ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಪೆಷಲಿಸ್ಟ್ ಆಫೀಸರ್ಗಳ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ರಿಲೇಶನ್ಶಿಪ್ ಮ್ಯಾನೇಜರ್ನಂತಹ ಹುದ್ದೆಗಳನ್ನು ಒಳಗೊಂಡಿರುವ ಒಟ್ಟು 1040 ಹುದ್ದೆಗಳಿಗೆ SBI SO ನೇಮಕಾತಿ 2024 ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.
ಎಸ್ಬಿಐ ಬ್ಯಾಂಕ್ನ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ವಿವರ
ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
- ಸೆಂಟ್ರಲ್ ರಿಸರ್ಚ್ ಟೀಮ್ (ಪ್ರಾಡಕ್ಟ್ ಲೀಡ್) 2
- ಸೆಂಟ್ರಲ್ ರಿಸರ್ಚ್ ಟೀಮ್ (ಸಪೋರ್ಟ್) 2
- ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ (ಟೆಕ್ನಾಲಜಿ) 1
- ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ (ಬ್ಯುಸಿನೆಸ್) 2
- ರಿಲೇಶನ್ಸಿಪ್ ಮ್ಯಾನೇಜರ್ 273
- ವಿಪಿ ವೆಲ್ತ್ 643
- ರಿಲೇಶನ್ಶಿಪ್ ಮ್ಯಾನೇಜರ್ – ಟೀಮ್ ಲೀಡ್ 32
- ರೀಜನಲ್ ಹೆಡ್ 6
- ಇನ್ವೆಸ್ಟ್ಮೆಂಟ್ ಸ್ಪೆಷಲಿಸ್ಟ್ 30
- ಇನ್ವೆಸ್ಟ್ಮೆಂಟ್ ಆಫೀಸರ್ 49
ವಿದ್ಯಾರ್ಹತೆ
ಮೇಲಿನ ಹುದ್ದೆಗಳಿಗೆ ಅನುಗುಣವಾಗಿ ಸಿಎ, ಸಿಎಫ್ಎ, ಎಂಬಿಎ, ಪಿಜಿಡಿಎಂ / ಪಿಜಿಡಿಬಿಎಂ, ಪದವಿ (ಕಾಮರ್ಸ್ / ಹಣಕಾಸು / ಅರ್ಥಶಾಸ್ತ್ರ / ನಿರ್ವಹಣೆ / ಗಣಿತ / ಸಂಖ್ಯಾಶಾಸ್ತ್ರ) , ಬಿಇ, ಬಿ.ಟೆಕ್, ಎಂಇ, ಎಂ.ಟೆಕ್, ಇತರೆ ಶಿಕ್ಷಣ ಪಡೆದಿರಬೇಕು. ಯಾವ ಹುದ್ದೆಗೆ ಏನು ವಿದ್ಯಾರ್ಹತೆ ಪಡೆದಿರಬೇಕು ಎಂಬುದನ್ನು ನಿಖರವಾಗಿ ತಿಳಿಯಲು ಸದರಿ ಹುದ್ದೆಗಳ ಕುರಿತ ನೋಟಿಫಿಕೇಶನ್ ಅನ್ನು ಓದಿರಿ.
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ | 19-07-2024 |
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ | 08-08-2024 |
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ | 08-08-2024 |
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಅಪ್ಲಿಕೇಶನ್ ಶುಲ್ಕವನ್ನು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.
ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ ಹಾಗೂ ಕಾರ್ಯಾನುಭವಗಳನ್ನು ಪ್ರತಿ ಹುದ್ದೆಗೆ ಬೇರೆ ಬೇರೆ ನಿಗದಿ ಮಾಡಲಾಗಿದೆ. ಈ ಕುರಿತು ಕಂಪ್ಲೀಟ್ ಡೀಟೇಲ್ಸ್ ಅನ್ನು ಅಧಿಸೂಚನೆಯಲ್ಲಿ ಓದಿಕೊಳ್ಳುವುದು.
ಎಸ್ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಓದಲು ಅಧಿಸೂಚನೆಗಾಗಿ ಭೇಟಿ ನೀಡಬೇಕಾದ ವೆಬ್ ವಿಳಾಸ : https://sbi.co.in/web/careers.
ಉದ್ಯೋಗ ವಿವರ
ಹುದ್ದೆಯ ಹೆಸರು | ಎಸ್ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ನೇಮಕ. |
ವಿವರ | ಭಾರತೀಯ ಸ್ಟೇಟ್ ಬ್ಯಾಂಕ್ನಿಂದ ಅಧಿಸೂಚನೆ. |
ಪ್ರಕಟಣೆ ದಿನಾಂಕ | 2024-07-19 |
ಕೊನೆ ದಿನಾಂಕ | 2024-08-08 |
ಉದ್ಯೋಗ ವಿಧ | ಗುತ್ತಿಗೆ |
ಉದ್ಯೋಗ ಕ್ಷೇತ್ರ | ಬ್ಯಾಂಕ್ ಉದ್ಯೋಗ |
ವೇತನ ವಿವರ | INR 40000 to 80000 /Month |