ಗದಗ: ಅಪ್ಪು ಅಮರವಾಗಿ ಮೂರು ವರ್ಷವಾಯಿತು. ಆದ್ರೆ ಅಭಿಮಾನಿಗಳಲ್ಲಿನ ಕಂಬನಿ ಮಾತ್ರ ಕಡಿಮೆ ಆಗ್ತಿಲ್ಲ. ಅದೆಷ್ಟೋ ಜನ್ರು ಅಪ್ಪುವಿನನ್ನು ಆರಾಧ್ಯ ದೇವರೆಂದು ನಿತ್ಯ ಪೂಜೆಗೈಯುತ್ತಾರೆ. ಅಷ್ಟೇ ಅಲ್ಲಾ ಅವರ ಹೆಸರು ಉಸಿರು ಇರೋ ವರೆಗೂ ಅಜರಾಮರವಾಗಿರಲೆಂದು ಬೆನ್ನು, ಎದೆ ಭಾಗದಲ್ಲೆಲ್ಲಾ ಅಚ್ಚಳಿಯದಂತೆ ಅಚ್ಚೆ ಹಾಕಿಸಿಕೊಂಡಿದ್ದಾರೆ.
ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಕಣದಲ್ಲಿ ಮುಂದುವರೆಯಲು ನಿರ್ಧಾರ ?
ಗದಗ ಜಿಲ್ಲೆಯ ಅಪ್ಪು ಅಭಿಮಾನಿ ಸಂಭಾಪೂರ ಗ್ರಾಮದ ಮುತ್ತಣ್ಣ ಅಲಿಯಾಸ್ ಅಪ್ಪು ಹೊನ್ನರೆಡ್ಡಿ ಜಮೀನಿನಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ಖರ್ಚುಮಾಡಿ ಕಟ್ಟೆ ಕಟ್ಟಿ ಪುನೀತ್ ರಾಜ್ಕುಮಾರ್ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಅಪ್ಪುವಿನ ೩ನೇ ವರ್ಷದ ಪುಣ್ಯಸ್ಮರಣೆಯನ್ನು ಅಪ್ಪು ಮೂರ್ತಿಗೆ ಜಲಾಭಿಷೇಕ, ಹಾಲಿನ ಅಭಿಷೇಕ ಮಾಡಿ, ಹೂಮಾಲೆ ಹಾಕಿ, ಕರ್ಪುರ ಬೆಳಗಿ ಪೂಜೆ ಮಾಡಿದ್ದಾನೆ. ಅಪ್ಪುವಿಗೆ ಇಷ್ಟವಾದ ನಾನ್ವೆಜ್ ನೈವೇದ್ಯ ಮಾಡಿ ವಿಭಿನ್ನವಾಗಿ ಆಚರಿಸೋ ಮೂಲಕ ಅಪ್ಪು ಅಭಿಮಾನ ಮೆರೆದಿದ್ದಾನೆ.
ಪುನೀತ್ ರಾಜಕುಮಾರ್ ನಿಧನದ ನಂತರ ನಿತ್ಯ ಮನೆಯ ಜಗುಲಿಯಲ್ಲಿ ಅಪ್ಪುವಿನ ಭಾವಚಿತ್ರಕ್ಕೆ ಪೂಜೆ ಮಾಡ್ತಾರೆ. ಮುತ್ತಣ್ಣನಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಅಪ್ಪು, ೨ನೇ ಮಗನಿಗೆ ಅಭಿ ಅಂತ ನಾಮಕರಣ ಮಾಡಿದ್ದಾರೆ. ಅಪ್ಪು ಅಭಿಮಾನ ಕಡಿಮೆ ಆಗಬಾರದೆಂದು ಎದೆ ಮೇಲೆ ಭಾವಚಿತ್ರದ ಅಚ್ಚೆ ಹಾಕಿಸಿಕೊಂಡಿದ್ದಾರೆ. ಜೊತೆಗೆ ಬೆನ್ನಲ್ಲಿ ಅಪ್ಪುವಿನ ೩೦ ಚಲನಚಿತ್ರಗಳ ಹೆಸರುಗಳ ಅಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ ನನ್ನ ಉಸಿರು ಇರೋವರೆಗೂ ಅವರ ಹೆಸರು ನನ್ನಲ್ಲಿ ಅಜರಾಮರವಾಗಿರಲೆಂದು ಅಚ್ಚೆ ಹಾಕಿಸಿಕೊಂಡಿದ್ದೆನೆ ಅಂತಾನೆ ಅಭಿಮಾನಿ ಮುತ್ತಣ್ಣ.