ಬೆಂಗಳೂರು:- ಬೀದಿನಾಯಿಗಳಿಗೆ ಊಟ ಹಾಕೋರು ಒಮ್ಮೆ ಈ ಸುದ್ದಿ ಓದಿ. ಇನ್ಮುಂದೆ ಬಿಬಿಎಂಪಿಯ ರೂಲ್ಸ್ ಪಾಲಿಸುವ ಮೂಲಕ ಊಟ ಹಾಕಬೇಕಾಗಿದೆ. ಏನಿದು ಬಿಬಿಎಂಪಿಯ ಹೊಸ ರೂಲ್ಸ್ ಅಂತೀರಾ ಈ ಸುದ್ದಿ ಓದಿ.
Breaking News: 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ PDO “ಲೋಕಾ” ಬಲೆಗೆ..!
ಬೀದಿನಾಯಿಗೆ ಊಟ ಹಾಕ್ತಿದ್ದವರು ಇನ್ಮುಂದೆ ಬಿಬಿಎಂಪಿ ಹೇಳೋ ಟೈಮ್ ನಲ್ಲಿ, ಸೂಚಿಸೋ ಜಾಗದಲ್ಲೇ ಬೀದಿನಾಯಿಗಳಿಗೆ ಊಟ ಹಾಕೋಕೆ ಸಜ್ಜಾಗಬೇಕಿದೆ.
ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಬೀದಿನಾಯಿಗಳು ತಮ್ಮದೇ ಆದ ಗ್ಯಾಂಗ್ ಕಟ್ಟ್ಕೊಂಡು ಓಡಾಡಿಕೊಂಡಿವೆ. ಹೀಗೆ ಬೀದಿಗೆ ಸೆಕ್ಯುರಿಟಿಗಾರ್ಡ್ ನಂತಿರೋ ಬೀದಿನಾಯಿಗಳಿಗೆ ಪ್ರೀತಿಯಿಂದಲೋ ಅಥವಾ ವ್ಯರ್ಥವಾಗುತ್ತೆ ಅಂತಲೋ ಊಟ ಹಾಕ್ತಿದ್ದ ಬೆಂಗಳೂರಿಗರು ಇನ್ಮುಂದೆ ಈ ರೂಲ್ಸ್ ಪಾಲಿಸಬೇಕು. ನಾಯಿಗಳಿಗೆ ಊಟ ಹಾಕೋದಕ್ಕೂ ರೂಲ್ಸ್ ಮಾಡೋಕೆ ಬಿಬಿಎಂಪಿ ಪ್ಲಾನ್ ಮಾಡಿದೆ. ಎಲ್ಲೆಂದರಲ್ಲಿ, ಇಷ್ಟ ಬಂದ ಸಮಯದಲ್ಲಿ ಬೀದಿನಾಯಿಗಳಿಗೆ ಊಟ ಹಾಕಬಾರದು ಎಂದು ಪಾಲಿಕೆ ಹೊಸ ರೂಲ್ಸ್ ತರೋಕೆ ಹೊರಟಿದೆ
ಬೀದಿಗಳಲ್ಲಿ ಊಟ ಹಾಕುವಾಗ ನಾಯಿಗಳು ಗುಂಪು ಸೇರುತ್ತವೆ, ಈ ವೇಳೆ ಶ್ವಾನಗಳು ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಅಟ್ಯಾಕ್ ಮಾಡೋ ಸಾಧ್ಯತೆ ಇರೋದರಿಂದ, ಊಟ ನೀಡೋದಕ್ಕೆ ಸಮಯ ಹಾಗೂ ಜಾಗ ನಿಗಧಿ ಮಾಡೋದಕ್ಕೆ ಪಾಲಿಕೆ ಸಜ್ಜಾಗಿದೆ. ಬೆಳಗಿನ ಜಾವ 3 ರಿಂದ 4 ಗಂಟೆ ಅಥವಾ ರಾತ್ರಿ ಜನರ ಓಡಾಟ ಕಡಿಮೆ ಇದ್ದಾಗ ಮಾತ್ರ ಬೀದಿನಾಯಿಗಳಿಗೆ ಊಟ ಹಾಕುವಂತೆ ಪಾಲಿಕೆ ಸಲಹೆ ನೀಡ್ತಿದೆ. ಅಲ್ಲದೇ ಏರಿಯಾಗಳಲ್ಲಿ, ಅಪಾರ್ಟ್ ಮೆಂಟ್ ಗಳ ಮುಂದೆ ಎಲ್ಲಿ, ಯಾವಾಗ ನಾಯಿಗಳಿಗೆ ಊಟ ಹಾಕಬೇಕು ಅಂತಾ ಬೋರ್ಡ್ ಹಾಕೋಕು ಕೂಡ ಪಾಲಿಕೆ ಚಿಂತನೆ ನಡೆಸ್ತಿದೆ
ಸದ್ಯ ಬೆಂಗಳೂರಲ್ಲಿ ಬೀದಿನಾಯಿಗಳ ದಾಳಿ ಪ್ರಕರಣ ಕಡಿಮೆಯಾಗಲು ಕ್ರಮವಹಿಸಿದ್ದ ಪಾಲಿಕೆ, ಇದೀಗ ಬೀದಿನಾಯಿಗಳಿಗೆ ಊಟ ಹಾಕೋದರಿಂದ ಆಗೋ ಸಮಸ್ಯೆಗೆ ಬ್ರೇಕ್ ಹಾಕೋಕೆ ಮುಂದಾಗಿದೆ