ಬೆಂಗಳೂರು:- ನಿಗಮ ಮಂಡಳಿ ನೇಮಕ ಸಂಬಂಧ ನನ್ನ ಅಭಿಪ್ರಾಯ ಕೇಳಿಲ್ಲ ಎಂದು ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಿಗಮ ಮಂಡಳಿ ನೇಮಕಾತಿ ವಿಚಾರವಾಗಿ ನನ್ನ ಅಭಿಪ್ರಾಯ ಕೇಳಿಲ್ಲ. ಕೇಳಿದ್ರೆ ಒಳ್ಳೆಯದಾಗಿತ್ತು ಎಂದರು.
ಕಳೆದ ವಾರ ಸಭೆ ಮಾಡಿದ್ದಾರೆ. ನಮ್ಮ ಜನರಲ್ ಸೆಕ್ರೆಟರಿ ಸಿಎಂ, ಅಧ್ಯಕ್ಷರ ಜೊತೆ ಮಾತಾಡಿದ್ದಾರೆ. ಅಂತಿಮಗೊಳಿಸಬಹುದು, ನನಗೆ ಗೊತ್ತಿಲ್ಲ ಎಂದರು.
ಅವರು ನಮ್ಮ ಜೊತೆಗೆ ಚರ್ಚೆ ಮಾಡಿಲ್ಲ. ನನ್ನ ಅಭಿಪ್ರಾಯ ಕೇಳಿಲ್ಲ. ಕೇಳಿದ್ದರೆ ಒಳ್ಳೆಯದಾಗಿತ್ತು. ಯಾಕಂದ್ರೆ ನಾನು ಎಂಟು ವರ್ಷ ಅಧ್ಯಕ್ಷನಾಗಿದ್ದೆ. ಯಾರನ್ನ ಮಾಡಿದ್ರೆ ಒಳಿತು ಅಂತ ಸಲಹೆ ಕೊಡ್ತಿದ್ದೆ. ನಮ್ಮನ್ನು ಕೇಳಿ ಮಾಡಿದ್ರೆ ಚೆನ್ನಾಗಿರುತ್ತಿತ್ತು. ಹೈಕಮಾಂಡ್ ಅನುಮತಿಯಿಂದ ಅವರು ಮಾಡುತ್ತಿದ್ದಾರೆ. ಶಾಸಕರಿಗೆ, ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಆದ್ರೆ ಒಳ್ಳೆಯದು ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಭ್ರೂಣ ಹತ್ಯೆ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಸಂಪೂರ್ಣ ಆಗಲಿ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ. ಹೇಗೆ ನಡೆಯುತ್ತಿದೆ, ಇದು ರಾಕೆಟ್ ತರಹ ನಡೆಯುತ್ತಿದೆ. ತನಿಖೆಯ ನಂತರ ಎಲ್ಲವೂ ಹೊರ ಬರಲಿದೆ. ಮುಂದೆ ಏನು ಮಾಡೋದು ಅಂತ ನೋಡೋಣ ಎಂದು ಹೇಳಿದರು.