ಜೀರಿಗೆ, ಸೋಂಪು ಮತ್ತು ಓಂ ಕಾಳು. ಸಾಮಾನ್ಯವಾಗಿ ಮೌತ್ ಫ್ರೆಶ್ನರ್ಗಳಾಗಿ ಜೀರಿಗೆ ಮತ್ತು ಸೋಂಪು, ಓಂ ಕಾಳನ್ನು ಬಹುತೇಕ ಮಂದಿ ಸೇವಿಸುತ್ತಾರೆ. ಆದರೆ ಅವು ಕೇವಲ ಬಾಯಿಯ ದುರ್ವಾಸನೆ ಹೋಗಲಾಡಿಸುವುದಷ್ಟೇ ಅಲ್ಲದೇ, ಊಟದ ನಂತರ ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ ಆಗಿದೆ. ಅದರಲ್ಲೂ ಈ ಮೂರು ಕಾಳುಗಳನ್ನು ಒಟ್ಟಿಗೆ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂಬುವುದರ ಬಗ್ಗೆ ಕೆಲವೊಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ.
ಪತ್ನಿಗೆ ಹೆದರಿಸಲು ವಿಡಿಯೋ ಕಾಲ್ ನಲ್ಲಿ ಸೂಸೈಡ್ ಗೆ ಯತ್ನಿಸಿದ್ದ ಜಿಮ್ ಟ್ರೈನರ್ ಡೆತ್….!
ಈ 3 ಕಾಳುಗಳನ್ನು ಒಟ್ಟಿಗೆ ತಿಂದರೆ ಅಧಿಕ ರಕ್ತದೊತ್ತಡ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ.
ಊಟದ ನಂತರ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಬಾಯಿಯ ದುರ್ವಾಸನೆ ದೂರವಾಗುತ್ತದೆ.
ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಕೆಲವರು ಮಾತ್ರೆಗಳು ಮತ್ತು ಟಾನಿಕ್ಗಳನ್ನು ಖರೀದಿಸಿ ಸೇವಿಸುತ್ತಾರೆ. ಆದರೆ ಇವುಗಳ ಬದಲಿಗೆ ನಿಮ್ಮ ಅಡುಗೆಮನೆಯಲ್ಲಿರುವ ಕೆಲ ನೈಸರ್ಗಿಕ ಬೀಜಗಳು ಮತ್ತು ಗಿಡಮೂಲಿಕೆಗಳನ್ನು ಬಳಸುವುದರಿಂದ ದೇಹಕ್ಕೆ ಯಾವುದೇ ರೀತಿಯ ಹಾನಿಯುಂಟಾಗುವುದಿಲ್ಲ.
ಅದರಲ್ಲೂ ಜೀರಿಗೆ, ಸೋಂಪು ಮತ್ತು ಓಂ ಕಾಳು ಜಗಿಯಿದಾಗ ಅವು ಕಾರ್ಮಿನೇಟಿವ್ ಗುಣಗಳನ್ನು ಹೊಂದಿದ್ದು, ದೇಹದಿಂದ ಅನಿಲವನ್ನು ಹೊರಹಾಕುವ ಮೂಲಕ ವಾಯು ಸಮಸ್ಯೆಯನ್ನು ನಿವಾರಿಸುತ್ತದೆ.
ಓಂ ಕಾಳು ಸಂಯುಕ್ತ ಮತ್ತು ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇವು ಜೀರ್ಣಾಂಗಗಳ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಸ್ನಾಯು ಸೆಳೆತವನ್ನು ನಿವಾರಿಸುತ್ತದೆ.
ಜೀರಿಗೆ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಅವು ನಾವು ಸೇವಿಸುವ ಆಹಾರವನ್ನು ಒಡೆಯುತ್ತವೆ ಮತ್ತು ದೇಹವು ಅದರ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಇದಲ್ಲದೇ ಫೆನ್ನೆಲ್ ಫೈಬರ್ ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಇದು ಕರುಳಿನ ಚಲನೆಯನ್ನು ನಿಯಮಿತವಾಗಿರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
ಈ ಮೂರು ಬೀಜಗಳನ್ನು 1 ಟೀ ಚಮಚದಲ್ಲಿ ಅಂದರೆ ದಿನಕ್ಕೆ ಸುಮಾರು 5 ಗ್ರಾಂನಷ್ಟು ಒಟ್ಟಿಗೆ ತೆಗೆದುಕೊಳ್ಳಬಹುದು. ಆದರೆ ಮೂರನ್ನೂ ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ ಅಥವಾ ಈ 3 ಕಾಳುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅವುಗಳನ್ನು ಒಂದು ಬಟ್ಟಲಿನಲ್ಲಿ ಬೆರೆಸಿ, ಬೇಕಾದಾಗ ತಿನ್ನಿ. ಆದರೆ ಯಾವುದೇ ತೊಂದರೆಯಾಗದಂತೆ ಸ್ವಲ್ಪ ಪ್ರಮಾಣದಲ್ಲಿ ತಿನ್ನಿ
ನಿಮ್ಮ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಗಣಿಸಿ ನಿಮ್ಮ ಆದ್ಯತೆಗೆ ಅನುಗುಣವಾಗಿ ನೀವು ಕ್ರಮೇಣ ಎಷ್ಟು ಬೇಕೋ ಅಷ್ಟನ್ನು ಸೇವಿಸಬಹುದು. ಆದರೆ ಈ ಬೀಜಗಳನ್ನು ನಿಯಮಿತವಾಗಿ ಸೇವಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ. ಅತಿಯಾದ ಸೇವನೆಯನ್ನು ತಪ್ಪಿಸುವುದು ಮುಖ್ಯ. ವಿಶೇಷವಾಗಿ ನೀವು ಯಾವುದಾದರೂ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ಗರ್ಭಿಣಿಯಾಗಿದ್ದರೆ ಅಥವಾ ನಿಮ್ಮ ಮಗುವಿಗೆ ಹಾಲುಣಿಸುತ್ತಿದ್ದರೆ ಇವುಗಳ ಸೇವನೆ ತಪ್ಪಿಸಿ. ಇಲ್ಲದಿದ್ದರೆ, ಹೊಟ್ಟೆಯ ಸಮಸ್ಯೆಗಳು ಗುಣವಾಗುವ ಬದಲು ಅವು ಉಲ್ಬಣಗೊಳ್ಳಬಹುದು.
ಹೊಟ್ಟೆಯುಬ್ಬರ, ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಾಗ ಈ ಕಾಳುಗಳನ್ನು ತಿಂದ ನಂತರವೇ ಆಹಾರ ಸೇವಿಸುವುದು ಉತ್ತಮ.