ಕೋಲಾರ – ಅಂಗನವಾಡಿ ಮತ್ತು ಕಾರ್ಖಾನೆಗಳು ಖಾಸಗಿ ಶಾಲೆ ನರ್ಸಿಂಗ್ ಹೋಮ್, ಮಸೀದಿ ಮದ್ರಸಾ ಹಾಗೂ ದೇವಾಲಯಗಳಲ್ಲಿ ಹಾಗೂ ಎಲ್ಲಾ ವಹಿವಾಟುಗಳಿಗೆ ಕಡ್ಡಾಯ ಕನ್ನಡ ನಾಮ ಫಲಕಾ ಶೇಕಡ 60 ರಷ್ಟು ಅಳವಡಿಸುವಂತೆ ಕ್ರಮ ಕೈಗೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆ ಕೋಲಾರ ಘಟಕದ ವತಿಯಿಂದ ಜಿಲ್ಲಾಧಿಕಾರಿ ರವಿ ರವರಿಗೆ ಮನವಿ ಸಲ್ಲಿಸಲಾಯಿತು.
ಶಸ್ತ್ರಾಸ್ತ್ರ ಇಳಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು: ಕೆಂಪು ಉಗ್ರರ ಜೊತೆ ಸಿದ್ದರಾಮಯ್ಯ ಸಭೆ!
ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್ ಈ ಮೊದಲು ಕೋಲಾರ ನಗರಸಭಾ ಪೂರಾ ಇಟ್ಟರಿಗೆ ನಗರಸಭಾ ವ್ಯಾಪ್ತಿಗೆ ಬರುವ ಅಂಗಡಿ ಮತ್ತು ಕಾರ್ಖಾನೆ ಮಾಲೀಕರ ಸಭೆ ಕರೆದು 28 ಫೆಬ್ರವರಿ 2024 ರ ಒಳಗೆ ಸರ್ಕಾರ ಆದೇಶದಂತೆ ನಡೆದುಕೊಳ್ಳುವಂತೆ ಸೂಚಿಸಿದ್ದರು. ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಯಥಾಸ್ಥಿತಿಯಾಗಿ ನಾಮಪಲಕಗಳು ಹಾಗೆಯೇ ಉಳಿದಿದೆ. ಈ ಹಿಂದೆ ಇದ್ದಂತಹ ಜಿಲ್ಲಾಧಿಕಾರಿಗಳಿಗೆ ಮತ್ತು ಪೌರಾಹಿತರಿಗೆ ಸಹ ಮನವಿ ನೀಡಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.