ಹುಬ್ಬಳ್ಳಿ : ಹುಬ್ಬಳ್ಳಿ-ಅಂಕೋಲಾ ನೂತನ ರೈಲು ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಬೆಳಗಾವಿಯಲ್ಲಿ ಮನವಿ ಸಲ್ಲಿಸಿತು.
ಪಾಕಿಸ್ತಾನ ಒಂದು ರೀತಿ ಕ್ಯಾನ್ಸರ್ ಇದ್ದ ಹಾಗೆ, ಅದಕ್ಕೆ ಚಿಕಿತ್ಸೆ ಕೊಡಲೇಬೇಕು: ಯೋಗಿ ಆದಿತ್ಯನಾಥ್!
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 2000ನೇ ಇಸ್ವಿಯಲ್ಲಿ ಹುಬ್ಬಳ್ಳಿ-ಅಂಕೋಕಾ ರೈಲು ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿತ್ತು. ಹುಬ್ಬಳ್ಳಿಯಿಂದ 47 ಕಿಮೀವರೆಗೆ ಭೂಮಿ ವಶಪಡಿಸಿಕೊಂಡು, ಮಾರ್ಗವನ್ನೂ ನಿರ್ಮಿಸಲಾಗಿತ್ತು. ಬಾಕಿ 121 ಕಿಮೀವರೆಗೆ ಮಾರ್ಗ ನಿರ್ವಣದ ಅಗತ್ಯ ಇದೆ ಎಂದು ತಿಳಿಸಲಾಯಿತು.
ಈ ಭಾಗದ ಬಹುದಿನದ ಬೇಡಿಕೆಯಾದ ಗದಗ-ಲಕ್ಷಮೇಶ್ವರ- ಯಳವಗಿ-ಹಾವೇರಿ ಹೊಸ ಮಾರ್ಗ ನಿರ್ವಣಕ್ಕೆ ಅನುಮತಿ ನೀಡಬೇಕು. ಧಾರವಾಡ-ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲು ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಬೇಕು ಹಾಗೂ ಈ ರೈಲು ಸಂಚಾರದ ವೇಗವನ್ನು 130 ಕಿಮೀ ಪ್ರತಿ ಗಂಟೆಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಹುಬ್ಬಳ್ಳಿಯಿಂದ ಮುಂಬೈಗೆ ಮತ್ತು ಬೆಳಗಾವಿಯಿಂದ ಬೆಂಗಳೂರಿಗೆ ಹೊಸ ವಂದೇ ಭಾರತ್ ರೈಲುಗಳ ಸಂಚಾರ ಪ್ರಾರಂಭಿಸಬೇಕು. ಹುಬ್ಬಳ್ಳಿಯಿಂದ ಶಿರಡಿಗೆ ನಿತ್ಯ ಎಕ್ಸ್ಪ್ರೆಸ್ ರೈಲು ಸಂಚಾರ ಪ್ರಾರಂಭಿಸಬೇಕು. ಹುಬ್ಬಳ್ಳಿ-ಜೈಪುರ-ದೆಹಲಿಗೆ ಸೂಪರ್ಫಾಸ್ಟ್ ರಾಜಧಾನಿ ನೇರ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಬೇಕು. ಹುಬ್ಬಳ್ಳಿ-ಬೆಳಗಾವಿ-ಮಿಜರ್-ಪುಣೆ ರೈಲು ಮಾರ್ಗ ದ್ವಿಪಥ ಕಾಮಗಾರಿ ಪೂರ್ಣಗೊಂಡಿದ್ದು, ಮುಂಬೈ, ಗುಜರಾತ, ರಾಜಸ್ಥಾನಕ್ಕೆ ಹೊಸ ರೈಲುಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ಮೈಸೂರು- ಬೆಂಗಳೂರು-ಮುಂಬೈ ಮಾರ್ಗದಲ್ಲಿ ಅರಸಿಕೆರೆ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಿರಜ್, ಪುಣೆ, ಕಲ್ಯಾಣಂ, ಥಾಣೆ, ದಾದರ, ಮುಂಬೈ ಸಿಎಸ್ಎಮಟಿಯಲ್ಲಿ ನಿಲುಗಡೆ ಸೌಲಭ್ಯ ಒದಗಿಸುವ ಹೊಸ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸಬೇಕು. ಬೆಂಗಳೂರು- ಜೋಧಪುರ ಮಧ್ಯೆ ಎಕ್ಸ್ಪ್ರೆಸ್ ರೈಲುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಡಿಬೇಕು ಎಂದು ಆಗ್ರಹ ಮಾಡಿದರು. ಕಾಚಿಗುಡದಿಂದ ಹುಬ್ಬಳ್ಳಿಗೆ ನಿತ್ಯ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯ ಮಾಡಿದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಗಿರೀಶ ಸುಂಕದ, ಗೌತಮ ಬೋಲೆಚಾ, ಪ್ರಕಾಶ ಕಟಾರಿಯಾ ಮುಂತಾದವರು ಇದ್ದರು.