ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಹಿಂದೆಂದೂ ಮಾರಾಟವಾಗದಷ್ಟು ಡೋಲೋ 650 ಮಾತ್ರೆ ಮಾರಾಟವಾಗಿ ದುಪ್ಪಟ್ಟು ಆದಾಯ ಗಳಿಸಿದೆ.. ಮಾರ್ಚ್ 2020 ರಿಂದ ಅಂದ್ರೆ ಸಾಂಕ್ರಾಮಿಕ ಶುರುವಾದಾಗಿಂದ, ಡೊಲೊ 650 ಮಾತ್ರ ಒಂದರಿಂದ 5.7 ಶತಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಪ್ಯಾರಸಿಟಮಾಲ್ ಮಾತ್ರೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೋಲೋ 650 ಅನ್ನು ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿದ್ದಾರೆ… ಆದ್ರೆ ಒಂದು ವಿಷಯ ಏನು ಅಂದರೆ ಹೆಚ್ಚು ಡೋಲೋ 650 ಮಾತ್ರೆ ಹೋದಷ್ಟು ತಮಗೆ ಗೊತ್ತಿಲ್ಲದೆ ಜನರು ಅನೇಕ ರೋಗಗಳನ್ನ ಆಹ್ವಾನಿಸಿಕೊಂಡಂತೆ ಆಗಿದೆ.
ಕೋವಿಡ್ನಲ್ಲಿ ಮೃತ ಪಟ್ಟ ಕುಟುಂಬಸ್ಥರ ಶಾಪ ಬಿಜೆಪಿಗೆ ತಟ್ಟುತ್ತದೆ: ಸಚಿವ ಖಂಡ್ರೆ!
ಡೋಲೋ 650 ಟ್ಯಾಬ್ಲೆಟ್ ನೋವನ್ನು ನಿವಾರಿಸಲು ಮತ್ತು ಜ್ವರವನ್ನು ಕಡಿಮೆ ಮಾಡಲು ಬಳಸುವ ಔಷಧಿಯಾಗಿದೆ. ತಲೆನೋವು, ದೇಹದ ನೋವು, ಹಲ್ಲುನೋವು ಮತ್ತು ನೆಗಡಿಯಂತಹ ಇತರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ನೋವು ಮತ್ತು ಜ್ವರವನ್ನು ಉಂಟುಮಾಡುವ ಕೆಲವು ರಾಸಾಯನಿಕಗಳ ಬಿಡುಗಡೆಯನ್ನು ತಡೆಯುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ.
ಡೋಲೋ 650 ಮಾತ್ರೆಯನ್ನು ಒಂದೇ ಅಥವಾ ಬೇರೆ ಔಷಧಿಗಳ ಜೊತೆಯಲ್ಲಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆದ್ರೆ ಈ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕು. ಊಟದ ನಂತರವೇ ಈ ಮಾತ್ರೆ ಸೇವಿಸಬೇಕು. ಇಲ್ಲವಾದಲ್ಲಿ ಉದರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಈ ಔಷಧಿಯನ್ನು ಸರಿಯಾಗಿ ಬಳಸಿದರೆ ಅಡ್ಡಪರಿಣಾಮಗಳು ಕಡಿಮೆ. ಈ ಔಷಧಿ ಸೇವನೆಯಿಂದ ಕೆಲವರಲ್ಲಿ ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬಹುದು. ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಡಮಾಡದೇ ವೈದ್ಯರನ್ನು ಸಂಪರ್ಕಿಸಬೇಕು. ಈ ಮಾತ್ರೆಯನ್ನು ಎಲ್ಲ ವಯೋಮಾನದ ವರ್ಗಕ್ಕೆ ಶಿಫಾರಸ್ಸು ಮಾಡಲ್ಲ. ಒಂದು ವೇಳೆ ನೀವು ಮೂತ್ರಪಿಂಡದ ಸಮಸ್ಯೆಗಳನ್ನು ಹೊಂದಿದ್ದರೆ ಅಥವಾ ರಕ್ತ ತೆಳುಗೊಳಿಸುವ ಔಷಧಿಗಳನ್ನು ಬಳಸುತ್ತಿದ್ದರೆ, ಡೋಲೋ 650 ಮಾತ್ರೆ ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರಿಗೆ ತಿಳಿಸಿ.
ಡೋಲೋ 650 ಟ್ಯಾಬ್ಲೆಟ್ ಒಂದು ಸಾಮಾನ್ಯ ನೋವು ನಿವಾರಕವಾಗಿದ್ದು, ನೋವನ್ನು ಕಡಿಮೆ ಮಾಡಲು ಮತ್ತು ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಟ್ಯಾಬ್ಲೆಟ್ ಮೆದುಳಿನಲ್ಲಿ ನೋವು ಮತ್ತು ಜ್ವರವನ್ನು ಉಂಟುಮಾಡುವ ಕೆಲವು ರಾಸಾಯನಿಕಗಳನ್ನು ತಡೆಯತ್ತದೆ. ತಲೆನೋವು, ಮೈಗ್ರೇನ್, ನರ ನೋವು, ಹಲ್ಲುನೋವು, ಗಂಟಲು ನೋವು, ಮುಟ್ಟಿನ ನೋವು, ಕೀಲು ನೋವು ಮತ್ತು ಸ್ನಾಯು ನೋವು ನಿವಾರಣೆಗೆ ಇದು ಪರಿಣಾಮಕಾರಿಯಾಗಿದೆ
ಇದನ್ನು ಅತಿಯಾದ ಪ್ರಮಾಣದಲ್ಲಿ ಅಥವಾ ದೀರ್ಘಕಾಲದವರೆಗೆ ಸೇವಿಸಬೇಡಿ. ಏಕೆಂದರೆ ಇದು ಅಪಾಯಕಾರಿ. ಸಾಮಾನ್ಯವಾಗಿ, ನೀವು ಕಡಿಮೆ ಡೋಸೆಜ್ನ ಟ್ಯಾಬ್ಲೆಟ್ ತೆಗೆದುಕೊಳ್ಳಬೇಕು ಅದು ಅಲ್ಪಾವಧಿಗೆ ಪರಿಣಾಮಕಾರಿಯಾಗಿದೆ. ಗರ್ಭಾವಸ್ಥೆಯಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ನೋವು ನಿವಾರಣೆಗೆ ಇದನ್ನು ಬಳಸುತ್ತಾರೆ. ಈ ಔಷಧಿಯಿಂದ ಉಂಟಾಗುವ ಹೆಚ್ಚಿನ ಅಡ್ಡಪರಿಣಾಮಗಳ ಬಗ್ಗೆ ವೈದ್ಯರ ಬಳಿ ಸಲಹೆ ಪಡೆದುಕೊಳ್ಳಬೇಕು, ಔಷಧವನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ಅಡ್ಡಪರಿಣಾಮಗಳು ಕಡಿಮೆ. ಅಡ್ಡಪರಿಣಾಮಗಳು ಮುಂದುವರಿದರೆ ಅಥವಾ ರೋಗಲಕ್ಷಣಗಳು ಉಲ್ಬಣಗೊಂಡರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ
ಹಾಲುಣಿಸುವ ಸಮಯದಲ್ಲಿ ಬಳಸಲು Dolo-650 Tablet ಸುರಕ್ಷಿತವಾಗಿದೆ. ಈ ಔಷಧಿ ದೊಡ್ಡ ಪ್ರಮಾಣದಲ್ಲಿ ಎದೆ ಹಾಲಿಗೆ ಹಾದುಹೋಗುವುದಿಲ್ಲ ಮತ್ತು ಮಗುವಿಗೆ ಹಾನಿಕಾರಕವಲ್ಲ ಎಂದು ಅಧ್ಯಯನಗಳು ತೋರಿಸಿವೆ. Dolo 650 Tablet ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಲೇಬೇಕು. ಮೂತ್ರಪಿಂಡದ ಕಾಯಿಲೆ ಇರುವ ರೋಗಿಗಳು Dolo 650 Tablet ಅನ್ನು ಎಚ್ಚರಿಕೆಯಿಂದ ಬಳಸಬೇಕು.