ರಾಮನಗರ:- ಛೇ, ಇದೆಂಥಾ ದುರ್ದೈವ. ಕೆಲವು ಮಂದಿಗೆ ಮಕ್ಕಳೇ ಇರೋದಿಲ್ಲ. ಮಕ್ಕಳಿಗಾಗಿ ಸಾವಿರಾರು ಹರಕೆ ಹೊತ್ತು, ಮಕ್ಕಳು ಕೊಡಪ್ಪ ದೇವ ಎಂದು ಹೇಳುತ್ತಾರೆ.
Tulsi Plant: ವಾಸ್ತುಪ್ರಕಾರ ತುಳಸಿ ಗಿಡ ನೆಡುವ ದಿಕ್ಕು ಯಾವುದು! ಈ ನಿಯಮ ಪಾಲಿಸಲೇ ಬೇಕು!
ಆದರೆ ಕೆಲವೊಂದಿಷ್ಟು ಮಂದಿಗೆ ಮಕ್ಕಳು ಬೇಡ ಅಂದ್ರೂ ಆ ದೇವರೆ ಕೊಟ್ಟಿರ್ತಾನೆ. ಆದರೆ ಇದನ್ನು ಉಳಿಸಿಕೊಳ್ಳೋ ಯೋಗ್ಯತೆ ಅವರಿಗಿಲ್ಲ ಅನ್ಸುತ್ತೆ.
ವೀಕ್ಷಕರೇ ಈ ಸುದ್ದಿ ಇಡೀ ಮನುಕುಲವೇ ತಲೆ ತಗ್ಗಿಸುವಂತದ್ದು. ಆಗತಾನೆ ಜನಿಸಿರುವ ಶಿಶುವೊಂದನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆಸ್ಪತ್ರೆಯೊಂದರಲ್ಲಿ ಜರುಗಿದೆ.
ಘಟನೆ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ರಾತ್ರಿ 10:30 ರ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಆಸ್ಪತ್ರೆಯ ನೆಲಮಹಡಿಯ ಟಾಯ್ಲೆಟ್ಗೆ ತೆರಳಿದ್ದ ವೈದ್ಯಕೀಯ ಸಿಬ್ಬಂದಿಗೆ ಮಹಿಳೆಯರ ಟಾಯ್ಲೆಟ್ನಲ್ಲಿ ನೀರು ನಿಂತಿರುವುದು ಗಮನಕ್ಕೆ ಬಂದಿದೆ. ನೀರು ಫ್ಲಶ್ ಆಗದ ಕಾರಣ ವೈದ್ಯಕೀಯ ಸಿಬ್ಬಂದಿ ಟಾಯ್ಲೆಟ್ ಅನ್ನು ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚನೆ ನೀಡಿದ್ದರು. ಅದರಂತೆ, ಸಿಬ್ಬಂದಿ ವ್ಯಾಕ್ಯೂಮ್ನಿಂದ ಕ್ಲೀನ್ ಮಾಡಿದ್ದಾರೆ. ಆಗ, ಏನೋ ವಸ್ತು ಅಡ್ಡ ಇರುವುದು ಪತ್ತೆಯಾಗಿದೆ. ಆರಂಭದಲ್ಲಿ, ಬಟ್ಟೆ ಅಥವಾ ಏನಾದರು ಕೊಳೆ ಇರಬಹುದು ಎಂದು ಅವರು ಶಂಕಿಸಿದ್ದಾರೆ.
ಟಾಯ್ಲೆಟ್ ಶುಚಿಗೊಳಿಸುವ, ಬ್ಲಾಕ್ ನಿರ್ಮೂಲನೆಗೊಳಿಸುವ ಪರಿಕರವನ್ನು ಬಳಸಿ ಒಳಗೆ ಸಿಕ್ಕಿಹಾಕಿಕೊಂಡಿದ್ದ ವಸ್ತುವನ್ನು ಹೊರ ತೆಗೆದಾಗ ಸಿಬ್ಬಂದಿ ಆಘಾತಕ್ಕೊಳಗಾಗಿದ್ದರು. ನವಜಾತ ಶಿಶುವಿನ ದೇಹ ಅವರಿಗೆ ಸಿಕ್ಕಿದೆ. ಶಿಶು ಜನಿಸಿ ಒಂದೆರಡು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ.