ಬಾರದ ಲೋಕಕ್ಕೆ ತೆರಳಿದ ಅಪರ್ಣಾ ಅವರಿಗೆ ಕವನದ ಮೂಲಕ ಪತಿ ನಾಗರಾಜ್ ವಸ್ತಾರೆ ದುಃಖ ತೋಡಿಕೊಂಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ನಾಗರಾಜ್ ವಸ್ತಾರೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಕಳಪೆ ಆಹಾರ: ಹೋಟೆಲ್ ಗಳ ವಿರುದ್ಧ ಭರ್ಜರಿ ಕಾರ್ಯಾಚರಣೆಗಿಳಿದ ಆಹಾರ ಇಲಾಖೆ!
ಅಪರ್ಣಾ ನೆನೆದು ಪತಿ ನಾಗರಾಜ್ ವಸ್ತಾರೆ ಕಣ್ಣೀರಿಟ್ಟಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅಪರ್ಣ ಪತಿ ನಾಗರಾಜ್ ವಸ್ತಾರೆ (Nagaraj Vastarey) ಪತ್ನಿಯ ಮನದಾಳ ಮಾತು ಹೇಳಿಕೊಂಡಿದ್ದಾರೆ. ಅಪರ್ಣಾಗೆ ಶಾಸ್ವಕೋಶ ಕ್ಯಾನ್ಸರ್ (Lung Cancer) ಅಂತಾ ಜುಲೈನಲ್ಲಿ ಗೊತ್ತಾಯ್ತು. ವೈದ್ಯರು ಆರು ತಿಂಗಳು ಬದುಕಬಹುದು ಅಂತಾ ಹೇಳಿದ್ದರು. ಆದರೆ ಅವಳು ಛಲಗಾತಿ, ನಾನು ಬದುಕ್ತೀನಿ ಅಂತಾ ಇದ್ಲು. ಒಂದೂವರೆ ವರ್ಷದಿಂದ ಛಲದಿಂದ ಬದುಕಿದ್ಲು. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಇಬ್ಬರೂ ಸೋತಿದ್ದೇವೆ ಅಂತ ಪತ್ನಿಯನ್ನು ನೆನೆದು ಕಣ್ಣೀರಾದ್ದಾರೆ.
ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು
ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ
ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆ
ಯಲ್ಲಿ
ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.
ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು
ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ