ಬಹುತೇಕ ಮಹಿಳೆಯರು ಬಿಳಿ ಕೂದಲನ್ನು ಮರೆ ಮಾಚಲು ಬಣ್ಣ ಹಚ್ಚಿದರೆ, ಇನ್ನೂ ಕೆಲವರು ಕೂದಲನ್ನು ಕತ್ತರಿಸುತ್ತಾರೆ. ಮತ್ತೆ ಕೆವರು ಆ ಕೂದಲನ್ನೇ ಕಿತ್ತು ಹಾಕುತ್ತಾರೆ. ಆದರೆ ಇದರಿಂದ ಇನ್ನಷ್ಟು ಸಮಸ್ಯೆಗಳು ಉಂಟಾಗುತ್ತದೆ. ಏಕೆಂದರೆ ಬಿಳಿ ಕೂದಲನ್ನು ಎಳೆದು ಕಿತ್ತು ಹಾಕುವುದರಿಂದ ಸಾಕಷ್ಟು ಅಡ್ಡಪರಿಣಾಮಗಳು ಉಂಟಾಗಬಹುದು
ಅಬಕಾರಿ ನೀತಿ “ಹಗರಣ”.. ಅರವಿಂದ ಕೇಜ್ರಿವಾಲ್ ಮೂರು ದಿನ ಸಿಬಿಐ ಕಸ್ಟಡಿಗೆ..!
ಹಾಗಂತ ಕೂದಲನ್ನು ಹಾಗೆಯೇ ಬಿಟ್ಟರೆ ಯಾವುದೇ ಸಮಾರಂಭ, ಪಾರ್ಟಿ, ಫಂಕ್ಷನ್ಗಳಿಗೆ ಹೋದಾಗ ಮುಜುಗರಕ್ಕೊಳಗಾಗುತ್ತಾರೆ. ಈ ಸಮಸ್ಯೆಗೆ ಆನುವಂಶಿಕ ಕಾರಣಗಳು ಸಹ ಇರಬಹುದು. ಆದರೆ ಅನಾರೋಗ್ಯಕರ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಮಾಲಿನ್ಯದಿಂದಲೂ ಕೂಡ ಬಿಳಿ ಕೂದಲು ಬರಬಹುದು. ಈಗಂತೂ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ವಿವಿಧ ಉತ್ಪನ್ನಗಳು ಲಭ್ಯವಿವೆ. ವಿಶೇಷವಾಗಿ ಸಾಕಷ್ಟು ಜನ ಗೋರಂಟಿ (ಮೆಹಂದಿ)ಯನ್ನು ಬಳಸುತ್ತಾರೆ.
ಆದರೆ ಮನೆಯಲ್ಲಿ ನೀವು ಈ ಗೋರಂಟಿಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಮತ್ತಷ್ಟು ಗಂಭೀರ ಹಾನಿ ಉಂಟಾಗುತ್ತದೆ ಎಂದು ತಿಳಿದಿಲ್ಲ. ನಿಮ್ಮ ಕೂದಲನ್ನು ಕಪ್ಪಾಗಿಸಿಕೊಳ್ಳಲು ನೀವು ಕೂಡ ಗೋರಂಟಿಯನ್ನು ಬಳಸುತ್ತಿದ್ದರೆ, ಮೊದಲು ಅದರಿಂದಾಗುವ ಹಾನಿಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಹಾಗಾದ್ರೆ ಗೋರಂಟಿಯನ್ನು ಕೂದಲಿಗೆ ಹಚ್ಚುವುದರಿಂದಾಗೋ ಸಮಸ್ಯೆಗಳೇನು ಎಂದು ತಿಳಿಯೋಣ ಬನ್ನಿ
ಗೋರಂಟಿ ಡ್ಯಾಮೇಜ್: ನಿಮ್ಮ ಕೂದಲಿಗೆ ಗೋರಂಟಿಯನ್ನು ಆಗಾಗ ಹಚ್ಚುವುದರಿಂದ ನಿಮ್ಮ ಕೂದಲಿನ ನೈಸರ್ಗಿಕ ಕೂದಲಿನ ಬಣ್ಣವನ್ನು ಹಾನಿಗೊಳಿಸುತ್ತದೆ. ಅಲ್ಲದೇ ಈ ಗೋರಂಟಿ ಬಣ್ಣ ಮಾಸಿದಾಗ ನಿಮ್ಮ ಕೂದಲು ಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ನಿಮ್ಮ ಕೂದಲಿಗೆ ಗೋರಂಟಿ ಹಚ್ಚುವುದರಿಂದ ಕೂದಲಿನ ನೈಸರ್ಗಿಕ ತೈಲಗಳು ಹೊರಹೋಗುತ್ತವೆ. ಇದರಿಂದ ನಿಮ್ಮ ಕೂದಲು ಶುಷ್ಕವಾಗಿರುತ್ತದೆ
ನೀವು ಪದೇ ಪದೇ ನಿಮ್ಮ ಕೂದಲಿಗೆ ಗೋರಂಟಿ ಹಚ್ಚಿದರೆ, ನಿಮ್ಮ ಕೂದಲಿನ ರಚನೆಯು ಸಹ ಹದಗೆಡುತ್ತದೆ, ನಿಮ್ಮ ಕೂದಲು ಹೆಚ್ಚು ಫ್ರಿಜ್ ಆಗಿ ಕಾಣುತ್ತದೆ. ಮೆಹಂದಿಯನ್ನು ನೆತ್ತಿಗೆ ಹಚ್ಚಿದ ನಂತರ ಕೂದಲನ್ನು ಸರಿಯಾಗಿ ತೊಳೆಯದಿದ್ದರೆ, ಮೆಹಂದಿ ಕೂದಲಿನ ಬೇರುಗಳಿಗೆ ಅಂಟಿಕೊಳ್ಳುತ್ತದೆ. ಇದು ಕೂದಲು ಬೆಳವಣಿಗೆ ಮತ್ತು ಅತಿಯಾದ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಕೂದಲಿಗೆ ಗೋರಂಟಿಯನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಕೂದಲು ದುರ್ಬಲಗೊಳ್ಳುತ್ತದೆ ಮತ್ತು ಒಡೆಯುವ ಸಾಧ್ಯತೆಯಿದೆ. ಆಗಾಗ ಕೂದಲಿಗೆ ಗೋರಂಟಿ ಹಚ್ಚುವವರಿಗೆ ತಕ್ಷಣ ಬೆಳ್ಳಗಾಗುತ್ತದೆ. ಹಾಗಾಗಿ ಬಿಳಿ ಕೂದಲುಗಳನ್ನು ಮರೆಮಾಡಲು ಗೋರಂಟಿ ಹಚ್ಚಬೇಡಿ. ಕೆಲವರಿಗೆ ಗೋರಂಟಿ ಹಚ್ಚುವುದರಿಂದ ಅಲರ್ಜಿ ಸಹ ಉಂಟಾಗಬಹುದು. ಆದ್ದರಿಂದ ಇದನ್ನು ಆಗಾಗ್ಗೆ ಬಳಸುವುದನ್ನು ತಪ್ಪಿಸಿ. ಮೆಹೆಂದಿ ನೆತ್ತಿಯನ್ನು ಒಣಗಿಸುತ್ತದೆ, ಇದು ತುರಿಕೆ ಮತ್ತು ಕಿರಿಕಿರಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.