ಉಡುಪಿ: ಪ್ರಥಮ ಪಿಯುಸಿ ವಿದ್ಯಾರ್ಥಿ (PUC Student) ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಅಫ್ಕಾರ್ (17) ಮೃತಪಟ್ಟ ವಿದ್ಯಾರ್ಥಿ. ಈತ ಉಡುಪಿ (Udupi) ಕಲ್ಯಾಣಪುರ ಮಿಲಾಗ್ರಿಸ್ ಪಿಯು ಕಾಲೇಜು ವಿದ್ಯಾರ್ಥಿಯಾಗಿದ್ದಾನೆ.
Winter Health: ಚಳಿಗಾಲದಲ್ಲಿ ಗಂಟಲು ನೋವು, ಕೆಮ್ಮು ಸಮಸ್ಯೆಯೇ?: ಈ ವಸ್ತುಗಳನ್ನ ತಯಾರಿಸಿ ಟೀ ಕುಡಿದು ನೋಡಿ!
ಅಫ್ಕಾರ್, ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದನು. ಅಂತೆಯೇ ಡಿಸೆಂಬರ್ 6 ರಂದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದ. ಡಿ.18 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಮನೆಗೆ ಮರಳಿದ್ದ. ಊರಿಗೆ ಹಿಂದಿರುಗಿದ ಸಂದರ್ಭ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಹೀಗಾಗಿ ಮತ್ತೆ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಅಫ್ಕಾರ್ ಮೃತಪಟ್ಟಿದ್ದಾನೆ.