವ ಆಹಾರದ ಮೇಲೆ ಸ್ಪಷ್ಟತೆ ಇದ್ದರೆ ತೂಕ ಇಳಿಸಿಕೊಳ್ಳಲು ಹಾಗೂ ಬೊಜ್ಜು ಕರಗಿಸಿಕೊಳ್ಳಲು ಸಹಾಯ ಆಗುತ್ತದೆ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಸೇವಿಸುವುದರಿಂದ ಫ್ಯಾಟ್ ಅಥವಾ ಬೊಜ್ಜಿನ ಸಮಸ್ಯೆ ಎದುರಾಗುತ್ತದೆ. ಮೊದಲಿಗೆ ನಮ್ಮ ಎತ್ತರಕ್ಕೆ ಸರಿಯಾದ ತೂಕ ಇದ್ದೀವಾ ಎನ್ನುವುದು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.
ಮಹಿಳೆಯರೇ ತಿಳಿದಿರಲಿ.. ಗೋಡೆಯಿಂದ ಫ್ರಿಜ್ ಎಷ್ಟು ದೂರದಲ್ಲಿಡಬೇಕು ಗೊತ್ತಾ!?
ಆರೋಗ್ಯಕರ ತೂಕ ಇಳಿಕೆಗೆ ಏನು ಮಾಡಬೇಕು? ⦁ ಸಕ್ಕರೆ ಉಪಯೋಗ ಕಡಿಮೆ ಮಾಡಿಕೊಳ್ಳಬೇಕು. ನೀವು ಬಳಸುವ ಆಹಾರದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇದೆಯಾ ಎಂದು ನೋಡಿಕೊಳ್ಳಬೇಕು. ಆದಷ್ಟು 0% ಸಕ್ಕರೆ ತಿಂಡಿ ತಿನ್ನುವುದು ಆರೋಗ್ಯಕರ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ⦁ ಪುಡಿ ಉಪ್ಪು ಬಳಕೆ ಕಡಿಮೆ ಇದ್ದರೆ ಉತ್ತಮ. ಆಹಾರದಲ್ಲಿ ಉಪ್ಪಿನಾಂಶ ಮಿತವಾಗಿದ್ದರೆ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಗಟ್ಟಬಹುದು
ರಿಫೈನ್ಡ್ ಕಾರ್ಬೋಹೈಡ್ರೇಟ್ ಪದಾರ್ಥಗಳನ್ನು ಬಳಸದೇ ಇರುವುದು ಉತ್ತಮ. ಪಾಲಿಶ್ ಮಾಡಿರುವ ಅಕ್ಕಿ, ಮೈದಾಹಿಟ್ಟು, ಜಂಕ್ ಫುಡ್ ಗಳನ್ನು ತಿನ್ನುವುದನ್ನು ಬಿಡಬೇಕು. ⦁ ಫೈಬರ್ ಮತ್ತು ಪ್ರೋಟೀನ್ ಭರಿತ ಆಹಾರ ಸೇವಿಸಬೇಕು. ಒಳ್ಳೆಯ ಕೊಬ್ಬಿನಾಂಶ ಇರುವ ಆಹಾರ ಸೇವಿಸುವುದರಿಂದ ಆರೋಗ್ಯವಾಗಿರಬಹುದು.
ಯಾವ ರೀತಿಯ ಆಹಾರ ಸೇವಿಸಬೇಕು? 1. ಡಿಟಾಕ್ಸ್ ಡ್ರಿಂಕ್: ಬೆಳಗ್ಗೆ ಎದ್ದ ನಂತರ ಡಿಟಾಕ್ಸ್ ಡ್ರಿಂಕ್ ಕುಡಿಯುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುವುದಲ್ಲದೆ, ದಿನವೆಲ್ಲಾ ಚೈತನ್ಯರಾಗಿ ಇರುವಂತೆ ಮಾಡುತ್ತದೆ. ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ 2 ಟೀ ಸ್ಪೂನ್ ನಿಂಬೆರಸ ಸೇರಿಸಿ, ಅದಕ್ಕೆ ಅರ್ಧ ಟೀ ಸ್ಪೂನ್ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಉತ್ತಮ ಲಾಭ ಪಡೆಯಬಹುದು. ಇದರ ಜೊತೆಗೆ ಗ್ರೀನ್ ಟೀ, ಹಸಿರು ಸೊಪ್ಪು ಜ್ಯೂಸ್, ಹಸಿರು ತರಕಾರಿ ಜ್ಯೂಸ್ ತೆಗೆದುಕೊಳ್ಳುವುದರಿಂದ ದೇಹಕ್ಕೆ ನಾನಾ ರೀತಿಯ ಪ್ರಯೋಜನಗಳನ್ನು ಪಡೆಯಬಹುದು.