ಧಾರವಾಡ;- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಜಿಲ್ಲೆಯಲ್ಲಿ ಅಲೆಮಾರಿ, ಆರೆ ಅಲೆವಾರಿ ಜನಾಂಗಗಳನ್ನು ವಾಲ್ಮೀಕಿ, ನಿಗಮದಿಂದ ಬೇರ್ಪಡಿಸಿ ಅಲೆಮಾರಿ ನಿಗಮ ಅಂತಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಲೀನಗೊಳಿಸಿರುತ್ತಾರೆ, ಆದ್ದರಿಂದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯವರು ವಿವಿಧ ಸಾಲ ಮಂಜೂರಾತಿ ಮಾಡಲು ಆಯ್ಕೆ ಪಟ್ಟಿ ತಯಾರಿಸುವುದಾಗಿ ಕೇವಲ ‘ಭಜಂತ್ರಿ’ ಜನಾಂಗದವರನ್ನು ಮಾತ್ರ ಆಯ್ಕೆ ಮಾಡಿದ್ದು ಇದರಲ್ಲಿ ‘ಹರಣಶಿಕಾರಿ’ ಜನಾಂಗದವರು ಧಾರವಾಡ ಜಿಲ್ಲೆಯಲ್ಲಿ ಸುಮಾರು 20.ಜನ ಫಲಾನುಭವಿಗಳು ಅರ್ಜಿ ನೀಡಿದ್ದರೂ ಒಬ್ಬರನ್ನೂ ಆಯ್ಕೆ ಮಾಡದೇ ಈ ಸಮಾಜವನ್ನು ಕಡೆಗಣಿಸಿ ಅನ್ಯಾಯ ಮಾಡಿರುತ್ತಾರೆ.
ಹಾಗೂ ಕಲಘಟಗಿ ತಾಲೂಕಿನ ಆರೇಬಸನಕೋಪ್ಪ ಗ್ರಾಮದ ಜಮೀನಿನಲ್ಲಿ 60 ವರ್ಷಗಳಿಂದ ತಮ್ಮ ತಮ್ಮ ಸ್ವಂತ ಸ್ವಾಧೀನ ಅನುಭೋಗ ಇದ್ದ ರೈತರಿಗೆ ನ್ಯಾಯಾ ನೀಡಲು ಮನವಿ ಮಾಡಿದ್ದಾರೆ.