ಟೀಂ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿ ಹಬ್ಬುತ್ತಿದೆ. ಕಳೆದ ವರ್ಷ 2024ರಲ್ಲಿ, ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಘೋಷಿಸಿದ್ದರು. ಈಗ ಹೊಸ ವರ್ಷದ ಸಂದರ್ಭದಲ್ಲೇ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಸುದ್ದಿ ಸಂಚಲನವನ್ನು ಸೃಷ್ಟಿಸಿದೆ.
ಇದೀಗ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ಸ್ಪೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಜೀವನದಲ್ಲೂ ವಿಚ್ಚೇದನ ಬಿರುಗಾಳಿ ಆವರಿಸಿದೆ. 20 ವರ್ಷಗಳ ದಾಂಪತ್ಯದ ಬಳಿಕ ಅವರು ತಮ್ಮ ಪತ್ನಿ ಆರತಿ ಅಹ್ಲಾವತ್ಗೆ ವಿಚ್ಛೇದನ ನೀಡುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ. 2004ರಲ್ಲಿ ವಿವಾಹವಾಗಿದ್ದ ಜೋಡಿ ಇನ್ಸ್ಟಾಗ್ರಾಮ್ನಲ್ಲಿ ಒಬ್ಬರನ್ನೊಬ್ಬರು ಈಗಾಗಲೇ ಅನ್ಫಾಲೋ ಮಾಡಿಕೊಂಡಿದ್ದಾರೆ. ಇದರೊಂದಿಗೆ ಇವರಿಬ್ಬರ ರಿಲೇಷನ್ಷಿಪ್ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.
Relationship Tips: ಸಂಗಾತಿ ಜೊತೆ ಗಟ್ಟಿ ಸಂಬಂಧ ನಿಭಾಯಿಸೋದು ಹೇಗೆ..? ಇಲ್ಲಿದೆ ಟಿಪ್ಸ್
ಇನ್ನು ಇವರ ಕುಟುಂಬದ ಆಪ್ತ ಮೂಲಗಳ ಪ್ರಕಾರ, ಈಗಾಗಲೇ ಹಲವು ತಿಂಗಳುಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದು, ಶೀಘ್ರದಲ್ಲಿಯೇ ಇಬ್ಬರ ವಿಚ್ಛೇದನ ಖಚಿತವಾಗಬಹುದು ಎನ್ನಲಾಗಿದೆ. ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದಾಗಿಯೇ ಕ್ರಿಕೆಟ್ ವಲಯದಲ್ಲಿ ದೊಡ್ಡ ಹೆಸರು ಮಾಡಿದ್ದ ವೀರೇಂದ್ರ ಸೆಹ್ವಾಗ್ ಹಾಗೂ ಆರತಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2007ರಲ್ಲಿ ಹಿರಿಯ ಪುತ್ರ ಆರ್ಯವೀರ್ ಜನಿಸಿದ್ದರೆ, 2010ರಲ್ಲಿ 2ನೇ ಪುತ್ರ ವೇದಾಂತ್ ಜನಿಸಿದ್ದ.
ದೀರ್ಘ ಅವಧಿಯ ಕಾಲ ಜೊತೆಯಾಗಿಯೇ ಸಂಸಾರ ಮಾಡಿದ್ದರೂ, ಇತ್ತೀಚಿನ ಬೆಳವಣಿಗಳು ಇವರಿಬ್ಬರ ನಡುವಿನ ಅಂತರ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇತ್ತೀಚಿನ ಬೆಳವಣಿಗೆಗಳು ಹೆಚ್ಚುತ್ತಿರುವ ಅಂತರದ ಸುಳಿವು ನೀಡುತ್ತವೆ.
ದೀಪಾವಳಿ ಆಚರಣೆಯ ಸಮಯದಲ್ಲಿ ವೀರೇಂದ್ರ ತಮ್ಮ ಪುತ್ರರು ಮತ್ತು ಅವರ ತಾಯಿಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಆದರೆ ಆ ಫೋಟೋದಲ್ಲಿ ಆರತಿಯ ಯಾವುದೇ ಉಲ್ಲೇಖ ಅಥವಾ ಚಿತ್ರಗಳು ಇರುವುದನ್ನು ಉಲ್ಲೇಖಿಸಿಲ್ಲ. ಈ ಎಲ್ಲಾ ಬೇಳವಣಿಗೆಯಿಂದ ಈ ಸ್ಟಾರ್ ದಂಪತೊ ವಿಚ್ಛೇದನ ಬಹುತೇಕ ಖಚಿತ ಎನ್ನಲಾಗಿದೆ.