ದಾವಣಗೆರೆ: ಮೈಸೂರು, ಚಾಮರಾಜನಗರ, ರಾಮನಗರ, ಹಾವೇರಿ, ತುಮಕೂರು ಹೀಗೆ ಹಲವೆಡೆ ಮೈಕ್ರೋ ಫೈನಾನ್ಸ್ಗಳ ಅಬ್ಬರ ಜೋರಾಗಿದೆ. ಹಣ ಇಲ್ದೇ ಇರೋ ಸಣ್ಣ, ಅತಿ ಸಣ್ಣ ರೈತರು, ಕೂಲಿ ಕಾರ್ಮಿಕರೇ ಇವರ ಟಾರ್ಗೆಟ್. ತೆರೆದಿದೆ ಬಾ ಅತಿಥಿ ಅಂತ ಸಾಲ ಕೊಡುವ ಖಾಸಗಿ ಫೈನಾನ್ಸ್ಗಳು ಸಾಲ ಕೊಟ್ಟ ಬಳಿಕ ಜೀವ ಹಿಂಡುವ ಕೆಲಸ ಮಾಡ್ತಿವೆ.
ಇದೀಗ ಖಾಸಗಿ ಫೈನಾನ್ಸ್ ಕಾಟ ಹಾಗೂ ಸಾಲಕ್ಕೆ ಹೆದರಿ ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊನ್ನಾಳಿ ಪಟ್ಟಣದ ರಾಘವೇಂದ್ರ ಮಠದ ಮುಂಭಾಗವಿರುವ ತುಂಗಾಭದ್ರ ನದಿಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಹೊನ್ನಾಳಿ ಪಟ್ಟಣದ ನಿವಾಸಿ ಯಾಗಿದ್ದ ಸರ್ಕಾರಿ ಶಾಲೆ ಶಿಕ್ಷಕಿ ಪುಷ್ಪಲತ (46) ಅತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ ಎಂದು ಗುರುತಿಸಲಾಗಿದೆ.
Chanakya Niti: ವಿವಾಹಿತ ಪುರುಷರು ಬೇರೆ ಮಹಿಳೆಯಗೆ ಆಕರ್ಷಿತರಾಗೋದ್ಯಾಕೆ..? ಚಾಣಕ್ಯ ನೀಡಿದ 5 ಕಾರಣಗಳು ಇಲ್ಲಿದೆ
ಹೊನ್ನಾಳಿ ತಾಲ್ಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಯಾಗಿದ್ದ ಪುಷ್ಪಲತಾ ಅವರು, ಹೊನ್ನಾಳಿ ಪಟ್ಟಣದಲ್ಲಿ ಮನೆ ಕಟ್ಟಲು ಶಿವಮೊಗ್ಗ ಮೂಲದ ಖಾಸಗಿ ಮೈಕ್ರೋ ಫೈನಾನ್ಸ್ ಹಾಗೂ ಕೈಗಡವಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಕಳೆದ 20 ದಿನಗಳ ಹಿಂದೆ ಪುಷ್ಪಲತ ದಂಪತಿ ವಿರುದ್ದ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಅದಲ್ಲದೆ ಹೊನ್ನಾಳಿ ಠಾಣೆ ಪೊಲೀಸರು ಪೈನಾನ್ಸ್ ಕಂಪನಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದರು. ಆದ್ರೆ ಇಂದು ಬೆಳಗಿನ ಜಾವ ತುಂಗಾಭದ್ರ ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿಕ್ಕಾರೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶಿಕ್ಷಕಿಯ ಮೃತದೇಹ ಹುಡುಕಾಟ ನಡೆಸುತ್ತಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.