ಯುವಕರು ಸ್ವಿಫ್ಟ್ ಹ್ಯಾಚ್ಬ್ಯಾಕ್ ಅನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಮಾರುತಿ ಸುಜುಕಿ ಸ್ವಿಫ್ಟ್ ಈಗ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ಮೆಂಟ್ನಲ್ಲಿಯೂ ಲಭ್ಯವಿದೆ.
ಆರ್ಮಿ ಕ್ಯಾಂಟೀನ್ ರಕ್ಷಣಾ ಸಿಬ್ಬಂದಿಗೆ ಸಬ್ಸಿಡಿ ದರದಲ್ಲಿ ಸರಕುಗಳನ್ನು ನೀಡುತ್ತದೆ. ಇದರಲ್ಲಿ ಗೃಹೋಪಯೋಗಿ ವಸ್ತುಗಳು, ಮದ್ಯ, ವೈದ್ಯಕೀಯ ವಸ್ತುಗಳು ಮತ್ತು ಹೆಚ್ಚಿನವನ್ನು ಖರೀದಿಸಬಹುದು. ಆರ್ಮಿ ಕ್ಯಾಂಟೀನ್ ಮೂಲಕ ಸಬ್ಸಿಡಿ ದರದಲ್ಲಿ ಕಾರನ್ನು ಸಹ ಖರೀದಿಸಬಹುದು. ದೇಶಾದ್ಯಂತ ಸುಮಾರು 34 ಸಿಎಸ್ಡಿ ಡಿಪೋಗಳಿವೆ. ಅರ್ಹ ವ್ಯಕ್ತಿಯು ಹತ್ತಿರದ ಔಟ್ಲೆಟ್ ಮೂಲಕ ವಾಹನ ಖರೀದಿಸಬಹುದು.
2023 ರಲ್ಲಿ CSD ಕಾರ್ ಅರ್ಹತೆ: ಭಾರತ ಸರ್ಕಾರದಿಂದ ವೇತನ ಪಡೆದು ರಕ್ಷಣಾ ವಲಯದಲ್ಲಿ ಉದ್ಯೋಗದಲ್ಲಿರುವ ಎಲ್ಲರೂ CSD ಮೂಲಕ ಕಾರುಗಳನ್ನು ಖರೀದಿಸಬಹುದು. ಅಲ್ಲದೆ, ರಕ್ಷಣಾ ಇಲಾಖೆಯ ಎಲ್ಲಾ ನಿಯೋಜಿತ ಅಧಿಕಾರಿಗಳು ಮತ್ತು ಮಾಜಿ ಸೈನಿಕರು ಕ್ಯಾಂಟೀನ್ ಮೂಲಕ ಕಾರನ್ನು ಖರೀದಿಸಬಹುದು. ಇದಲ್ಲದೆ, ಅವರು ಖಾಸಗಿ ಬ್ಯಾಂಕ್ಗಳು ಅಥವಾ ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ವಾಹನಕ್ಕೆ ಹಣಕಾಸು ಒದಗಿಸಬಹುದು.
ರೂ. 5.13 ಲಕ್ಷಕ್ಕೆ ಸ್ವಿಫ್ಟ್ ಕಾರು: Maruti Swift ಮೇಲೆ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ಮೆಂಟ್ (CSD) ನಲ್ಲಿ ರೂ.86,000 ದಿಂದ ರೂ.1.18 ಲಕ್ಷದವರೆಗೆ ಸಬ್ಸಿಡಿ ಲಭ್ಯವಿದೆ. ಸ್ವಿಫ್ಟ್ನ ಅತ್ಯಂತ ಕೈಗೆಟುಕುವ 1.2 ಲೀಟರ್ LXI ಮ್ಯಾನುವಲ್ ಬೇಸ್ ವೇರಿಯೆಂಟ್ CSD ನಲ್ಲಿ 5,13,367 ರೂ.ಗೆ ಲಭ್ಯವಿದೆ. ಆದರೆ ಸಾಮಾನ್ಯ ಗ್ರಾಹಕರಿಗೆ ಇದು ರೂ. 5,99,450 ಎಕ್ಸ್ ಶೋರೂಂ ಆಗಿದೆ.
ಅಂದರೆ CSD ಮೂಲಕ ನೀವು ಸ್ವಿಫ್ಟ್ ಮ್ಯಾನುವಲ್ LXI ಖರೀದಿಸಿದರೆ ರೂ. 86,083 ಉಳಿಸಬಹುದು. ಅದೇ ರೀತಿ, 1.2-ಲೀಟರ್ VXI ಆಟೋಮ್ಯಾಟಿಕ್ ಅನ್ನು 6,47,092 ರೂ.ಗಳಲ್ಲಿ ಪಡೆಯಬಹುದು. ಸಾಮಾನ್ಯ ಗ್ರಾಹಕರು ಇದನ್ನು ರೂ. 7,50,000 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಸಬೇಕು. CSD ಯಿಂದ ಖರೀದಿಸುವ ಮೂಲಕ ನೀವು ರೂ. 97,177 ಉಳಿಸಬಹುದು.
Maruti Swift CNG ಆಯ್ಕೆಯ ಕುರಿತು ಮಾತನಾಡುವುದಾದ್ರೆ, VXI CNG ಸಿಎಸ್ಡಿಯಿಂದ ರೂ. 6,80,755 ಕ್ಕೆ ಲಭ್ಯವಿದೆ. ಇದು ಸಾಮಾನ್ಯ ಗ್ರಾಹಕರಿಗೆ ರೂ. 7,85,000 ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ. ಸಿಎಸ್ಡಿಯಿಂದ ಸೈನಿಕರು ಇದರ ಮೇಲೆ ರೂ. 1,04,245 ರಿಯಾಯಿತಿ ಪಡೆಯಬಹುದು.