ಎಲ್ಲರ ಮನೆಯಲ್ಲಿ ಕೇಳಿಬರುವ ಸಾಮಾನ್ಯ ಸಮಸ್ಯೆ ಎಂದರೆ ಇಲಿ, ಜಿರಳೆ ಮತ್ತು ಇರುವೆ ಕಾಟ. ಹೆಚ್ಚಾಗಿ ಜಿರಳೆ ಮತ್ತು ಇರುವೆ ತೊಂದರೆ. ಇವುಗಳ ಆರ್ಭಟ ಮನೆಯಲ್ಲಿ ಬಲು ಜೋರಾಗಿಯೇ ಇರುತ್ತದೆ. ಕಾರಣ, ತಿನ್ನಲು ಸಿಗುವ ಐಟಂಗಳು. ಅಡುಗೆ ತಯಾರಿಸಲು ತರುವ ಸಕ್ಕರೆ, ಗೋದಿ, ಮೈದಾ, ತರಕಾರಿ ಅಥವಾ ಹಣ್ಣು-ಹಂಪಲು ಹೀಗೆ ಹಲವಾರು ಪದಾರ್ಥಗಳನ್ನು ಹುಡುಕಿಕೊಂಡು ಬರುವ ಜಿರಳೆಗಳು ಇಡೀ ಮನೆಯನ್ನೇ ಆವರಿಸಿಕೊಳ್ಳುತ್ತದೆ.
ಇವು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಶೌಚಾಲಯ, ಮಲಗುವ ಕೋಣೆ, ಟಿವಿ ಸ್ಟ್ಯಾಂಡ್, ರಂಧ್ರಗಳು ಹೀಗೆ ಅನೇಕ ಸ್ಥಳಗಳಲ್ಲಿ ಅಡಗಿ ಕುಳಿತಿರುತ್ತವೆ. ಜಿರಳೆಗಳ ಓಡಾಟದಿಂದ ಮನೆಯಲ್ಲಿ ನಾನಾ ತೊಂದರೆಗಳು ಉದ್ಬವಿಸುತ್ತವೆ. ಜಿರಳೆ ಹಾಗೂ ಇರುವೆ ಕಾಟದಿಂದ ಮುಕ್ತಿ ಹೊಂದಬೇಕೆಂದರೆ ನಿಮ್ಮ ಮನೆಯಲ್ಲಿಯೇ ಸಿಗುವ ಈ ಪದಾರ್ಥಗಳನ್ನು ಬಳಸಿ ಈ ರೀತಿ ಮಾಡಿ ನೋಡಿ.
ಪಲಾವ್ ಎಲೆ ಮತ್ತು ಒಂಚೂರು ಉಪ್ಪನ್ನು ನೀರಿನಲ್ಲಿ ಬೆರೆಸಿ ಕೆಲವು ನಿಮಿಷ ಕುದಿಸಿ. ತದನಂತರ ಅದನ್ನು ಎಲ್ಲಿ ಇರುವೆ ಮತ್ತು ಜಿರಳೆ ಹೆಚ್ಚಾಗಿದೆಯೋ ಆ ಜಾಗದಲ್ಲಿ ಸಿಂಪಡಿಸಿ ನೋಡಿ. ಮತ್ತೆ ಜಿರಳೆ ಹಿಂತಿರುಗುವುದಿಲ್ಲ.