ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿ ಎಂ ಸಿದ್ದರಾಮಯ್ಯಗೆ ಟೆನ್ಷನ್ ಮಾತ್ರ ಕಡಿಮೆ ಆಗ್ತಿಲ್ಲ. ಪ್ರಕರಣದ ತನಿಖೆಯನ್ನು ಲೋಕಾಯುಕ್ತರು ಒಂದು ಕಡೆ ಮಾಡ್ತಿದ್ರೆ, ಇನ್ನೊಂದು ಕಡೆ ಇಡಿ ಅಧಿಕಾರಿಗಳು ಮುಡಾ ಬೆನ್ನು ಬಿದ್ದಿದ್ದಾರೆ. ಇದು ಸಾಲದು ಅಂತ ಮುಡಾ ಕೇಸ್ ಸಿಬಿಐಗೆ ವಹಿಸಬೇಕು ಅಂತ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ರು. ಇಂದು ಲೋಕಾ ಅಧಿಕಾರಿಗಳು ಪ್ರಕರಣದ ತನಿಖಾ ವರದಿಯನ್ನು ಕೋರ್ಟ್ ಗೆ ಸಲ್ಲಿಸುತ್ತಿದ್ದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಪಕ್ಷ ಉಪಚುನಾವಣೆಯಲ್ಲಿ ಮೂರಕ್ಕೆ ಮೂರೋ ಕ್ಷೇತ್ರಗಳನ್ನು ಗೆದ್ದಿರುವುದು ಸಿಎಂಗೆ ಖುಷಿಯಾಗಿದ್ರು ಮುಡಾ ಟೆನ್ಷನ್ ಮಾತ್ರ ಕಡಿಮೆ ಆಗ್ತಿಲ್ಲ. ಯಾಕಂದ್ರೆ ಮುಡಾಕೇಸ್ ಅನ್ನು ಸಿಬಿಐ ವಹಿಸಬೇಕು ಅಂತ ಹೈಕೋರ್ಟ್ ಗೆ ಹೋಗಿರುವ ಸ್ನೇಹಮಯಿಕೃಷ್ಣರ ಅರ್ಜಿ ಇಂದು ಮತ್ತೆ ವಿಚಾರಣೆಗೆ ಬರಲಿದೆ.. ಇದೇ ತಿಂಗಳು 5 ರಂದು ಹೈಕೋರ್ಟ್ ನ ಏಕ ಸದಸ್ಯ ಪೀಠದ ಮುಂದೆ ಬಂದಿದ್ದ ಅರ್ಜಿ ವಿಚಾರಣೆ ಮಾಡಿದ್ದ ನ್ಯಾಯಾಧೀಶರು ಸಿ ಎಂ ಸೇರಿದಂತೆ ಎಲ್ಲರಿಗೂ ನೋಟೀಸ್ ನೀಡುವಂತೆ ಆದೇಶ ಮಾಡಿ ಆಕ್ಷೇಪಣೆ ಇದ್ರೆ ಸಲ್ಲಿಸೋಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದ್ರು.
Health Benefits: ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?
ದೂರುದಾರ ಪರ ವಾದ ಮಂಡನೆ ಮಾಡಿದ್ದ ಹಿರಿಯ ವಕೀಲ ಕೆ ಜಿ ರಾಘವನ್. ಮುಡಾ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಜತೆಗೆ ಪಾರದರ್ಶಕ ಹಾಗು ಜನರಿಗೆ ನಂಬಿಕೆ ಬರುವ ಹಾಗೆ ತನಿಖೆ ನೆಡೆಯುತ್ತಿಲ್ಲ ಆದ್ದರಿಂದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಲು ಆದೇಶ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ರು…ವಾದ ಪ್ರತಿವಾದ ಆಲಿಸಿದ ನ್ಯಾ. ಮೂರ್ತಿಗಳು ಮುಂದಿನ ವಿಚಾರಣೆಯನ್ನು ನವೆಂಬರ್ 26 ಕ್ಕೆ ಮುಂದೂಡಿದ್ರು. ಇದೇ ವೇಳೆ ಲೋಕಾಯುಕ್ತ ಪೊಲೀಸರು ಮುಡಾ ಪ್ರಕರಣದಲ್ಲಿ ಈ ವರೆಗೂ ಆಗಿರುವ ತನಿಖಾ ವರದಿಯನ್ನು ಸಲ್ಲಿಸುವಂತೆ ಆದೇಶ ಮಾಡಿದ್ರು.
ದೂರುದಾರ ಮುಡಾ ಕೇಸ್ ಸಿಬಿಐ ಗೆ ನೀಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಇತ್ತ ಲೋಕಾ ಪೊಲೀಸರು ಮುಡಾ ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ರು. ಈ ಎರಡು ವಾರಗಳ ಅಂತರದಲ್ಲಿ ಮುಡಾದ ಮಾಜಿ ಅಧ್ಯಕ್ಷರು ಹಾಗು ಮಾಜಿ ಆಯುಕ್ತರುಗಳಿಗೆ ನೋಟೀಸ್ ಕೊಟ್ಟು ಕಚೇರಿಗೆ ಕರೆಸಿ ವಿಚಾರಣೆ ಮಾಡಿ ಹೇಳಿಕೆಗೆಗಳನ್ನು ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಿ ಎಂ ಸಿದ್ದರಾಮಯ್ಯನವರಿಗೂ ನೋಟೀಸ್ ನೀಡಿ ಕಚೇರಿಗೆ ಕೆರೆಸಿಕೊಂಡು ವಿಚಾರಣೆ ನೆಡೆಸಿ ಹೇಳಿಕೆಯನ್ನು ದಾಖಲಿಸಿಕೊಂಡು ಕಳಿಸಿದ್ರು.
ಸದ್ಯ ಮುಡಾ ಕೇಸ್ ನಲ್ಲಿ ಇಲ್ಲಿಯವರೆಗೂ ಆಗಿರು ತನಿಖಾ ವರದಿಯನ್ನು ತಯಾರು ಮಾಡಿರುವ ಲೋಕಾ ಪೊಲೀಸರು ಹಿರಿಯ ಲೋಕಾ ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ತನಿಖಾ ವರದಿಯನ್ನು ಪರಿಶೀಲಿಸಿರುವ ಲೋಕಾಯುಕ್ತ ಹಿರಿಯ ಅಧಿಕಾರಿಗಳು ಇಂದು ತಮ್ಮ ವಕೀಲರ ಮೂಲಕ ತನಿಖಾ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಿಲಿದ್ದಾರೆ. ಒಟ್ಟಿನಲ್ಲಿ ಇಂದು ಹೈಕೋರ್ಟ್ ನಲ್ಲಿ ಸಲ್ಲಿಕೆ ಯಾಗುವ ತನಿಖಾ ವರದಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ರೆ ಸಿಎಂ ಹಾಗು ಕಾಂಗ್ರೆಸ್ ನವರಿಗೆ ಮಾತ್ರ ಟೆನ್ಷನ್ ಗೆ ಕಾರಣವಾಗಿದೆ.