ಮೈ ಎಲ್ಲ ಬೆಳಗ್ಗಿದ್ದರೂ, ಕುತ್ತಿಗೆಯ ಸುತ್ತ ಕಪ್ಪಾಗಿರುವುದು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಕೇವಲ ಸಮಸ್ಯೆಯಾಗಿರದೇ ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಈ ಕಪ್ಪು ಕಲೆಗೆ ಸರಿಯಾದ ಚಿಕಿತ್ಸೆ ಇಲ್ಲದಿದ್ದಾಗ ಸಾಕಷ್ಟು ಜನರು ಕುತ್ತಿಗೆ ಸಂಪೂರ್ಣವಾಗಿ ಮುಚ್ಚಿಕೊಂಡಿರುವ ಬಟ್ಟೆಯನ್ನು ಧರಿಸುತ್ತಾರೆ. ಆದರೆ ಇನ್ನೂ ಮುಂದೆ ಇಂತಹ ಸಮಸ್ಯೆಗಳಿಗೆ ಚಿಂತಿಸಬೇಕಿಲ್ಲ. ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಕತ್ತಿನ ಭಾಗ ಕಪ್ಪು ಕಲೆಯನ್ನು ನಿವಾರಿಸಬಹುದಾಗಿದೆ.
ಮಾರ್ಫಿಂಗ್ ವಿಡಿಯೋ ಹರಿಬಿಟ್ಟ ಆರೋಪ: DCM ಡಿಕೆಶಿ ಸೇರಿ ಇತರರ ವಿರುದ್ಧ ಆರ್ ಅಶೋಕ್ ದೂರು!
ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಕೆಲವು ಗಂಡಸರಿಗೂ ಕುತ್ತಿಗೆ ಉಳಿದ ಚರ್ಮಕ್ಕಿಂತ ಕಪ್ಪಗಿರುತ್ತೆ. ಇದನ್ನ ‘ಅಕಾಂಥೋಸಿಸ್ ನೈಗ್ರಿಕಾನ್ಸ್’ ಅಂತಾರೆ. ತಜ್ಞರ ಪ್ರಕಾರ, ಕುತ್ತಿಗೆ ಕಪ್ಪಗಾಗಲು ಬೊಜ್ಜು ಒಂದು ಮುಖ್ಯ ಕಾರಣ. ಹೆಂಗಸರಲ್ಲಿ ಈ ಸಮಸ್ಯೆಗೆ ಕೆಲವು ಕಾರಣಗಳಿವೆ. ಹಾರ್ಮೋನುಗಳ ಏರುಪೇರು, ಪಿಸಿಓಎಸ್, ದೈಹಿಕ ಶ್ರಮ ಇತ್ಯಾದಿಗಳಿಂದ ಕುತ್ತಿಗೆ ಕಪ್ಪಾಗುತ್ತೆ. ಕೆಲವರಿಗೆ ಸುಗಂಧ ದ್ರವ್ಯಗಳು, ಹೇರ್ ಡೈ ಗಳಿಂದ ಅಲರ್ಜಿ ಇದ್ದರೂ ಕುತ್ತಿಗೆ ಕಪ್ಪಾಗುತ್ತೆ ಅಂತ ತಜ್ಞರು ಹೇಳ್ತಾರೆ.
ಕುತ್ತಿಗೆಯ ಕಪ್ಪು ಹೋಗಲಾಡಿಸಲು ಕಸ್ತೂರಿ ಅರಿಶಿನ ಪರಿಣಾಮಕಾರಿ. ಮೊದಲು ಈ ಅರಿಶಿನವನ್ನು ಮಧ್ಯಮ ಉರಿಯಲ್ಲಿ ಹುರಿಯಬೇಕು. ಬಂಗಾರದ ಬಣ್ಣಕ್ಕೆ ಬಂದಾಗ ಸ್ಟವ್ ಆಫ್ ಮಾಡಿ. ಒಂದು ಬಟ್ಟಲಿಗೆ ಅರಿಶಿನ, ಜೇನುತುಪ್ಪ, ಮೊಸರು, ಕಾಫಿ ಪುಡಿ, ನಿಂಬೆ ರಸ ಹಾಕಿ ಚೆನ್ನಾಗಿ ಕಲಸಿ.ಈ ಪ್ಯಾಕ್ ಹಚ್ಚುವ ಮುನ್ನ ಕುತ್ತಿಗೆಯನ್ನು ಸೋಪು ಅಥವಾ ಟೊಮೇಟೊ-ಸಕ್ಕರೆಯಿಂದ ಸ್ಕ್ರಬ್ ಮಾಡಿ. ಇದರಿಂದ ಕುತ್ತಿಗೆ ಕ್ಲೀನ್ ಆಗುತ್ತೆ. ಈಗ ಅರಿಶಿನ ಪ್ಯಾಕ್ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ 3 ದಿನ ಹೀಗೆ ಮಾಡಿದರೆ ಕುತ್ತಿಗೆ ಕಪ್ಪು ಕಡಿಮೆಯಾಗುತ್ತೆ.
ನಿಂಬೆಹಣ್ಣು, ಬೇಕಿಂಗ್ ಸೋಡಾ
ಕುತ್ತಿಗೆ ಕಪ್ಪು ಹೋಗಲಾಡಿಸಲು ನಿಂಬೆಹಣ್ಣು, ಬೇಕಿಂಗ್ ಸೋಡಾ ಉಪಯುಕ್ತ. ಸ್ವಲ್ಪ ಬೇಕಿಂಗ್ ಸೋಡಾಗೆ ಅರಿಶಿನ, ನಿಂಬೆ ರಸ ಹಾಕಿ ಕಲಸಿ. ಇದನ್ನು ಕುತ್ತಿಗೆಗೆ ಹಚ್ಚಿ. ಈ ಪ್ಯಾಕ್ ಆಗಾಗ್ಗೆ ಉಪಯೋಗಿಸಿದರೆ ಕುತ್ತಿಗೆ ಕಪ್ಪು ಕಡಿಮೆಯಾಗುತ್ತೆ.
ಹಾಲು, ಜೇನುತುಪ್ಪ
ಹಾಲು, ಜೇನುತುಪ್ಪದಿಂದಲೂ ಕಪ್ಪು ಕುತ್ತಿಗೆಯನ್ನು ಸಾಮಾನ್ಯ ಬಣ್ಣಕ್ಕೆ ತರಬಹುದು. ಸ್ವಲ್ಪ ಹಾಲಿಗೆ ನಿಂಬೆ ರಸ, ಜೇನುತುಪ್ಪ ಹಾಕಿ ಕಲಸಿ ಪ್ಯಾಕ್ ಮಾಡಿ. ಇದನ್ನು ಕುತ್ತಿಗೆಗೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಕುತ್ತಿಗೆ ಕಪ್ಪು ಕಡಿಮೆಯಾಗುತ್ತೆ.
ಕುತ್ತಿಗೆ ಕಪ್ಪು ಹೋಗಬೇಕಾದರೆ ಇವು ಮಾಡಲೇಬೇಕು:
ಕುತ್ತಿಗೆ ಕಪ್ಪು ಹೋಗಬೇಕಾದರೆ ಎಣ್ಣೆಯುಕ್ತ ತಿಂಡಿಗಳನ್ನು ತಿನ್ನಬಾರದು. ಮಸಾಲೆ ಆಹಾರ ಬೇಡ. ಇವು ಬೊಜ್ಜಿಗೆ ಕಾರಣವಾಗುತ್ತವೆ. ಇದರಿಂದ ಕುತ್ತಿಗೆ ಕಪ್ಪಾಗುತ್ತದೆ. ಹಾರ್ಮೋನುಗಳ ಬದಲಾವಣೆ, ಪಿಸಿಓಎಸ್ ನಿಂದಲೂ ಕುತ್ತಿಗೆ ಕಪ್ಪಾಗುತ್ತದೆ. ಹಾಗಾಗಿ ಮೇಲಿನ ಮನೆಮದ್ದುಗಳನ್ನು ಬಳಸುವ ಮುನ್ನ ಸರಿಯಾದ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.