ಜ್ಯೋತಿಷ್ಯದಲ್ಲಿ ಹಲ್ಲಿಯ ಬಗ್ಗೆ ಬಹಳಷ್ಟು ಹೇಳಲಾಗಿದೆ. ಆದ್ದರಿಂದಲೇ ಕೆಲವರು ಹಲ್ಲಿಯನ್ನು ನೋಡುವುದು ಶುಭ ಎಂದು ಹೇಳುತ್ತಾರೆ. ಹಾಗಿದ್ರೆ ಈ ಸುದ್ದಿಯಲ್ಲಿ ನೀವು ಹಲ್ಲಿಯನ್ನು ನೋಡಿದ್ರೆ ಒಳ್ಳೆಯದೇ? ಕೆಟ್ಟದ್ದೇ? ಎಂಬುದನ್ನು ತಿಳಿಯಬಹುದು.
ಅನೇಕ ಜನರು ಹಲ್ಲಿಗಳಿಗೆ ಹೆದರುತ್ತಾರೆ. ಇದಕ್ಕಾಗಿ ಅವುಗಳನ್ನು ಓಡಿಸಲು ನಾನಾ ಸರ್ಕಸ್ಗಳನ್ನು ಸಹ ಮಾಡುತ್ತಾರೆ. ಆದರೆ ಜ್ಯೋತಿಷ್ಯ ನಂಬಿಕೆಯ ಪ್ರಕಾರ, ಹಲ್ಲಿಯನ್ನು ಹಣದ ವಿಷಯಗಳಲ್ಲಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂದರೆ ಹಲ್ಲಿಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ.
ಕೆಲವು ರಾಜ್ಯಗಳಲ್ಲಿ, ಹೊಸ ಮನೆಗೆ ವಾಸ್ತು ಪೂಜೆಯನ್ನು ಮಾಡುವಾಗಲೂ ಬೆಳ್ಳಿ ಹಲ್ಲಿಯ ವಿಗ್ರಹಗಳನ್ನು ಬಳಸಿ ನಡೆಸಲಾಗುತ್ತದೆ. ಏಕೆಂದರೆ ಹಲ್ಲಿಯು ಮನೆಯಲ್ಲಿ ಸಂತೋಷ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ತಮಿಳುನಾಡಿನಲ್ಲಿ ಪಲ್ಲಿಕ್ಕು ಎಂಬ ವಿಶೇಷ ದೇವಾಲಯ ಇದೆ. ಏಕೆ ಗೊತ್ತಾ?
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಸ್ವಾಗತ ಕೊಠಡಿ, ಪೂಜಾ ಕೊಠಡಿಯಲ್ಲಿ ಹಲ್ಲಿಗಳು ಕಂಡುಬಂದರೆ ತುಂಬಾ ಶುಭ. ಮುಂದಿನ ದಿನಗಳಲ್ಲಿ ನೀವು ಹೆಚ್ಚು ಹಣವನ್ನು ಪಡೆಯಲಿದ್ದೀರಿ ಎಂದು ಇದು ಸೂಚಿಸುತ್ತದೆ. ದೀಪಾವಳಿಯಂದು ನಿಮ್ಮ ಮನೆಯಲ್ಲಿ ಹಲ್ಲಿ ಇದ್ದರೆ ವರ್ಷವಿಡೀ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ. ಅಷ್ಟೇ ಅಲ್ಲ, ಇದು ನಿಮಗೆ ಅಪಾರ ಸಂತೋಷ ಮತ್ತು ಸಂಪತ್ತನ್ನು ತರುತ್ತದೆ.
ಮನೆಯಲ್ಲಿ 3 ಹಲ್ಲಿಗಳನ್ನು ಒಂದೇ ಸ್ಥಳದಲ್ಲಿ ನೋಡುವುದು ತುಂಬಾ ಅದೃಷ್ಟ. ಆದ್ದರಿಂದ, ನೀವು ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ ಎಂದರ್ಥ. ಹೊಸ ಮನೆಗೆ ಪ್ರವೇಶಿಸುವ ಸಮಯದಲ್ಲಿ ನೀವು ಹಲ್ಲಿಯನ್ನು ನೋಡಿದರೆ, ಅದು ತುಂಬಾ ಶುಭ ಎಂದು ನಂಬಲಾಗಿದೆ.
ಅಷ್ಟೇ ಅಲ್ಲ, ಹಲ್ಲಿಯನ್ನು ಕಂಡರೆ ಪೂರ್ವಜರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಅಂದರೆ ನಾವು ನಮ್ಮ ಪೂರ್ವಜರ ಆಶೀರ್ವಾದ ಮತ್ತು ಅನುಗ್ರಹವನ್ನು ಪಡೆಯುತ್ತೇವೆ. ಅದರೊಂದಿಗೆ ಲಕ್ಷ್ಮಿ ದೇವಿಯ ಕೃಪೆಯೂ ನಿಮ್ಮ ಮೇಲಿರಲಿದೆ ಎಂದು ನಂಬಲಾಗಿದೆ