ಈರುಳ್ಳಿ ಎಣ್ಣೆ ವಿಟಮಿನ್ ಎ, ಸಿ ಮತ್ತು ಇ ಹೊಂದಿರುತ್ತದೆ. ಸಲ್ಫರ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಕೂಡ ಇದರಲ್ಲಿ ಇರುತ್ತದೆ. ಕೂದಲನ್ನು ಪೋಷಿಸುವ ಕೆರಾಟಿನ್ ಮತ್ತು ಪ್ರೊಟೀನ್ನಂತಹ ಪೋಷಕಾಂಶಗಳ ಉತ್ಪಾದನೆಗೆ ಈರುಳ್ಳಿ ಎಣ್ಣೆ ಪ್ರಯೋಜಕವಾಗಿದೆ
Good News: ತಿಂಗಳ ಆರಂಭದಲ್ಲೇ ಜನತೆಗೆ ಗುಡ್ ನ್ಯೂಸ್.. ಇಂದಿನಿಂದ LPG ಸಿಲಿಂಡರ್ ಬೆಲೆ ಇಳಿಕೆ..!
ಈರುಳ್ಳಿ ಎಣ್ಣೆಯಲ್ಲಿ ಕ್ವೆರ್ಸೆಟಿನ್ ಎಂಬ ಶಕ್ತಿಶಾಲಿ ಫ್ಲೇವನಾಯ್ಡ್ ಇದೆ. ಇವು ದೇಹದಲ್ಲಿಮ ಇತರ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ. ಕೂದಲನ್ನು ಬೇರಿನಿಂದಲೇ ಬಲಪಡಿಸುತ್ತದೆ. ಈರುಳ್ಳಿ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಸುಧಾರಿಸುವುದು ಮಾತ್ರವಲ್ಲದೆ ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸೇರಿದಂತೆ ಇತರ ಸೋಂಕುಗಳನ್ನು ಕಡಿಮೆ ಮಾಡುತ್ತದೆ.
ಈರುಳ್ಳಿ ಎಣ್ಣೆ ಮಾಡಲ ಮೊದಲು ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ. ನಂತರ ಸ್ಟವ್ ಹೊತ್ತಿಸಿ ಪಾತ್ರೆಗೆ ತೆಂಗಿನ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಇದಕ್ಕೆ ಈರುಳ್ಳಿ ತುಂಡುಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ
ಈರುಳ್ಳಿ ತುಂಡುಗಳ ಬಣ್ಣ ಬದಲಾಗುವವರೆಗೆ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆಯನ್ನು ತಣ್ಣಗಾಗಿಸಿ ಗಾಜಿನ ಬಾಟಲಿಯಲ್ಲಿ ಸೋಸಿ ಸಂಗ್ರಹಿಸಿ. ಈರುಳ್ಳಿ ಎಣ್ಣೆ ಮೆಂತ್ಯ ಕಾಳಿನ ಪುಡಿ ಬೆರೆಸಿ ತಲೆಗೆ ಹಚ್ಚಿ. ಇದರಿಂದ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು. ಹೀಗಾಗಿ ಮಾಡಿದರೆ ವಾರದಲ್ಲೇ ರಿಸಲ್ಟ್ ಗೊತ್ತಾಗಲಿದೆ.