ಹಾಸನ: ರಾಷ್ಟ್ರದ ಮೂರು ಲಾಂಛನಗಳನ್ನು ಚಿಕ್ಕದಾಗಿ ತೋರಿಸಿ, ಕಮಲದ ಹೂವನ್ನು (Lotus) ಬಹಳ ದೊಡ್ಡದಾಗಿ, ಎದ್ದು ಕಾಣುವ ರೀತಿಯಲ್ಲಿ ತೋರಿಸಿದ್ದರು. ಆದ್ದರಿಂದ ಮೂರು ಚಿಹ್ನೆಗಳು ಕಡಿಮೆ ಹಾಕಿ ಕಮಲವನ್ನು ಏಕೆ ದೊಡ್ಡದಾಗಿ ಹಾಕಿದ್ದೀರಾ ಎಂದು ಶಿಕ್ಷಕಿಯನ್ನು ಪ್ರಶ್ನಿಸಿದೆ ಎಂದು ಶಾಸಕ ಶಿವಲಿಂಗೇಗೌಡ (Shivalinge Gowda ) ಅವರು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಕಮಲದ ಹೂವಿನ ಚಿತ್ರ ಹಿಡಿದು ಶಾಲಾ ಮಕ್ಕಳು ನೃತ್ಯ ಮಾಡಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಇದೇ ಕಾರಣಕ್ಕೆ ಮೊದಲ ಬಹುಮಾನ ಪಡೆದ ಶಾಲೆಗೆ ನಾಲ್ಕನೇ ಬಹುಮಾನ ನೀಡಿದ್ದರು ಎಂಬ ಆರೋಪ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆಯಲ್ಲಿ (Arsikere) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
Pakistan: ಈ ದೇಶದಲ್ಲಿ ಮತ್ತೊಂದು ವೈರಸ್ ಅಟ್ಟಹಾಸ: 230ಕ್ಕೂ ಹೆಚ್ಚು ಮಕ್ಕಳು ಸಾವು
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಮ್ಮ ನಗರದ ಒಂದು ಶಾಲೆ ನೃತ್ಯ ಮಾಡಿದೆ. ಈ ಸಂದರ್ಭದಲ್ಲಿ ಪ್ರಾಣಿ ಹುಲಿ, ಪಕ್ಷಿ ನವಿಲು ಹಾಗೂ ಅಶೋಕ ಸ್ತಂಭದ ಚಿತ್ರಗಳನ್ನ ನೃತ್ಯದಲ್ಲಿ ಉಪಯೊಗಿಸಿದ್ದರು. ಅದರ ಜೊತೆಯಲ್ಲಿ ಕಮಲದ ಹೂವನ್ನೂ ಪ್ರದರ್ಶಿಸಿದ್ದರು. ಈ ವೇಳೆ ರಾಷ್ಟ್ರದ ಮೂರು ಲಾಂಛನಗಳನ್ನು ಚಿಕ್ಕದಾಗಿ ತೋರಿಸಿ, ಕಮಲದ ಹೂವನ್ನು ಬಹಳ ದೊಡ್ಡದಾಗಿ, ಎದ್ದು ಕಾಣುವ ರೀತಿಯಲ್ಲಿ ಹಾಕಿದ್ದರು. ಆದ್ದರಿಂದ ಮೂರು ಚಿಹ್ನೆಗಳು ಕಡಿಮೆ ಹಾಕಿ ಕಮಲವನ್ನು ದೊಡ್ಡದಾಗಿ ಹಾಕಿದ್ದೀರಾ ಎಂದು ಶಿಕ್ಷಕಿಯನ್ನು ಪ್ರಶ್ನಿಸಿದ್ದು ನಿಜ ಎಂದು ತಿಳಿಸಿದ್ದಾರೆ.