ಬೆಂಗಳೂರು: ರಾಜಧಾನಿಯಲ್ಲಿ ಮಾವಿನ ಸೀಸನ್ ಲೇಟಾಗಿ ಆರಂಭವಾಗಿದ್ದು, ಮಳೆ ಬಂದ ನಂತರ ಸಿಲಿಕಾನ್ ಸಿಟಿ ಮಂದಿ ಬಗೆ ಬಗೆಯ ಹಣ್ಣುಗಳನ್ನ ಸವಿಯುತ್ತಿದ್ದಾರೆ. ಆದ್ರೆ ಅಲ್ಲಿ ಹೋದರೆ ಘಮ್ ಎಂದು ಚಿತ್ತ ಸೆಳೆಯುವ ಬಗೆ ಬಗೆಯ ಮಾವಿನ ಹಣ್ಣುಗಳದ್ದೇ ಕಾರುಬಾರು. ಎಲ್ಲಿ ನೋಡಿದರೂ ಬಾಯಲ್ಲಿ ನೀರೂರಿಸುವ ಹಣ್ಣುಗಳ ರಾಜನೇ ಕಾಣ್ತಾನೆ. ಈ ಬಾರಿ ಮಾವು ಮೇಳ ನಡಿತಿರೋದಾದ್ರು ಎಲ್ಲಿ..? ರೇಟೆಷ್ಟು..? ಎಲ್ಲಾ ಡೀಟೇಲ್ಸ್ ಇಲ್ಲಿದೆ ನೋಡಿ..
ಅದು ಮಾವುಗಳ ಲೋಕ. ಒಂದಲ್ಲಾ ಎರಡಲ್ಲಾ. ಬಗೆ ಬಗೆಯ ಮಾವಿನ ಹಣ್ಣುಗಳು ಬೆಂಗಳೂರು ಜನರನ್ನು ಕೈ ಬೀಸಿ ಕರೆಯುವಂತೆ ಭಾಸವಾಗುತ್ತೆ. ಅಲ್ಲಿ ಹೋದರೆ ಘಮ್ ಎಂದು ಮಾವುಗಳ ಗಂಧ ಎದೆ ಹೊಕ್ಕುತ್ತವೆ. ಈ ಅನುಭವ ಆಗೋದು ಬೆಂಗಳೂರಿನ ಹಾಪ್ ಕಾಮ್ಸ್ ಮಾವು ಮೇಳದಲ್ಲಿ.. ಬೆಂಗಳೂರಿನ ಹಡ್ಸನ್ ಸರ್ಕಲ್ ನಲ್ಲಿರುವ ಹಾಪ್ ಕಾಮ್ಸ್ ನಲ್ಲಿ ಇಂದಿನಿಂದ ಮಾವು ಮೇಳ ಶುರುವಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
Railway Jobs: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ..! ತಿಂಗಳಿಗೆ 56,000 ಸಂಬಳ
ಮಾವಿನ ಜೊತೆಗೆ ಹಲಸು ಕೂಡ ಮಾರಾಟಕ್ಕಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಹಾಪ್ ಕಾಮ್ಸ್ ಹಾಗೂ ತೋಟಗಾರಿಕಾ ಮಹಾಮಂಡಳಿ ಮಾವು ಮೇಳ ಆಯೋಜಿಸಿದ್ದು, ಇಂದಿನಿಂದ ೧೦ ದಿನಗಳ ಕಾಲ ನಡೆಯಲಿದೆ. ಮಾವು ಮೇಳದಲ್ಲಿ ಒಟ್ಟು 17 ತಳಿಯ ಮಾವುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.
ಇನ್ನು ಮಾವಿನ ಜೊತೆಗೆ ಹಲಸು ಕೂಡ ಮಾರಟಕ್ಕೆ ಇಡಲಿದೆ. ಒಟ್ಟು 2 ಬಗೆಯ ಹಲಸು ಮೇಳದಲ್ಲಿ ಇಡಲಾಗಿದೆ. ಹೊರಗಿನ ಮಾರುಕಟ್ಟೆಯಲ್ಲಿ ಕೆಜಿಗೆ ನೂರಾರು ರೂಪಾಯಿ ಬೆಲೆ ಇರುವ ಹಣ್ಣುಗಳು ಇಲ್ಲಿ ಕೈಗೆಟಕುವ ಬೆಲೆಗೆ ಲಭ್ಯವಿದೆ. ಜೊತೆಗೆ ಕಾರ್ಬೋಡೈ ಆಕ್ಸಿಡ್ ರಹಿತವಾಗಿ ಹಣ್ಣುಗಳ ಶುಶ್ರೂಶೆ ಮಾಡಲಾಗಿದ್ದು ಮೇಳದಲ್ಲಿ ಕೆಮಿಕಲ್ ಫ್ರೀ ಹಣ್ಣುಗಳು ಜನರಿಗೆ ಲಭ್ಯವಾಗಲಿದೆ.
ಇನ್ನು ಉದ್ಘಾಟನೆ ಮಾಡಿದ ಶಾಸಕ ಉದಯ್ ಗರುಡಚಾರ್ ತಾವು ಮಾಡಲು ಮಾವನ್ನು ಖರೀದಿ ಮಾಡಿದ್ರು ಎಂದು ಸಂತಸ ಪಟ್ಟರು. ಅಷ್ಟೇ ಅಲ್ಲದೆ ಜನರಿಗೆ ರಿಯಾಯಿತಿ ದರದಲ್ಲಿ ಹಣ್ಣನ್ನು ಕೊಡುತ್ತಿದ್ದಾರೆ ಎಂದು ತಿಳಿಸಿದರು.. ಒಟ್ಟಾರೆ… ವರ್ಷದ ಮೇ ತಿಂಗಳು ಬಂತು ಅಂದ್ರೆ ಸಾಕು ಹಣ್ಣಿನ ರಾಜ ರಾಜಧಾನಿಯಲ್ಲಿ ಧರ್ಬಾರ್ ನಡೆಸ್ತಾನೆ..ಬೇರೆ ಯಾವ ಹಣ್ಣು ಸೇಲಾಗೋಕು ಬಿಡದಷ್ಟು ಆರ್ಭಟ ನಡೆಸ್ತಾನೆ. ಹೀಗಾಗಿಯೇ ಹಾಪ್ ಕಾಮ್ಸ್ ನಲ್ಲಿ ಈ ಮಾವುಮೇಳಕ್ಕೆ ವಿಶೇಷ ಸ್ಥಾನ ಮಾನ ಇದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)