ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಇದಕ್ಕಾಗಿ ನೀವು ತಿನ್ನುವ ರೊಟ್ಟಿಯ ಪ್ರಮಾಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ತೂಕ ಇಳಿಸಿಕೊಳ್ಳುವ ಸಮಯದಲ್ಲಿ ಮಹಿಳೆಯರು 1400 ಕ್ಯಾಲೊರಿಗಳನ್ನು ಸೇವಿಸಬೇಕು. ಅಂತಹ ಸಂದರ್ಭದಲ್ಲಿ ಅವರು ಬೆಳಗ್ಗೆ ಎರಡು ರೊಟ್ಟಿ ಮತ್ತು ಸಂಜೆ ಎರಡು ರೊಟ್ಟಿಗಳನ್ನು ಸೇವಿಸಿದರೆ, ಅದು ಅವರಿಗೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ.
Arun Somanna: ಕೇಂದ್ರ ಸಚಿವ ಸೋಮಣ್ಣ ಪುತ್ರನ ಮೇಲೆ FIR..! ಯಾಕೆ ಗೊತ್ತಾ..?
ಇನ್ನು, ಪುರುಷರ ವಿಚಾರಕ್ಕೆ ಬಂದರೆ ತೂಕವನ್ನು ಕಳೆದುಕೊಳ್ಳಲು ಅವರು 1700 ಕ್ಯಾಲೋರಿಗಳನ್ನು ತಿನ್ನಲು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪುರುಷರು ಬೆಳಗ್ಗೆ ಮತ್ತು ಸಂಜೆ ಮೂರು ಚಪಾತಿ ತಿನ್ನಬಹುದು. ಗೋಧಿ, ಸಜ್ಜೆ, ಜೋಳದಲ್ಲಿ ಮಾಡಿದ ರೊಟ್ಟಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ತೂಕ ಇಳಿಸುವ ಪ್ಲಾನ್ನಲ್ಲಿರುವ ಜನರು ರೊಟ್ಟಿಗೆ ಮೊದಲ ಆದ್ಯತೆ ನೀಡುತ್ತಾರೆ. ಕೆಲವರು ತುಂಬಾನೇ ಹಸಿವು ಆದಾಗ 5 ರಿಂದ 6 ಚಪಾತಿ ತಿನ್ನುತ್ತಾರೆ. ಒಂದೇ ಸಮಯಕ್ಕೆ ಇಷ್ಟು ಚಪಾತಿ ಅಥವಾ ರೊಟ್ಟಿ ತಿನ್ನೋದರಿಂದ ಏನೆಲ್ಲಾ ಪರಿಣಾಮ ಬೀರುತ್ತೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ
ರೊಟ್ಟಿಯಲ್ಲಿ ಕಾರ್ಬ್ಸ್, ಕ್ಯಾಲೋರಿ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ರೊಟ್ಟಿ ಅಥವಾ ಚಪಾತಿ ತಿನ್ನುವಾಗ ಈ ಅಂಶಗಳ ಮೇಲೆ ನಿಮ್ಮ ಗಮನ ಇರಲಿ.
ಸಾಮಾನ್ಯವಾಗಿಯೂ ಮಹಿಳೆಯರು ದಿನಕ್ಕೆ ನಾಲ್ಕು ರೊಟ್ಟಿ ತಿನ್ನಬಹುದು. ಅಂಂದರೆ ಮಧ್ಯಾಹ್ನ 2 ಮತ್ತು ರಾತ್ರಿ ಎರಡು ಚಪಾತಿ ತಿನ್ನಬಹುದು. ಪುರುಷರು ದಿನಕ್ಕೆ ಆರರಿಂದ 8 ರೊಟ್ಟಿ ತಿನ್ನಬಹುದು. ಮಧ್ಯಾಹ್ನ ಮತ್ತು ರಾತ್ರಿ ತಲಾ ಮೂರರಂತೆ ತಿನ್ನಬಹುದು. ನೀವು ಹೆಚ್ಚು ಭಾರದ ಕೆಲಸ ಮಾಡುತ್ತಿದ್ರೆ ರೊಟ್ಟಿಗಳ ಪ್ರಮಾಣ ಹೆಚ್ಚಬಹುದು. ಕೆಲವರು ಬೆಳಗ್ಗೆ ತಿಂಡಿಗೂ ಚಪಾತಿ ಬೇಕು ಎಂದು ಕೇಳುತ್ತಾರೆ
ರಾತ್ರಿ ಚಪಾತಿ ಬೇಗ ಜೀರ್ಣ ಆಗಲ್ಲ. ಆದ್ದರಿಂದ ಎರಡು ಚಪಾತಿ ತಿನ್ನೋದು ಉತ್ತಮ. ಅತಿಯಾಗಿ ಚಪಾತಿ ತಿಂದ್ರೆ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. ನೀವು ರಾತ್ರಿ ಚಪಾತಿ ತಿಂದ್ರೆ ಕನಿಷ್ಠ ಅರ್ಧ ಗಂಟೆ ವಾಕ್ ಮಾಡೋದನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸರಳವಾಗುತ್ತದೆ. ರಾತ್ರಿ ಚಪಾತಿ ತಿಂದ ನಂತರ ದಿಢೀರ್ ನಿದ್ದೆಗೆ ಜಾರಬೇಡಿ.