ಬೆಂಗಳೂರು:- ಕರ್ನಾಟಕದಲ್ಲಿ ಫೈನಾನ್ಸ್ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗಿತ್ತಿದ್ದು, ರಾಜ್ಯ ಸರ್ಕಾರವು ಕೂಡ ಹಲವು ಕಠಿಣ ಕ್ರಮಕ್ಕೆ ಮುಂದಾಗಿದೆ.
ಇನ್ಫೋಸಿಸ್ ಸಹ ಸಂಸ್ಥಾಪಕನಿಗೆ ಬಿಗ್ ರಿಲೀಫ್: ಜಾತಿ ನಿಂದನೆ ಪ್ರಕರಣಕ್ಕೆ ಹೈಕೋರ್ಟ್ ತಡೆ!
ರಾಜಾಜಿ ನಗರದ ಪ್ರಕಾಶ್ ನಗರದಲ್ಲಿ ಫೈನಾನ್ಶಿಯರ್ ಕಿರುಕುಳಕ್ಕೆ ನೊಂದು ಉದ್ಯಮಿ ನೇಣಿಗೆ ಶರಣಾದ ಘಟನೆ ಜರುಗಿದೆ.
ಅರುಣ್ ಮೃತ ವ್ಯಕ್ತಿ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತ ಅರುಣ್ ಸಣ್ಣಪುಟ್ಟ ಉದ್ಯಮ ನಡೆಸಿಕೊಂಡಿದ್ದರು. ಸುಮಾರು 20 ದಿನಗಳ ಹಿಂದೆ ತಮ್ಮ ಬಳಿ ಇದ್ದ ಕಾರನ್ನು ದಿನೇಶ್ ಎಂಬ ಫೈನಾನ್ಸಿಯರ್ ಬಳಿ ಅಡವಿಟ್ಟು 6 ಲಕ್ಷ ರೂ. ಹಣ ಪಡೆದಿದ್ದರು.
ಕೊಟ್ಟ ಡೆಡ್ ಲೈನ್ ಅಷ್ಟರಲ್ಲಿ 6 ಲಕ್ಷ ರೂ. ಹಣ ಹೊಂದಿಸಲು ಆಗಿರಲ್ಲ. 22 ರಂದು 1.5 ಲಕ್ಷ ಹಣ ಹೊಂದಿಸಿಕೊಂಡು ದಿನೇಶ್ ಕೊಡಲು ಹೋಗಿದ್ದಾರೆ. ನಿಗದಿತ ದಿನಾಂಕ ಪೂರ್ತಿ ಹಣ ಕೊಡದೆ ಇದ್ದ ಕಾರಣ ಅರುಣ್ಗೆ ನಿಂದಿಸಿ ಹಣ ಕೊಡೋದಕ್ಕೆ ಆಗದೇ ಇದ್ದರೆ ನೇಣು ಹಾಕಿಕೊಂಡು ಸಾಯಿ ಎಂದು ಕಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.