ಹಗಲಿಡೀ ಕಚೇರಿಗಳಲ್ಲಿ ಎಸಿ ಛಾಯೆಯಲ್ಲಿ ಕುಳಿತರೆ, ರಾತ್ರಿ ಮನೆಗೆ ಬಂದ ಮೇಲೂ ಎಸಿ ಹಾಕಿಕೊಳ್ಳುತ್ತೇವೆ. ಹವಾನಿಯಂತ್ರಣ ವ್ಯವಸ್ಥೆ ಇಲ್ಲದೆ ಹಗಲೂ ಇಲ್ಲ, ರಾತ್ರಿಯೂ ಇಲ್ಲ ಎನ್ನುವಷ್ಟು ಅದಕ್ಕೆ ಒಗ್ಗಿ ಹೋಗಿರುತ್ತೇವೆ. ಸಾಮಾನ್ಯ ದಿನಗಳಲ್ಲೇ ಇಷ್ಟಾದ ಮೇಲೆ ಬೇಸಿಗೆಯಲ್ಲಿ ಇನ್ನೆಷ್ಟಿರಬೇಡ ಇದರ ಬಳಕೆ? ಆದರೆ ಹೀಗೆ ಅತಿಯಾಗಿ ಎಸಿ ಬಳಸುವುದು ಒಳ್ಳೆಯದೇ? ಹಿಂದೊಮ್ಮೆ ಐಶಾರಾಮಿ ಎನಿಸಿದ್ದ ವಸ್ತುಗಳು ಈಗ ಅಗತ್ಯಗಳು ಎನಿಸಿರುವುದು ಹೌದು.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಬೇಕಾ, ತಣ್ಣೀರಾ?.. ಆರೋಗ್ಯಕ್ಕೆ ಇದು ಬೆಸ್ಟ್!
ಒಣ ಕಣ್ಣು ಮತ್ತು ಚರ್ಮ
ಎಸಿ ಇರುವಂಥ ಸ್ಥಳಗಳಲ್ಲಿ ತೇವಾಂಶ ಕಡಿಮೆ. ಜೊತೆಗೆ, ಅತಿಯಾಗಿ ಎಸಿ ಅಡಿಯಲ್ಲಿ ಕುಳಿತಿದ್ದರೆ ಬೇಸಿಗೆಯಲ್ಲಿ ದಾಹವೂ ಅಷ್ಟಾಗಿ ಕಾಡದೆ, ಕುಡಿಯುವ ನೀರಿನ ಪ್ರಮಾಣವೂ ಕಡಿಮೆ ಆಗಬಹುದು. ಇದರಿಂದ ಚರ್ಮವೆಲ್ಲ ಒಣಗಿದಂತಾಗುತ್ತದೆ. ಇದೇ ಮುಂದುವರೆದು ಸುಕ್ಕುಗಟ್ಟಿದಂತಾದೀತು. ಕಣ್ಣೂ ತೇವ ಕಳೆದುಕೊಂಡು ಶುಷ್ಕವಾಗಬಹುದು. ಇದರಿಂದ ಕಣ್ಣು ಕೆಂಪಾಗುವುದು, ತುರಿಕೆಯಂಥ ತೊಂದರೆಗಳು ಗಂಟು ಬೀಳಬಹುದು. ಹಾಗಾಗಿ ಎಸಿಯಿಂದ ಮಧ್ಯೆ ಬಿಡುವು ತೆಗೆದುಕೊಳ್ಳುವುದು ಸೂಕ್ತ. ಒಂದೊಮ್ಮೆ ಸತತವಾಗಿ ಎಸಿ ಬಳಸುವುದು ಅನಿವಾರ್ಯ ಎಂದಾದರೆ, ವಾತಾವರಣದ ತೇವ ಹೆಚ್ಚಿಸುವ ಹ್ಯುಮಿಡಿಫಯರ್ ಸಹ ಬಳಸುವುದು ಜಾಣತನ
ಶ್ವಾಸಕೋಶದ ತೊಂದರೆಗಳು
ಹವಾನಿಯಂತ್ರಕ ನೀಡುವಂಥ ಶುಷ್ಕವಾದ ತಣ್ಣನೆಯ ಗಾಳಿಯು ಶ್ವಾಸಕೋಶಗಳಿಗೆ ಕಿರಿಕಿರಿ ನೀಡಬಹುದು. ಇದರಿಂದ ಅಲರ್ಜಿಗಳು, ಅಸ್ತಮಾ ಮತ್ತು ಶ್ವಾಸಕೋಶದ ಸೋಂಕಿನ ತೊಂದರೆ ಉಲ್ಭಣಿಸಬಹುದು. ಜೊತೆಗೆ ದೀರ್ಘ ಕಾಲದವರೆಗೆ ಎಸಿಯ ತಣ್ಣನೆಯ ಗಾಳಿಗೆ ಒಡ್ಡಿಕೊಂಡಾಗ ಫ್ಲೂ ಮಾದರಿಯ ಶೀತ, ಜ್ವರವನ್ನು ಅಂಟಿಸಿಕೊಳ್ಳುವ ಸಾಧ್ಯತೆಗಳೂ ಅಧಿಕ. ಇಂಥ ಸಮಸ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶವಿದ್ದರೆ, ಎಸಿ ಫಿಲ್ಟರ್ಗಳನ್ನು ಸ್ವಚ್ಛವಾಗಿ ಇರಿಸಬೇಕು. ಉಷ್ಣತೆಯ ಏರಿಳಿತವನ್ನು ಕ್ರಮೇಣ ಮಾಡುವುದೊಳಿತು. ಜೊತೆಗೆ ಏರ್ ಪ್ಯೂರಿಫಯರ್ ಬಳಸುವ ಬಗ್ಗೆ ಯೋಚಿಸುವುದು ಸೂಕ್ತ
ದೀರ್ಘ ಕಾಲ ಹವಾ ನಿಯಂತ್ರಕದ ಅಡಿಯಲ್ಲಿ ಇರುವುದರಿಂದ ದೇಹದ ಉಷ್ಣತೆ ಕುಸಿಯುತ್ತದೆ. ಇದರಿಂದ ಸ್ನಾಯುಗಳಲ್ಲಿ ನೋವು, ಕೀಲುಗಳು ಬಿಗಿಯಾಗುವುದು ಮುಂತಾದ ತೊಂದರೆಗಳು. ಅದರಲ್ಲೂ ಇಂಥ ತೊಂದರೆಗಳು, ಮೂಳೆ-ಸ್ನಾಯುಗಳಲ್ಲಿ ನೋವು ಈಗಾಗಲೇ ಇದ್ದವರು ಈ ಬಗ್ಗೆ ಎಚ್ಚರ ವಹಿಸುವುದು ಒಳಿತು. ಎಸಿ ವಾತಾವರಣಕ್ಕೆ ಸೂಕ್ತವಾದಂಥ ವಸ್ತ್ರಗಳನ್ನು ಧರಿಸಬೇಕು. ಆಗೀಗ ಲಘುವಾದ ವ್ಯಾಯಾಮಗಳನ್ನು ಮಾಡುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಚೆನ್ನಾಗಿ ನೀರು ಕುಡಿಯುವುದು ಸಹ ಅಗತ್ಯ