ನವದೆಹಲಿ:- ಕೇಜ್ರಿವಾಲ್ ಬಂಧನ ಬಳಿಕ ಎಎಪಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಸಚಿವ ರಾಜ್ಕುಮಾರ್ ಆನಂದ್ ರಾಜೀನಾಮೆ ನೀಡಿದ್ದಾರೆ.
ಎಎಪಿಯ ದೆಹಲಿ ಸಚಿವ ರಾಜ್ ಕುಮಾರ್ ಆನಂದ್ ಸರ್ಕಾರ ಮತ್ತು ಪಕ್ಷವನ್ನು ತೊರೆದಿದ್ದಾರೆ. ಭ್ರಷ್ಟಾಚಾರ ವಿರುದ್ಧ ಹೋರಾಡುವ ಕುರಿತು ಎಎಪಿಯ ಬಲವಾದ ಸಂದೇಶವನ್ನು ನೋಡಿದ ನಂತರ ನಾನು ಎಎಪಿಗೆ ಸೇರಿದ್ದೆ. ಇಂದು ಪಕ್ಷ ಭ್ರಷ್ಟತೆ ಮಧ್ಯೆ ಸಿಲುಕಿದೆ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಸಮಾಜ ಕಲ್ಯಾಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಚಿವರಾಗಿದ್ದ ಆನಂದ್ ಸ್ಪಷ್ಟಪಡಿಸಿದ್ದಾರೆ.
ಕೇಜ್ರಿವಾಲ್ ಅವರ ಬಂಧನ ಮತ್ತು ಮದ್ಯ ನೀತಿಯ ಪ್ರಕರಣದಿಂದ ಪಕ್ಷದ ಮೇಲಾದ ಪರಿಣಾಮದಿಂದಾಗಿ ರಾಜ್ಕುಮಾರ್ ಆನಂದ್ ಅವರು, ತಮ್ಮ ಸಚಿವ ಸ್ಥಾನ ಮತ್ತು ಎಎಪಿಗೆ ರಾಜೀನಾಮೆ ನೀಡಿದ್ದಾರೆ. ಹೀಗೆ ರಾಜೀನಾಮೆ ನೀಡಿದ ದೆಹಲಿ ಸರ್ಕಾರದ ಮೊದಲ ಮಂತ್ರಿಯಾಗಿದ್ದಾರೆ.