ಬೆಳಗಾವಿ:- ಮೈಕ್ರೋ ಫೈನಾನ್ಸ್ ಕಿರುಕುಳದಿಂದಾಗಿ ರೈತನೋರ್ವ ವಿಷ ಸೇವಿಸಿ ಸೂಸೈಡ್ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಜರುಗಿದೆ.
ಶಿವನಪ್ಪ ಧರ್ಮಟ್ಟಿ(66) ಆತ್ಮಹತ್ಯೆಗೆ ಶರಣಾದ ರೈತ ಎನ್ನಲಾಗಿದೆ. ಕ್ಯಾನ್ಸರ್ ಪೀಡಿತ ಪತ್ನಿ ಚಿಕಿತ್ಸೆಗಾಗಿ ವಿವಿಧ ಫೈನಾನ್ಸ್ ಕಂಪನಿಗಳಿಂದ 10 ಲಕ್ಷ ರೂಪಾಯಿ ಸಾಲ ಮಾಡಿದ್ದ. ಆದ್ರೆ, ಆ ಸಾಲವನ್ನು ಮರು ಪಾವತಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಲಾರಂಭಿಸಿವೆ. ಸಾಲ ಮರು ಪಾವತಿಸುವಂತೆ ಫೈನಾನ್ಸ್ ಸಿಬ್ಬಂದಿ, ರೈತ ಶಿವನಪ್ಪ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡಿದ್ದಾರೆ.
ಇದರಿಂದ ಬೇಸತ್ತು ಶಿವನಪ್ಪ ವಿಷ ಕುಡಿದಿದ್ದಾರೆ.