ಬೆಂಗಳೂರು: ಇತ್ತೀಚಿಗೆ ರಾಜ್ಯದಲ್ಲಿ ಯುವಕರು ಮತ್ತು ಬಾಲಕರು ಹೃದಯಾಘತದಿಂದ ಸಾವನ್ನಪ್ಪುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಘಟನೆಗಳು ಪೋಷಕರಲ್ಲಿ ತೀರ್ವ ಆತಂಕ ಮೂಡಿಸಿದೆ ಮತ್ತು ವೈದ್ಯರಿಗೆ ಸವಾಲಿನ ಸಂಗತಿಯಾಗಿದೆ.
Limited-Time Deal: ವಿದೇಶಿ ಪ್ರವಾಸ ಮಾಡುವವರಿಗೆ ಗೋಲ್ಡನ್ ಆಫರ್: ಜಸ್ಟ್ 11 ರೂಪಾಯಿಗೆ ವಿಮಾನ ಟಿಕೆಟ್..!
ಈಗ ಹೃದಯಘಾತದಿಂದ ಕಾರಿನಲ್ಲೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ. ಅಶ್ವಿನ್ ಕುಮಾರ್ (೪೨) ಮೃತ ವ್ಯಕ್ತಿಯಾಗಿದ್ದು, ಕೊಡಿಗೆಹಳ್ಳಿ ಬ್ರಿಡ್ಜ್ ಸಮೀಪದ ಖಾಸಗಿ ಆಸ್ಪತ್ರೆ ಮುಂಭಾಗ ಅಶ್ವಿನ್ ಕುಮಾರ್ ಮೃತದೇಹ ಕಾರಿನಲ್ಲಿ ಶವವಾಗಿ ಪತ್ತೆಯಾಗಿದೆ.
ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಅಶ್ವಿನ್ ಕುಮಾರ್ ಮುತ್ಯಾಲ ನಗರದ ನಿವಾಸಿಯಾಗಿದ್ದು, ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲು ಮಾಡಲಾಗಿದೆ.