ಇಂದಿನ ಕೆಟ್ಟ ಜೀವನಶೈಲಿಯಿಂದ ಬೆನ್ನು ನೋವು ಮತ್ತು ಒತ್ತಡ ಸಮಸ್ಯೆ ಸಾಮಾನ್ಯವಾಗಿದೆ. ಇತ್ತೀಚೆಗೆ ವಯಸ್ಸಿನ ಅಂತರವೂ ಸಹ ಇಲ್ಲದೇ ಅನೇಕ ಮಂದಿಯನ್ನು ಈ ಸಮಸ್ಯೆ ಕಾಡುತ್ತಿದೆ.
ಚೆನ್ನಮ್ಮ ಸಂಗ್ರಾಮಕ್ಕೆ 200 ವರ್ಷ: ಅಂಚೆ ಚೀಟಿ ಬಿಡುಗಡೆ ಮಾಡಿದ ಕೇಂದ್ರಕ್ಕೆ ಜೋಶಿ ಅಭಿನಂದನೆ!
ಯಾರು ಸರಿಯಾಗಿ ಕುಳಿತುಕೊಳ್ಳುವುದಿಲ್ಲ ಅಥವಾ ಕುಳಿತುಕೊಳ್ಳುವ ಭಂಗಿ ಸರಿಯಾಗಿಲ್ಲವೋ ಅಂತಹವರು ಬೆನ್ನು ನೋವಿನ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೀವು ಕೂಡ ಬೆನ್ನು ನೋವಿನಿಂದ ಬಳಲುತ್ತಿದ್ದರೆ, ನಾವಿಂದು ತಿಳಿಸುವ ಕೆಲ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಬೆನ್ನು ನೋವಿನಿಂದ ಶೀಘ್ರವೇ ಪರಿಹಾರ ಪಡೆಯಬಹುದು.
ಹೆಚ್ಚಿನವರಲ್ಲಿ ಬೆನ್ನು ನೋವು ಸಾಮಾನ್ಯವಾಗಿದ್ದು ಸುಮಾರು 82% ದಷ್ಟು ಜನರು ಬೆನ್ನಿನ ಕೆಳಭಾಗದಲ್ಲಿ ವಿಪರೀತ ನೋವು ಅನುಭವಿಸುತ್ತಾರೆ ಎಂಬುದು ತಿಳಿದು ಬಂದಿದೆ. ಬೆನ್ನು ನೋವು ಯಾವ ತರಹದ್ದಾದರೂ ಅದಕ್ಕೆ ಪರಿಹಾರವಿದ್ದು ಅದನ್ನು ನೀವು ಒಮ್ಮೆ ಟ್ರೈ ಮಾಡಲೇಬೇಕು.
ಬೆನ್ನು ನೋವು ವಿಪರೀತವಾಗಿದ್ದರೆ ಒಮ್ಮೆ ನೀವು ನಡೆಯುವ, ಕುಳಿತುಕೊಳ್ಳುವ ಭಂಗಿಯ ಮೇಲೆ ಯೋಚಿಸಿ. ಆದಷ್ಟು ಕುಳಿತುಕೊಳ್ಳುವಾಗ ಬೆನ್ನಿಗೆ ಆಧಾರವಾಗಿರುವ ಕುರ್ಚಿಯ ಮೇಲೆ ಆಸೀನರಾಗಿ, ಆದಷ್ಟು ಕುತ್ತಿಗೆಯನ್ನು ಮೇಲ್ಮುಖವಾಗಿ ಇರಿಸಿ ಕೆಳಮುಖವಾಗಿ ಇರಿಸಿಕೊಳ್ಳದಿರಿ
ಡೆಸ್ಕ್ನಲ್ಲಿ ವರ್ಕ್ ಮಾಡುವವರು ನಿವಾಗಿದ್ದರೆ ನಿಮ್ಮ ಮೊಣಕೈ ಡೆಸ್ಕ್ನ ಎತ್ತರದಲ್ಲಿರಬೇಕು ಹಾಗೂ ಡೆಸ್ಕ್ನ ಕೆಳಭಾಗಕ್ಕೆ ನಿಮ್ಮ ಚೇರ್ ಅನ್ನು ಇರಿಸಿ. ಬೆನ್ನಿಗೆ ಬೆಂಬಲವಾಗಿ ತಲೆದಿಂಬು ಅಥವಾ ಟವೆಲ್ ರೋಲ್ ಅನ್ನು ಇರಿಸಿಕೊಳ್ಳಿ.
ಬೆನ್ನಿನ ಹಿಂಭಾಗದ ಸ್ನಾಯುಗಳಿಗೆ ವಿಶ್ರಾಂತಿ ನೀಡುವಾಗ ಫೋಲ್ ರೋಲರ್ ಉತ್ತಮ ಆಯ್ಕೆಯಾಗಿದೆ. ಇದು ಮಸಾಜರ್ನಂತೆ ಕೆಲಸ ಮಾಡಿ ಬೆನ್ನಿಗೆ ಉತ್ತಮ ಪರಿಹಾರ ನೀಡುತ್ತದೆ.
ಫೋಮ್ ರೋಲರ್ ಬಳಸಿ ವಿವಿಧ ವ್ಯಾಯಾಮಗಳನ್ನು ಮಾಡಬಹುದಾಗಿದ್ದು, ಯೂಟ್ಯೂಬ್ನಲ್ಲಿ ನಿಮಗೆ ಬೇರೆ ಬೇರೆ ವ್ಯಾಯಾಮ ವಿಧಗಳು ದೊರೆಯಲಿವೆ. ಒಂದು ವ್ಯಾಯಾಮದ ಕುರಿತು ಹೇಳುವುದಾದರೆ ಹಿಂಭಾಗದಲ್ಲಿ ಮಲಗಿ ಹಾಗೂ ಮೊಣಕಾಲುಗಳನ್ನು ಮಡಚಿ.
ನಿಮ್ಮ ಬೆನ್ನಿನ ಕೆಳಗೆ ಟೆನ್ನೀಸ್ ಬಾಲ್ ಅನ್ನು ಇರಿಸಿಕೊಳ್ಳಿ ಹಾಗೂ 20 ರಿಂದ 30 ಸೆಕೆಂಡ್ಗಳ ಕಾಲ ಹಾಗೆಯೇ ಇದನ್ನಿರಿಸಿಕೊಳ್ಳಿ.
ಇನ್ನಷ್ಟು ಒತ್ತಡ ಸೃಷ್ಟಿಸಲು, ಟೆನ್ನೀಸ್ ಬಾಲ್ ಮೇಲೆ ಮಲಗುತ್ತಲೇ ನಿಮ್ಮ ದೇಹವನ್ನು ಅತ್ತಿತ್ತ ತಿರುಗಿಸಿ. ಒಂದು ಮೊಣಕಾಲಿನ ವಿರುದ್ಧವಾಗಿ ಹಿಮ್ಮಡಿಯನ್ನು ಓರೆಯಾಗಿಸಿಕೊಂಡು ನೀವು ಬೆನ್ನಿಗೆ ಒತ್ತಡ ನೀಡಬಹುದು.
ಬೆನ್ನಿಗೆ ಬೆಚ್ಚಗಿನ ಮಸಾಜ್ ನೀಡುವುದು ಕೂಡ ಬೆನ್ನು ನೋವನ್ನು ಶಮನ ಮಾಡುತ್ತದೆ.
ಹಾಟ್ ಬಾಟಲ್ ಅನ್ನು ನೋವಿರುವ ಸ್ಥಳದಲ್ಲಿ ಇರಿಸಿ ಹಾಗೂ ಇದು ಬೆನ್ನು ನೋವಿಗೆ ತಕ್ಷಣದ ಪರಿಹಾರ ನೀಡುತ್ತದೆ.
ಆದಷ್ಟು ಸಮತೋಲನಕರ ಊಟ ತಿಂಡಿ ಮಾಡುವುದು ಕೂಡ ಬೆನ್ನು ನೋವನ್ನು ಶಮನ ಮಾಡುತ್ತದೆ. ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನೀಡುವತ್ತ ಗಮನ ಹರಿಸಿ ಇದು ಬೆನ್ನಿಗೆ ಸಾಕಷ್ಟು ಶಕ್ತಿ ನೀಡಿ ತನ್ನಷ್ಟಕ್ಕೆ ನೋವನ್ನು ಪರಿಹರಿಸುತ್ತದೆ
ರಾತ್ರಿ ಮಲಗುವ ಸಮಯದಲ್ಲಿ ನೀವು ಬಳಸುವ ಹಾಸಿಗೆ ದಿಂಬಿನ ಬಗ್ಗೆ ಗಮನ ಹರಿಸಿ. ನಿಮ್ಮ ದೇಹಕ್ಕೆ ಬೆಂಬಲ ನೀಡುವ ಕುಶನ್ಗಳನ್ನು ಮಾತ್ರ ಬಳಸಿ. ಆದಷ್ಟು ನೇರವಾಗಿ ಮಲಗಲು ಪ್ರಯತ್ನಿಸಿ ಹೆಚ್ಚು ದಿಂಬುಗಳನ್ನು ಬಳಸದಿರಿ
ಆದಷ್ಟು ಬೆನ್ನಿನ ಸ್ನಾಯುಗಳಿಗೆ ಚಲನೆ ನೀಡುವ ವ್ಯಾಯಾಮಗಳನ್ನು ಪ್ರಯತ್ನಿಸಿ. ಈ ವ್ಯಾಯಾಮಗಳು ಬೆನ್ನು ನೋವಿನಿಂದ ಪರಿಹಾರ ನೀಡುತ್ತದೆ. ಆದಷ್ಟು ನೋವಿರುವಾಗ ಕೂಡ ವಿಪರೀತವಾಗಿ ದೇಹವನ್ನು ಬಗ್ಗಿಸುವುದು, ದಂಡಿಸುವುದು ಮಾಡದಿರಿ.