ಸಾಮಾನ್ಯವಾಗಿ ಚಿಕ್ಕನಿಂದಿನಿಂದಲೂ ಎಲ್ಲರಿಗೂ ಮೊಸರಿನಲ್ಲಿ ಈರುಳ್ಳಿಯನ್ನು ಬೆರಸಿ ತಿನ್ನುವ ಅಭ್ಯಾಸ ಇರುತ್ತದೆ. ಪುಲವ್ ಬಿರಿಯಾನಿ ಹೀಗೆ ಮೊಸರು ಬಜ್ಜಿ ಎಂಬ ಹೆಸರಿನಲ್ಲಿ ನಾವು ಪ್ರತಿನಿತ್ಯ ಮೊಸರಿನೊಂದಿಗೆ ಈರುಳ್ಳಿಯನ್ನು ಸೇವಿಸುತ್ತೇವೆ. ಆದರೆ, ಈ ರೀತಿ ಮೊಸರಿನೊಂದಿಗೆ ಈರುಳ್ಳಿಯನ್ನು ಸೇವಿಸುವುದರಿಂದ ಇದು ನಿಮ್ಮ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂಬುದು ನಿಮಗೆ ಗೊತ್ತಾ?
Health Tips: ಸಣ್ಣ ಆಗಲು ಪ್ರಯತ್ನ ಪಡ್ತಿದ್ದೀರಾ!? ಹಾಗಿದ್ರೆ ನಿತ್ಯ ಇದನ್ನು ಕುಡಿಯಿರಿ!
ಎಷ್ಟೋ ಮಹಿಳೆಯರು ಈರುಳ್ಳಿ ಇಲ್ಲದೇ ಅಡುಗೆ ಮಾಡುವುದೇ ಇಲ್ಲ. ಅನೇಕ ಮಂದಿ ಆಹಾರಕಷ್ಟೇ ಅಲ್ಲದೇ, ಮಜ್ಜಿಗೆ, ಮೊಸರಿಗೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಮಿಕ್ಸ್ ಮಾಡಿ ಸೇವಿಸುತ್ತಾರೆ. ಅದರಲ್ಲೂ ಮೊಸರನ್ನ ಜೊತೆಗೆ ಈರುಳ್ಳಿ ಬೆಸ್ಟ್ ಕಾಂಬಿನೇಷನ್ ಆಗಿದ್ದು, ಸಾಮಾನ್ಯವಾಗಿ ಎಲ್ಲರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ, ವಾಸ್ತವವಾಗಿ ಮೊಸರಿಗೆ ಈ ರೀತಿ ಈರುಳ್ಳಿ ಬೆರೆಸಿ ತಿನ್ನುವುದು ಒಳ್ಳೆಯದೇ? ಅಷ್ಟಕ್ಕೂ ಮೊಸರಿನೊಂದಿಗೆ ಈರುಳ್ಳಿ ಬೆರೆಸಿ ತಿನ್ನುವುದರಿಂದ ಸಿಗುವ ಪ್ರಯೋಜನಗಳು ಮತ್ತು ಅನಾನುಕೂಲಗಳು ಏನು ಅಂತ ತಿಳಿಯೋಣ.
ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ: ಈರುಳ್ಳಿ ಮತ್ತು ಮೊಸರಿನ ಕಾಂಬಿನೇಷನ್ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುವುದಲ್ಲದೇ ಹೊಟ್ಟೆಯ ಕಿರಿಕಿರಿ, ಗ್ಯಾಸ್ ಮತ್ತು ಇತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ವಿಶೇಷವಾಗಿ ರಾತ್ರಿ ಹೊತ್ತು ಈರುಳ್ಳಿಯನ್ನು ಮೊಸರಿನೊಂದಿಗೆ ಬೆರೆಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ
ಆಯುರ್ವೇದದ ಪ್ರಕಾರ ರಾತ್ರಿ ಹೊತ್ತು ಮೊಸರು ತಿನ್ನುವುದರಿಂದ ಕಫ ಸಮಸ್ಯೆ ಹೆಚ್ಚಾಗುತ್ತದೆ. ಇದು ಶೀತ, ಕೆಮ್ಮು ಮತ್ತು ಕಫದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಈರುಳ್ಳಿಯಲ್ಲಿರುವ ಫೈಬರ್ ಮತ್ತು ಸಲ್ಫರ್ ಸಂಯುಕ್ತಗಳು ಮೊಸರು ಹುದುಗುವಿಕೆಯನ್ನು ತಡೆಯುತ್ತದೆ. ಇದು ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗುತ್ತದೆ.
ಮೊಸರು ಮತ್ತು ಈರುಳ್ಳಿಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದರೂ ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುವುದಲ್ಲದೇ, ಚರ್ಮದ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ತಜ್ಞರು ಹೇಳಲಾಗುತ್ತದೆ.
ಪ್ರತ್ಯೇಕವಾಗಿ ತಿನ್ನೋದು ಉತ್ತಮ: ಈರುಳ್ಳಿಯನ್ನು ಮೊಸರಿನಲ್ಲಿ ಬೆರೆಸದೇ ತಿನ್ನುವುದು ಉತ್ತಮ. ಹುದುಗುವಿಕೆಯಿಂದಾಗಿ ಮೊಸರು ಮತ್ತು ಈರುಳ್ಳಿ ಮಿಶ್ರಣವು ವಿಷಕಾರಿಯಾಗುತ್ತದೆ. ಈ ಸಂಯೋಜನೆಯಲ್ಲಿರುವ ಪ್ರೋಬಯಾಟಿಕ್ಗಳು ಆಹಾರದಲ್ಲಿನ ಲ್ಯಾಕ್ಟೋಸ್ ಮತ್ತು ಇತರ ಘಟಕಗಳನ್ನು ಒಡೆಯುತ್ತವೆ. ಮತ್ತೊಂದೆಡೆ, ಈರುಳ್ಳಿಯಲ್ಲಿರುವ ಫೈಬರ್ ಮತ್ತು ಸಲ್ಫರ್ ಸಂಯುಕ್ತವು ಹುದುಗುವಿಕೆಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ. ಇದರ ಪರಿಣಾಮದಿಂದಾಗಿ, ಈ ಮಿಶ್ರಣವು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆ: ಈರುಳ್ಳಿಯಲ್ಲಿರುವ ಸಂಯುಕ್ತಗಳು ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಆಮ್ಲೀಯತೆಯ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಈರುಳ್ಳಿಯನ್ನು ಮೊಸರಿನೊಂದಿಗೆ ಬೆರೆಸಿದಾಗ ಅದು ಆಮ್ಲೀಯವಾಗುತ್ತದೆ. ಇದರಿಂದ ಕೆಲವರಲ್ಲಿ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು.
ಬಲವಾದ ಸುವಾಸನೆಯ: ಮೊಸರಿಗೆ ಈರುಳ್ಳಿ ಸೇರಿಸುವುದರಿಂದ ಮೊಸರಿನ ನೈಸರ್ಗಿಕ ಪರಿಮಳವನ್ನು ಬದಲಾಯಿಸುತ್ತದೆ. ಈರುಳ್ಳಿ ಬಲವಾದ, ಕಟುವಾದ ಪರಿಮಳವನ್ನು ಹೊಂದಿರುತ್ತದೆ. ಇದು ಸುವಾಸನೆಯನ್ನು ಹಾಳುಮಾಡುತ್ತದೆ. ಹಸಿ ಈರುಳ್ಳಿ ರುಚಿಕರ ಆಹಾರಗಳ ರುಚಿಯನ್ನೂ ಹಾಳು ಮಾಡುತ್ತದೆ.
ಪೋಷಕಾಂಶಗಳ ನಾಶ: ಈರುಳ್ಳಿ ಮತ್ತು ಮೊಸರು ಒಟ್ಟಿಗೆ ತಿಂದರೆ ಅವುಗಳಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಜೀರ್ಣಕಾರಿ ಅಸ್ವಸ್ಥತೆಗಳು ಸಹ ಹೆಚ್ಚಾಗುತ್ತವೆ. ಈರುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ಇದಕ್ಕೆ ಮುಖ್ಯ ಕಾರಣ. ಇದು ಮೊಸರಿನಲ್ಲಿರುವ ಕ್ಯಾಲ್ಸಿಯಂನಂತಹ ಕೆಲವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ತಜ್ಞರು ಈರುಳ್ಳಿ ಮತ್ತು ಮೊಸರನ್ನು ಮಿತವಾಗಿ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ
ಆದರೆ, ಈರುಳ್ಳಿ ಮತ್ತು ಮೊಸರು ಎರಡನ್ನೂ ಪ್ರತ್ಯೇಕವಾಗಿ ಆಹಾರವಾಗಿ ಸೇವಿಸಿದರೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಈರುಳ್ಳಿಯಲ್ಲಿ ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ಗಳು ಸಮೃದ್ಧವಾಗಿವೆ. ಮೊಸರು ಪ್ರೋಟೀನ್, ಕ್ಯಾಲ್ಸಿಯಂ, ಜೀವಸತ್ವಗಳು ಮತ್ತು ಪ್ರೋಬಯಾಟಿಕ್ಗಳಲ್ಲಿ ಸಮೃದ್ಧವಾಗಿದೆ. ಆದರೆ ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.