ರಾಮನಗರ:- ಕೋಟ್ಯಾಧೀಶ ವ್ಯಕ್ತಿಯೊಬ್ಬ ಜಸ್ಟ್ ಜೀಬ್ರಾ ಲೈನ್ ಕ್ರಾಸ್ ಮಾಡಿದ್ದಕ್ಕೆ ಕಾರಿನಿಂದ ಇಳಿದುಬಂದು ಟ್ರಾಫಿಕ್ ಪೊಲೀಸ್ ಬಳಿ ಕ್ಷಮೆಯಾಗಿಸಿದ್ದಾರೆ.
ಕೋಟ್ಯಾಧೀಶ್ವರನ ಈ ಸೌಮ್ಯತೆ ಟ್ರಾಫಿಕ್ ಪೊಲೀಸ್ ಮನಸೋತು ಬಿಟ್ಟು ಕಳುಹಿಸಿದ್ದಾರೆ. ಈ ಒಂದು ಅಪರೂಪದ ಘಟನೆ ರಾಮನಗರದಲ್ಲಿ ನಡೆದಿದೆ.
ವೇಗವಾಗಿ ಹೋಗುತ್ತಿದ್ದಾಗ ದಿಢೀರ್ ಸಿಗ್ನಲ್ ಬಿದ್ದಿದೆ. ಕೂಡಲೇ ಫೇರಾರಿ ಕಾರು ಚಾಲನ ಬ್ರೇಕ್ ಹಾಕಿದ್ದಾನೆ. ಆದರೂ ಸಹ ಸಹ ಕಾರು ಜೀಬ್ರಾ ಲೈನ್ ಕ್ರಾಸ್ ಆಗಿದೆ. ಇದರಿಂದ ಎಚ್ಚೆತ್ತ ಚಾಲಕ, ಕಾರಿನಿಂದ ಇಳಿದು ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸ್ ಬಳಿ ಹೋಗಿ ಕ್ಷಮೆ ಕೋರಿದ್ದಾರೆ. ಕೋಟ್ಯಾಧೀಶ್ವರನ ಸೌಮ್ಯತೆ ಕಂಡು ಟ್ರಾಫಿಕ್ ಪೊಲೀಸ್, ಕಾರಿಗೆ ಯಾವುದೇ ದಂಡ ಹಾಕದೇ ಬಿಟ್ಟು ಕಳುಹಿಸಿದ್ದಾರೆ.
ವೇಗದಲ್ಲಿದ್ದ ಕಾರನ್ನು ಚಾಲಕ ಕಂಟ್ರೋಲ್ ಮಾಡಿದ್ದಾರೆ. ಆದರೂ ಸಹ ಸಿಗ್ನಲ್ ದಿಢೀರ್ ಬಿದ್ದಿದ್ದರಿಂದ ಕಾರು ಜೀಬ್ರಾ ಲೈನ್ ಕ್ರಾಸ್ ಆಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಬರುವ ಮುಂಚೆಯೇ ಕಾರು ಮಾಲೀಕ ಸ್ವತಃ ತಾವೇ ಕಾರನಿಂದ ಕೆಳಗಿಳಿದು ಹೋಗಿ ಕ್ಷಮೆಯಾಚಿಸಿದ್ದಾರೆ.
ಒಮ್ಮೆಲೆ ಸಿಗ್ನಲ್ ಬಿತ್ತು. ಆದರೂ ಲೈನ್ ಕ್ರಾಸ್ ಆಯ್ತು. ಅದಕ್ಕೆ ಕಾರು ನಿಲ್ಲಿಸಿದೆ ಎಂದು ತಪ್ಪೊಪ್ಪೊಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್, ದಂಡ ಹಾಕದೇ ಫೇರಾರಿ ಕಾರು ಬಿಟ್ಟು ಕಳುಹಿಸಿದ್ದಾರೆ