ಬೆಂಗಳೂರು:- ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಗೆ ಯುವಕ ಬಲಿಯಾಗಿರುವ ಘಟನೆ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜರುಗಿದೆ.
IPL 2025: RCB ಫ್ಯಾನ್ಸ್ ಗೆ ಗುಡ್ ನ್ಯೂಸ್: ತಂಡಕ್ಕೆ ಈ ಮೂವರ ಎಂಟ್ರಿ ಪಕ್ಕಾ!
ರಾತ್ರಿ 12.15 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬಸ್ ನಿಲ್ದಾಣದಲ್ಲಿವಿಶೇಷ ಚೇತನ ಯುವಕ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತಿವೇಗದಿಂದ ಬಿಎಂಟಿಸಿ ಬಸ್ ಬಂದಿದೆ. ಬಳಿಕ ನಿಯಂತ್ರಣಕ್ಕೆ ಸಿಗದೇ ಯುವಕನ ಮೇಲೆ ಬಸ್ ಮುಂದಿನ ಚಕ್ರ ಹರಿದಿದೆ.
ಕೂಡಲೇ ಕೆಳಗೆ ಬಿದ್ದ ಚಾಲಕ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಕೆಎ 57 ಎಫ್ 4330 ನಂಬರ್ ನ ಬಿಎಂಟಿಸಿ ಬಸ್ ಇದಾಗಿದ್ದು, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಮೃತ ಯುವಕನ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಅಲ್ಲದೇ ಬಿಎಂಟಸಿ ಬಸ್ ಚಾಲಕ ಗೋಪಾಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಬಸ್ ನಿಲ್ದಾಣ ಎಂಟ್ರಿ ಪಾಯಿಂಟ್ ನಲ್ಲಿ ಅತೀ ವೇಗದಿಂದ ಬರುವ ಬಸ್ಸುಗಳು ಇದೇ ಕಾರಣದಿಂದಾಗಿ ಅಪಘಾತ ಸಂಭವಿಸಿದೆ.