ಬೆಂಗಳೂರು: ದೇಶದಲ್ಲಿ ಸಿಮ್ ಕಾರ್ಡ್ಗಳ ಖರೀದಿ, ಮಾರಾಟ ಮತ್ತು ಸಕ್ರಿಯಗೊಳಿಸುವಿಕೆಯ ಕುರಿತು ಹೊಸ ನಿಯಮಗಳನ್ನು ತಂದಿದೆ. ಈ ನಿಟ್ಟಿನಲ್ಲಿ ಎರಡು ಸುತ್ತೋಲೆಗಳನ್ನು ಹೊರಡಿಸಲಾಗಿದೆ.ಇಂದಿನಿಂದ ಹೊಸ ನಿಯಮಗಳನ್ನು ಪಾಲಿಸಬೇಕು . ಇಂದಿನಿಂದ ಟೆಲಿಕಾಂ ಅಂಗಳದಲ್ಲಿ ಕೆಲ ಹೊಸ ನಿಯಮಗಳು ಜಾರಿಗೆ ಬರಲಿವೆ. ಇನ್ಮುಂದೆ ಬಿಎಸ್ಎನ್ಎಲ್ ಸೇರಿದಂತೆ ಖಾಸಗಿ ಟೆಲಿಕಾ ಕಂಪನಿಗಳು ಮನಸೋಯಿಚ್ಛೆ ಕೆಲಸ ಮಾಡುವಂತಿಲ್ಲ.
ಟ್ರಾಯ್ ನಿಯಮಗಳಡಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಗ್ರಾಹಕರು ಹೊಸ ಟೆಲಿಕಾಂ ಕಂಪನಿಗಳ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈ ನಿಯಮಗಳಿಂದ ಕಂಪನಿಗಳು ತಮ್ಮ ಗ್ರಾಹಕರಿಗೆ ಯಾವೆಲ್ಲಾ ಸೇವೆಗಳನ್ನು ನೀಡುತ್ತಿವೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಇದುವರೆಗೂ ನೀವು ವಾಸಿಸುವ ಪ್ರದೇಶದಲ್ಲಿ ಯಾವ ಕಂಪನಿಯ ನೆಟ್ವರ್ಕ್ ಸರಿಯಾಗಿದೆ ಎಬುದನ್ನು ತಿಳಿದುಕೊಳ್ಳುವುದು ಕಷ್ಟಕರ ಕೆಲಸವಾಗಿತ್ತು. ಆದ್ರೆ ಈಗ ಹೊಸ ನಿಯಮದಿಂದ ನಿಮ್ಮ ಪ್ರದೇಶದಲ್ಲಿ ಯಾವ ನೆಟ್ವರ್ಕ್ ಚೆನ್ನಾಗಿದೆ ಎಂಬುದನ್ನು ಸರಳವಾಗಿ ತಿಳಿದುಕೊಳ್ಳಬಹುದು. ಇಂದಿನಿಂದ ಟೆಲಿಕಾಂ ಕಂಪನಿಗಳು ತಮ್ಮ ವೆಬ್ಸೈಟ್ನಲ್ಲಿ ಯಾವ ಇಲಾಖೆಯಲ್ಲಿ ಯಾವೆಲ್ಲಾ ಸೇವೆಗಳನ್ನು ನೀಡುತ್ತಿದ್ದೇವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು. ಏರ್ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಕಡ್ಡಾಯವಾಗಿ ಈ ನಿಯಮವನ್ನು ಅಕ್ಟೋಬರ್ನಿಂದ ಪಾಲನೆ ಮಾಡಬೇಕು.
ಈ ನಿಯಮದಿಂದ ಬಳಕೆದಾರರು ಯಾವ ನೆಟ್ವರ್ಕ್ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಬಗೆಹರಿಯಲಿದೆ. ಗ್ರಾಹಕರಿಗೆ ನೀಡುವ ಸೇವೆ ಕುರಿತು ಸಂಪೂರ್ಣ ವಿವರಣೆಯನ್ನು ಟೆಲಿಕಾಂ ಕಂಪನಿಗಳು ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಇದರಿಂದ ಗ್ರಾಹಕರು ತಾನು ವಾಸಿಸುವ ಪ್ರದೇಶದಲ್ಲಿ 2G, 3G, 4G ಅಥವಾ 5Gಗಳಲ್ಲಿ ಯಾವ ಸೇವೆ ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳಬಹುದು.
ಈ ನಿಯಮದ ಜೊತೆಗೆ ಎಲ್ಲಾ ಟೆಲಿಕಾಂ ಕಂಪನಿಗಳು ಆನ್ಲೈನ್ ಸರ್ವಿಸ್ ಪಾಲಿಸಿಗಳಲ್ಲಿ ಸುಧಾರಣೆ ತರುವಂತೆ ಸೂಚಿಸಲಾಗಿದೆ. ಸ್ಯಾಮ್ ಕಾಲ್ ಮೇಲೆ ನಿಯಂತ್ರಣ ಹೇರಲು ಟ್ರಾಯ್ ಮುಂದಾಗಿದೆ ಎಂದು ವರದಿಯಾಗಿದೆ. ಸ್ಯಾಮ್ ಕಾಲ್ಗಳನ್ನು ಯಾವುದೇ ಟೆಲಿಕಾಂ ಕಂಪನಿಗಳು ಉತ್ತೇಜಿಸಬಾರದು ಮತ್ತು ಗ್ರಾಹ ಸ್ನೇಹಿ ಕಾನೂನುಗಳನ್ನು ತರುವಂತೆ ಟ್ರಾಯ್ ಆದೇಶಿಸಿದೆ. ಈ ಎಲ್ಲಾ ನಿಯಮಗಳನ್ನು ಬಿಎಸ್ಎನ್ಎಲ್ ಸಹ ಪಾಲಿಸಬೇಕಿದೆ.