ಪತಿ, ಪತ್ನಿಯ ನಡುವಿನ ಸಂಬಂಧ ಒಂದು ಪವಿತ್ರವಾದ ಬಂಧವಾಗಿದೆ. ಅದು ಲವ್ಮ್ಯಾರೇಜ್ ಆಗಿರಲೀ ಅಥವಾ ಅರೇಂಜ್ಡ್ ಮ್ಯಾರೇಜ್ ಆಗಿರಲಿ ಮದುವೆಯಾದ ಕೆಲವು ವರ್ಷಗಳ ನಂತರ ಸಣ್ಣ ಪುಟ್ಟ ಜಗಳಗಳು ಕಾಡುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಅದು ಅದು ದೊಡ್ಡದಾಗಿ ಬೆಳೆಯುತ್ತದೆ. ವಿವಾಹದ ನಂತರ ಈ ಪರಿಸ್ಥಿತಿ ಬರಬಾರದೆಂದರೆ ಮದುವೆ ಆಗುವ ಮುನ್ನ ನಿಮ್ಮ ಸಂಗಾತಿಗೆ ನೀವು ಈ ಕೆಲವು ಪ್ರಶ್ನೆಗಳನ್ನು ಕೇಳಬೇಕು.
ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ಸ್ ಪೆಕ್ಟರ್!
ಮದುವೆಯಾಗಲು ಹೊರಟಿರುವ ಗಂಡು ಹೆಣ್ಣು ಇಬ್ಬರೂ ಕೂಡ ನಿಖರವಾದ ವಯಸ್ಸನ್ನು ಕೇಳಿ ತಿಳಿದುಕೊಳ್ಳುವುದು ಬಹಳ ಮುಖ್ಯ. ದಂಪತಿಗಳು ಮದುವೆಗೆ ಸರಿಯಾದ ವಯಸ್ಸಿನ ಅಂತರವನ್ನು ಹೊಂದಿದ್ದರೆ ಪರಸ್ಪರ ಹೊಂದಾಣಿಕೆ ಇರುತ್ತದೆ. ದೀರ್ಘವಾದ ವಯಸ್ಸಿನ ಅಂತರವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ವಯಸ್ಸಿನ ಅಂತರದಿಂದ ಇಬ್ಬರ ಯೋಚನಾಲಹರಿಯು ವಿಭಿನ್ನವಾಗಿರುವ ಸಂಬಂಧವು ಬೇಗನೇ ಮುರಿದು ಬೀಳಬಹುದು. ಎಷ್ಟೋ ಜನರ ವೈವಾಹಿಕ ಜೀವನದಲ್ಲಿ ವಯಸ್ಸಿನ ಅಂತರವು ಸಂಬಂಧ ಮುರಿಯಲು ಕಾರಣವಾಗಿದೆ. ಹೀಗಾಗಿ ನೀವು ಮದುವೆಯಾಗಲು ಹೊರಟಿದ್ದರೆ, ಸೂಕ್ತವಾದ ವಯಸ್ಸಿನ ಅಂತರವಿದೆ ಎಂದು ತಿಳಿದುಕೊಳ್ಳುವುದು ಇಬ್ಬರಿಗೂ ಬಹಳ ಮುಖ್ಯ ಎಂದಿದ್ದಾನೆ ಚಾಣಕ್ಯ.
ಆರೋಗ್ಯದ ಸ್ಥಿತಿ ಬಗ್ಗೆ ತಿಳಿಯಿರಿ :
ಚಾಣಕ್ಯರ ಪ್ರಕಾರ ನೀವು ಮದುವೆಯಾಗಲಿರುವ ಹುಡುಗ ಅಥವಾ ಹುಡುಗಿಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲೇ ಬೇಕು ಎಂದಿದ್ದಾನೆ. ನೀವು ಮದುವೆಯಾಗಲು ಹೊರಟಿರುವ ಹುಡುಗ ಅಥವಾ ಹುಡುಗಿಗೆ ದೈಹಿಕ ಅಥವಾ ಮಾನಸಿಕ ಸಮಸ್ಯೆ ಇದೆಯೇ? ಖಚಿತ ಪಡಿಸಿಕೊಳ್ಳಿ, ಇಲ್ಲದಿದ್ದರೆ ನೀವು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯ ಸಮಸ್ಯೆಗಳೇ ಸಂಬಂಧವು ಮುರಿದು ಬೀಳಲು ಪ್ರಮುಖ ಕಾರಣವಾಗಬಹುದು.
ಮದುವೆಯಾಗಲಿರುವಾಗ, ಸಂಗಾತಿಯೂ ನೀವು ಸಿಗುವ ಮುನ್ನ ಹಳೆಯ ಸಂಬಂಧವನ್ನು ಹೊಂದಿದ್ದರೆ ಆ ಬಗ್ಗೆಯೂ ಕೇಳಿ ತಿಳಿದುಕೊಳ್ಳಿ ಎನ್ನುವುದು ಚಾಣಕ್ಯನ ಸಲಹೆಯಾಗಿದೆ. ಸಂಗಾತಿಯ ಬಳಿ ಪ್ರಶ್ನೆ ಕೇಳುವಾಗ ಆ ಸಂಬಂಧವು ಮುರಿದು ಬೀಳಲು ಕಾರಣ, ಈಗ ಆ ವ್ಯಕ್ತಿಯೊಂದಿಗೆ ಸ್ನೇಹ ಸಂಬಂಧವನ್ನು ಮುಂದುವರೆಸಿದ್ದೀರಾ ಹೀಗೆ ಎಲ್ಲದಕ್ಕೂ ಉತ್ತರ ಕಂಡುಕೊಳ್ಳುವುದು ಬಹಳ ಮುಖ್ಯ. ಇದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಅನುಮಾನ ಮೂಡದಂತೆ ಮಾಡುತ್ತದೆ.