ದಾವಣಗೆರೆ: ಜ.22 ರಂದು ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ದೇವರ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು ಅಂದು ದಾವಣಗೆರೆ ಜಿಲ್ಲಾದ್ಯಂತ ರಜೆ ಘೋಷಣೆ ಮಾಡಬೇಕೆಂದು ಮಾತೃ ದೇವೂ ಟ್ರಸ್ಟ್ ಮತ್ತು ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಕಳೆದ ಹಲವು ದಶಕಳಿಂದ ರಾಮ ಮಂದಿರ ನಿರ್ಮಾಣ ಆಗಬೇಕೆಂಬುದು ಕೋಟ್ಯಂತರ ಜನರ ಆಶಯವಾಗಿತ್ತು. ಆ ಕನಸು ನನಸಾಗುತ್ತಿದೆ, ಆಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ.
ಈ ಅಪರೂಪದ ಕ್ಷಣಗಳಿಗೆ ನೇರವಾಗಿ ಸಾಕ್ಷಿಯಾಗಲು ಎಲ್ಲರಿಂದಲೂ ಸಾಧ್ಯವಿಲ್ಲ. ಹೀಗಾಗಿ ಅಂದಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು, ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ಕಾರಣ ದಾವಣಗೆರೆ ಜಿಲ್ಲೆಯಾದ್ಯಂತ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಾಡದ ಆನಂದರಾಜ್. ಮಾಜಿ ಮಹಾಪೌರ ಎಸ್.ಟಿ.ವಿರೇಶ್,ಪೋತಲು ಶ್ರೀನಿವಾಸ್,ಶ್ರೀಮತಿ ಚೇತನಾ,ಶ್ರೀಮತಿ ಭಾಗ್ಯ ಪಿಸಾಳೆ,ಚಂದ್ರಕಲಾ ಎಂ,ನವೀನ್ ಗುಬ್ಬಿ,ಗಂಗಾಧರ ಜಿ.ವಿ, ಶಿವನಗೌಡ ಪಾಟೇಲ್,ಟಿಂಕರ್ ಮಂಜಣ್ಣ ಇನ್ನೂ ಮುಂತಾದ ಹಿಂದೂ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.