ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಶೀತಲ ಸಮರದಿಂದ,ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮತ್ತೆ ಮುಂದಕ್ಕೆ ಹೋಗಿದೆ.ಸಂಕ್ರಾಂತಿಗೆ ಸಿಹಿ ಸುದ್ಧಿ ಕೊಡುತ್ತೇವೆ ಎಂದಿದ್ದ ಸಿಎಂ,ಡಿಸಿಎಂ ಮಾತು ಮತ್ತೆ ಹುಸಿಯಾಗಿದೆ.ಸರ್ಕಾರ ನಡೆಗೆ ಶಾಸಕರು, ಕಾರ್ಯಕರ್ತರಲ್ಲಿ, ಅಸಮಾಧಾನ ಸ್ಪೋಟವಾಗುವ ಸಾಧ್ಯತೆ ಇದೆ.ಇದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
Bihula Bai: ಕಸ ಸಂಗ್ರಹಿಸಿ 20ರೂ. ದೇಣಿಗೆ ನೀಡಿದ ಅಜ್ಜಿಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ!
ಇಂದು ಅಥವಾ ನಾಳೆ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿ ಹೊರಬೀಳಲಿದೆ.ಗೂಟದ ಕಾರಿನ ಭಾಗ್ಯ ಸಿಗಲಿದೆ ಎಂಬ ಶಾಸಕರ ಕನಸು ಕಮರುವಂತೆ ಕಾಣ್ತಿದೆ.ನಿನ್ನೆಯಷ್ಟೇ ಡಿಸಿಎಂ ಡಿಕೆಶಿ ಆಗೇ ಅಗುತ್ತದೆ ಅಂತ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು.ಹಾಗಾಗಿ ಶಾಸಕರು ಹಾಗೂ ಕಾರ್ಯಕರ್ತರು ಇಂದೋ ನಾಳೆಯೂ ಆಗುತ್ತದೆ ಎಂದು ಕನಸು ಕಂಡಿದ್ದರು.ಆದ್ರೆ ಅಂತಹ ಯಾವ ಲಕ್ಷಣಗಳೂ ಕಾಣ್ತಿಲ್ಲ.ಪಕ್ಷದಲ್ಲಿರುವ ಬಣ ಬಡಿದಾಟದಿಂದ ನಿಗಮ ಮಂಡಳಿ ನೇಮಕ ಮತ್ತೆ ಮುಂದಕ್ಕೆ ಹೋಗಿದೆ.