ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿದ್ದ ದರ್ಶನ್ ಅವರಿಗೆ ಜಾಮೀನು ಸಿಕ್ಕಿದೆ. ಅದಲ್ಲದೆ ಪವಿತ್ರಾ ಗೌಡ ಸೇರಿ 7 ಜನರು ಡಿಸೆಂಬರ್ 13ರಂದು ಜಾಮೀನು ಪಡೆದಿದ್ದಾರೆ. ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ಅನುಕುಮಾರ್ ರಿಲೀಸ್ ಆಗಿದ್ದು, ಇದೀಗ ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದು ಹೊರಗೆ ಬಂದಿದ್ದಾರೆ. ಜೈಲಿನಿಂದ ಹೊರಬಂದ ಅನುಕುಮಾರ್ ಕೈಯಲ್ಲಿ ಭಗವದ್ಗೀತೆ ಪುಸ್ತಕ ಇದ್ದು ಜೈಲಿನಲ್ಲಿ ಭಗವದ್ಗೀತೆ ಪುಸ್ತಕ ಓದುತ್ತಾ ಸಮಯ ಕಳೆದಿದ್ದ ಎನ್ನಲಾಗಿದೆ.
ಅಪ್ಪಿತಪ್ಪಿಯೂ ಈ ಆಹಾರಗಳ ಜೊತೆ ಬಾಳೆಹಣ್ಣು ತಿನ್ನಬೇಡಿ: ತಿಂದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್!
ದರ್ಶನ್ ಸ್ನೇಹಿತರು ನೀಡಿದ್ದ ಭಗವದ್ಗೀತೆ ಪುಸ್ತಕ ಪರಪ್ಪನ ಅಗ್ರಹಾರ ಜೈಲಿನಿಂದ ವರ್ಗಾವಣೆ ವೇಳೆ ಅನುಕುಮಾರ್ಗೆ ನೀಡಿದ್ದರು ನಟ ದರ್ಶನ್. ದರ್ಶನ್ ನೀಡಿದ ಭಗವದ್ಗೀತೆ ಪುಸ್ತಕ ಜೋಪಾನವಾಗಿಟ್ಟುಕೊಂಡಿರೋ ಅನುಕುಮಾರ್ ಅದನ್ನು ಕೈಯಲ್ಲೇ ಹಿಡಿದಿದ್ದರು. ಬೇಲ್ ಶ್ಯೂರಿಟಿ ತಡವಾದ ಹಿನ್ನೆಲೆ ಇಂದು ಬಿಡುಗಡೆಯಾಗಿದೆ. ಬಿಡುಗಡೆ ಬಳಿಕ ಸಹೋದರನ ಜೊತೆ ತೆರಳಿದ ಅನುಕುಮಾರ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ.
ಇತ್ತ ಸ್ಯಾಂಡಲ್ವುಡ್ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿದ ಮೇಲೆಯೂ ಅವರು 2 ದಿನ ಆಸ್ಪತ್ರೆಯಲ್ಲಿಯೇ ಇದ್ದರು. 2 ದಿನಗಳ ಟ್ರೀಟ್ಮೆಂಟ್ ನಂತರ ನಟ ಡಿಸ್ಚಾರ್ಜ್ ಆಗಿದ್ದಾರೆ.