ಬಿಗ್ ಬಾಸ್ ಮನೆಯ ಆಟ ಇದೀಗ 85 ದಿನಗಳನ್ನ ಪೂರೈಸಿದೆ. ಈ ವಾರಾಂತ್ಯದ ಎಪಿಸೋಡ್ನಲ್ಲಿ ಯಾರು ಟಾಪ್ 3ರಲ್ಲಿ ಇರುತ್ತಾರೆ ಎಂದು ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದ್ದರು. ಆಗ ಮೈಕಲ್ (Michael Ajay) ಅವರು ಟಾಪ್ 3ರಲ್ಲಿ ಸಂಗೀತಾ ಇರುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ, ಈ ಸೀಸನ್ನಲ್ಲಿ ಹೆಣ್ಣು ಮಕ್ಕಳನ್ನು ಫುಶ್ ಮಾಡಲಾಗ್ತಿದೆ ಎಂಬ ಅಭಿಪ್ರಾಯವನ್ನು ಮೈಕಲ್ ಅಜಯ್ ಹೊರಹಾಕಿದ್ದರು. ಇದಕ್ಕೆ ಸುದೀಪ್ (Sudeep) ಕ್ಲ್ಯಾರಿಟಿ ನೀಡಿದ್ದಾರೆ.
ಕಿಚ್ಚನ ಮುಂದೆಯೇ ಹೆಣ್ಣು ಮಕ್ಕಳನ್ನು (Female Contestants) ಫುಶ್ ಮಾಡಲಾಗುತ್ತಿದೆ ಎಂದು ಮೈಕಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಿಯಾಲಿಟಿ ಶೋಗೆ ಬೇಕಾದ ಗುಣ ಸಂಗೀತಾ ಅವರಿಗೆ ಇದೆ. ಸಂಗೀತಾ ತುಂಬ ಜೋರಾದ ಧ್ವನಿಯಿದ್ದು, ಅಭಿಪ್ರಾಯವನ್ನು ಹೇಳುತ್ತಾರೆ. ಕೆಲವೊಂದು ಮೂಮೆಂಟ್ಸ್ಗಳನ್ನ ಸೃಷ್ಟಿ ಮಾಡುತ್ತಾಳೆ. ಅದು ಅದೃಷ್ಟವೇ? ಅಥವಾ ಪ್ರತಿಭೆಯೇ ಎಂದು ನನಗೆ ಗೊತ್ತಿಲ್ಲ. ತುಕಾಲಿ ಸಂತು ಹೇಳಿದ ಪ್ರಕಾರ, ಈ ಸೀಸನ್ನಲ್ಲಿ ಹೆಚ್ಚು ಒತ್ತು ಮಹಿಳೆಯರಿಗಿದೆ ಅಂತ ಅನಿಸುತ್ತದೆ ಎಂದು ಮೈಕಲ್ ಹೇಳಿದ್ದಾರೆ
ಬಳಿಕ ಮೈಕಲ್ (Michael) ಹೇಳಿದ ಮಾತಿಗೆ ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ. ಆಗ ಮೈಕಲ್ ಅವರು ವಿವರಣೆ ನೀಡಿದ್ದು, ಶ್ರುತಿ ಮೇಡಂ ಅವರು ನಾನು ಬಿಗ್ ಬಾಸ್ ಗೆದ್ದಿದ್ದೇ ಲಾಸ್ಟ್. ಈ ಬಾರಿ ಹೆಣ್ಣು ಮಕ್ಕಳು ಗೆಲ್ಲಬೇಕು ಅಂತ ಅವರು ಹೇಳಿದ್ರು. ಪಾಲಕರು ಕೂಡ ಹೆಣ್ಣು ಮಕ್ಕಳಿಗೆ ಮತ ಹಾಕುತ್ತಿದ್ರು ಎಂದು ಹೇಳಿದ್ದಾರೆ.
ಬಿಗ್ ಬಾಸ್ ಶೋನಲ್ಲಿ ಇಲ್ಲಿಯವರೆಗೆ ಮಹಿಳಾ ಸ್ಪರ್ಧಿಯಾಗಿ ಶ್ರುತಿ ಅವರು ಟ್ರೋಫಿ ಪಡೆದಿದ್ದಾರೆ. ಹೀಗಾಗಿ ಅವರು ಕೂಡ ಆಸೆ ಪಟ್ಟಿರುತ್ತಾರೆ. ಮನೆಯವರು ಆಸೆ ಪಟ್ಟಿರಬಹುದು. ಆದರೆ ಇಲ್ಲಿ ಪುರುಷ, ಮಹಿಳಾ ತಾರತಮ್ಯ ಅಂತ ಬರೋದಿಲ್ಲ. ಒಂದು ಸೀಸನ್ನಲ್ಲಿ ಶ್ರುತಿ ಗೆದ್ದರು ಅಂತ ಉಳಿದ 8 ಸೀಸನ್ಗಳಲ್ಲಿ ಪುರುಷರಿಗೆ ಆದ್ಯತೆ ಕೊಡಲಾಯ್ತು ಅಲ್ಲ ಅಂತ. ಇಲ್ಲಿಯವರೆಗೆ ಓರ್ವ ಮಹಿಳೆ ಗೆದ್ದಿದ್ದರಿಂದ ಈ ಬಾರಿಯೂ ಮಹಿಳೆ ಗೆಲ್ಲಬೇಕು ಅಂತ ಅಲ್ಲ. ನಮ್ರತಾ, ಸಂಗೀತಾ, ಸಿರಿ, ತನಿಷಾ ಅವರು ಏನಾದರೂ ಶೋ ಗೆದ್ದರೆ ಅದು ಅವರ ಸಾಮರ್ಥ್ಯದಿಂದ ಮಾತ್ರ. ನಿಮಗೆ ಇರುವ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ತೀರಿ ಅನ್ನೋದು ನಿಮಗೆ ಬಿಟ್ಟಿದ್ದು ಎಂದು ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ.