ಅನುಪಮಾ ಪರಮೇಶ್ವರನ್ ನಟನೆಯ ಟಿಲ್ಲು ಸ್ಕ್ವೇರ್ ಚಿತ್ರ ಇತ್ತೀಚೆಗೆ ರಿಲೀಸ್ ಆಗಿದ್ದು ಕಲೆಕ್ಷನ್ ನಲ್ಲಿ ಕಮಾಲ್ ಮಾಡ್ತಿದೆ. ಸಿನಿಮಾ ತೆರೆಕಂಡ ಬಳಿಕ ನಟಿ ಅನುಪಮಾ ಪರಮೇಶ್ವರನ್ ಪಡ್ಡೆ ಹುಡುಗರ ಹೃದಯ ಕದ್ದಿದ್ದಾರೆ. ಈ ಸಿನಿಮಾ ಸಕ್ಸಸ್ ಆದ ಬಳಿಕ ನಟಿಯ ಸಂಭಾವನೆ ಕೂಡ ದುಪ್ಪಟ್ಟಾಗಿದೆ.
ಇದುವರೆಗೂ ಹೋಮ್ಲಿ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದ ನಟಿ ಅನುಪಮಾ ಪರಮೇಶ್ವರನ್ ಇದೀಗ ಹಾಟ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಟಿಲ್ಲು ಸ್ಕ್ವೇರ್’ ಚಿತ್ರದ ಮೂಲಕ ಬೋಲ್ಡ್ ಪಾತ್ರದಲ್ಲಿ ನಟಿಸಿರುವ ಅನುಪಮಾ ಸಂಭಾವನೆ ಕೂಡ ಹೆಚ್ಚಾಗಿದೆ.
ಕಳೆದ ವರ್ಷ ‘ಕಾರ್ತಿಕೇಯ 2’ ಸಿನಿಮಾ ಆದ್ಮೇಲೆ ‘ಟಿಲ್ಲು ಸ್ಕ್ವೇರ್’ ಚಿತ್ರದ ಮೂಲಕ ಕೂಡ ಬ್ರೇಕ್ ಸಿಕ್ಕಿದೆ. 40ರಿಂದ 60 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಟಿ, ಒಂದೂವರೆ ಕೋಟಿ ರೂ.ವರೆಗೂ ಚಾರ್ಜ್ ಮಾಡುತ್ತಿದ್ದಾರಂತೆ.
ಇದೀಗ ಬರುತ್ತಿರುವ ಸಿನಿಮಾ ಆಫರ್ಗಳಿಗೆ ದುಬಾರಿ ಸಂಭಾವನೆಗೆ ನಟಿ ಬೇಡಿಕೆ ಇಡುತ್ತಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಸು ಗುಸು ಶುರುವಾಗಿದೆ. ಈ ಮೂಲಕ ಅನುಪಮಾ ದುಬಾರಿ ನಟಿಯಾಗಿದ್ದಾರೆ.