ಬೆಂಗಳೂರು: ಚಿನ್ನ ಮಾಡಿಸಿಕೊಳ್ಳಬೇಕು ಎಂದಾದರೆ ಬೆಲೆ ಇಳಿಕೆಯಾಗುವುದು ಮುಖ್ಯವಾಗಿದೆ. ಆದರೂ ಒಮ್ಮೊಮ್ಮೆ ಪರಿಸ್ಥಿತಿಗೆ ಕಟ್ಟುಬಿದ್ದು ಬೆಲೆ ಏರಿಕೆಯ ಸಮಯದಲ್ಲೇ ಸಾಕಷ್ಟು ಗ್ರಾಹಕರು ಚಿನ್ನ ಖರೀದಿಸುತ್ತಾರೆ. ಬೆಲೆ ತಗ್ಗಿದರೆ ನಮಗೊಂದಿಷ್ಟು ಲಾಭವಿತ್ತೆಂದು ಸಾಕಷ್ಟು ಜನ ಈ ಸಮಯದಲ್ಲಿ ಭಾವಿಸುತ್ತಾರೆ. ಚಿನ್ನದ ಮಾರುಕಟ್ಟೆಯೇ ಹಾಗೆ ಬೆಲೆ ಯಾವಾಗ ಏರುತ್ತದೆ? ಯಾವಾಗ ಇಳಿಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಚಿನ್ನ ಖರೀದಿಗೂ ಮುನ್ನ ಇಂದಿನ ರೇಟ್ ಹೇಗಿದೆ ಎಂಬುದನ್ನು ತಿಳ್ಕೊಳ್ಳೋಣ
ನೀವು ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಾವಿನ ಎಲೆಯಿಂದ ಈ ಒಂದು ಕೆಲಸ ಮಾಡಿ ಸಾಕು..!
ಈ ವಾರದಲ್ಲಿ ಹೆಚ್ಚಿನ ದಿನ ಚಿನ್ನದ ಬೆಲೆ ಹೆಚ್ಚಳಗೊಂಡಂತಾಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,045 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 8,777 ರೂಗೆ ಏರಿದೆ. 18 ಕ್ಯಾರಟ್ ಆಭರಣ ಚಿನ್ನದ ಬೆಲೆ 6,582 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಕಳೆದ ಕೆಲ ವಾರಗಳಿಂದ ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 80,450 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 87,770 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,050 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 80,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,050 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 23ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,450 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,770 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,820 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,005 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,450 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,770 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,005 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 80,450 ರೂ
- ಚೆನ್ನೈ: 80,450 ರೂ
- ಮುಂಬೈ: 80,450 ರೂ
- ದೆಹಲಿ: 80,600 ರೂ
- ಕೋಲ್ಕತಾ: 80,450 ರೂ
- ಕೇರಳ: 80,450 ರೂ
- ಅಹ್ಮದಾಬಾದ್: 80,500 ರೂ
- ಜೈಪುರ್: 80,600 ರೂ
- ಲಕ್ನೋ: 80,600 ರೂ
- ಭುವನೇಶ್ವರ್: 80,450 ರೂ