ಮಳೆ ಬಂತೆಂದರೆ ಸಾಕು ಬಟ್ಟೆಗಳನ್ನು ಒಣಗಿಸಲು ಮಹಿಳೆಯರು ನಾನಾ ಸರ್ಕಸ್ ಮಾಡುತ್ತಲೇ ಇರುತ್ತಾರೆ.ಇಂತಹ ಮಹಿಳೆಯರಿಗೆ ಹೇಗೆ ಮಳೆಗಾಲದಲ್ಲಿಯೂ ಸೂರ್ಯ ಬರದೆ ಇದ್ರು ಬಟ್ಟೆಯನ್ನು ಒಣಗಿಸಬಹುದು ಎನ್ನುವ ಸಿಂಪಲ್ ಟಿಪ್ಸ್ ಇಲ್ಲಿವೆ..
Jay Shah: ಏಕದಿನ, ಟೆಸ್ಟ್ ತಂಡದ ನಾಯಕ ಯಾರು.?: BCCI ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ
ಸೂರ್ಯನ ಕಿರಣಗಳು ತಾಗದಿದ್ದರಂತೂ ಬಟ್ಟೆಯ ವಾಸನೆ ಕಿರಿಕಿರಿ ಉಂಟು ಮಾಡುತ್ತದೆ. ಮಳೆಗಾಲದಲ್ಲಿ ಮನೆಯೊಳಗೆ ಬಟ್ಟೆ ಒಣಗಿಸುವುದರಿಂದ ಕೂಡ ಕೆಲ ಅಲರ್ಜಿ ಮತ್ತು ರೋಗಗಳು ಉಂಟಾಗುತ್ತದೆ.ಹೀಗಾಗಿ ಶೀಘ್ರ ಬಟ್ಟೆ ಒಣಗಿಸಲು ವಾಷಿಂಗ್ ಮಷೀನ್ ಬಳಕೆ ಮಾಡಬಹುದು.. ವಾಷಿಂಗ್ ಮಷೀನ್ ಗೆ ಬಟ್ಟೆಹಾಕಿ ವೇಗದ ಸ್ಪಿನ್ ಆಪ್ಷನ್ ಸೆಲೆಕ್ಟ್ ಮಾಡಿ, ಬಟ್ಟೆಯನ್ನು ವಾಶ್ ಮಾಡಲು ಹಾಕಬೇಕು..ಹೀಗೆ ಸ್ಪಿನ್ ಮಾಡಲು ಬಟ್ಟೆನ ಹಾಕುವುದರಿಂದ ಆದಷ್ಟು ಬೇಗ ಬಟ್ಟೆ ಒಣಗುವ ಸಾಧ್ಯತೆ ಇದೆ
ಡ್ರೈಯರ್ ಇಲ್ಲದೆಯೇ ಬಟ್ಟೆಗಳನ್ನು ಒಣಗಿಸಲು ವೇಗವಾದ ಮಾರ್ಗವೆಂದರೆ ಟವೆಲ್ ಮತ್ತು ಕೆಲವು ಟಿಶ್ಯೂ ಪೇಪರ್. ನಾವು ಯಾವ ಬಟ್ಟೆಯನ್ನು ಬೇಗ ಒಣಗಿಸಬೇಕು ಎಂದು ಬಯಸುತ್ತೇವೋ ಆ ಬಟ್ಟೆಯನ್ನು ಮೊದಲು ಟವಲ್ ಮೇಲೆ ಹರಡಿ ಬಳಿಕ ಅದರ ಮೇಲೆ ಟಿಶ್ಯೂ ಪೇಪರ್ ಗಳನ್ನು ಬಳಸಿದ್ರೆ ಟಿಶ್ಯೂ ಪೇಪರ್ ನೀರನ್ನು ಹಿಂಡಿ ಕೊಳ್ಳುತ್ತೆ. ಬಳಿಕ ಬಟ್ಟೆಯನ್ನ ಸುಮಾರು ಐದು ನಿಮಿಷಗಳ ಕಾಲ ಹಿಂಡಿ ಅದನ್ನ ಒಣಗಳು ಹರಡಿದರೆ ಆದಷ್ಟು ಬೇಗ ನಮ್ಮ ಬಟ್ಟೆಗಳು ಒಣಗಲಿವೆ
ನಮ್ಮ ಬಟ್ಟೆಯನ್ನು ಒಣಗಿಸಲು ಇರುವ ಅತ್ಯಂತ ಸುಲಭವಾದ ಮಾರ್ಗ ಅಂದ್ರೆ ಹ್ಯಾಂಗರ್ ಗಳ ಬಳಕೆ. ಏರ್ಲರ್ನಲ್ಲಿ ಬಟ್ಟೆಗಳನ್ನ ನೇತು ಹಾಕುವಾಗ ಮೊದಲು ಕೆಳಭಾಗದಲ್ಲಿ ಸಣ್ಣ ಬಟ್ಟೆಗಳನ್ನು ಹಾಕಬೇಕು, ಮೇಲ್ಭಾಗದಲ್ಲಿ ದೊಡ್ಡ ಬಟ್ಟೆಗಳನ್ನು ಹಾಕಿದ್ರೆ ಗಾಳಿ ಹರಿವು ಹೆಚ್ಚಾಗಿ ಬಟ್ಟೆ ಬೇಗ ಒಣಗಲಿದೆ. ಇನ್ನು ಏರ್ನಲ್ಲಿ ಪೆಗ್ ಅಥವಾ ರಾಕ್ಗಳ ಬದಲಿಗೆ ಹ್ಯಾಂಗರ್ಗಳನ್ನು ಬಳಸುವುದರಿಂದ ಬಟ್ಟೆ ಒಣಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸಬಹುದು
ಬಟ್ಟೆಯನ್ನ ಸಾಮಾನ್ಯವಾಗಿ ನಾವು ಒಣಗಿದ ಮೇಲೆ ಐರನ್ ಮಾಡುತ್ತೇವೆ. ಆದ್ರೆ ಮಳೆಗಾಲದಲ್ಲಿ ಬಿಸಿಲಿಗೆ ಬಟ್ಟೆ ಒಣಗುವ ಯಾವುದೇ ಅವಕಾಶ ಇರುವುದಿಲ್ಲ. ಹಾಗಾಗಿ ನಮಗೆ ಬೇಗ ಬಟ್ಟೆ ಒಣಗಬೇಕು ಎಂದರೆ, ಬಟ್ಟೆ ಹಸಿಯಾಗಿದ್ದಾಗ ಐರನ್ ಮಾಡಿದ್ರೆ ಬಟ್ಟೆ ಬೇಗ ಒಣಗುತ್ತೆ.. ಜೊತೆಗೆ ಹಸಿವಾಸನೆ ಕೂಡ ಕಡಿಮೆಯಾಗಲಿದೆ