ಬೆಂಗಳೂರು: ಖ್ಯಾತ ನಟ ರಕ್ಷಿತ್ ಶೆಟ್ಟಿ ಮೇಲೆ ಮತ್ತೊಂದು ದೂರು ದಾಖಲಾಗಿದೆ. ಈ ಹಿಂದೆ ಇದೇ ಮಾದರಿಯ ಪ್ರಕರಣ ದಾಖಲಾಗಿತ್ತು . ಈ ಸಂಬಂಧ ಸ್ವಲ್ಪ ಮಟ್ಟಿಗೆ ಸಂಕಷ್ಟ ಕೂಡ ಎದುರಾಗಿತ್ತು. ಅದರಿಂದ ಬುದ್ದಿ ಕಲಿಯದ ಸಂಸ್ಥೆ ಈಗ ಮತ್ತೊಂದು ಆರೋಪ ಹೊತ್ತುಕೊಂಡಿದೆ. ಅದರ ಡೀಟೇಲ್ಸ್ ಇಲ್ಲಿದೆ
ಯಶಸ್ವಿ ಸಿನಿಮಾ ಕೊಟ್ಟಿರುವ ನಟ ರಕ್ಷಿತ್ ಶೆಟ್ಟಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಅವರ ಪ್ರೊಡಕ್ಷನ್ ಹೌಸ್ ಪರಮಃ ಸ್ಟುಡಿಯೋ ಎರಡನೇ ಆರೋಪಿಯಾಗಿ ರಕ್ಷಿತ್ ಶೆಟ್ಟಿ ಇದ್ದಾರೆ. ಅಂದ ಹಾಗೆ ಹಳೆ ಪ್ರಕರಣದಂತೆ ಇದೂ ಕೂಡ ಹಾಡುಗಳ ಕದ್ದ ಆರೋಪ ರಕ್ಷಿತ್ ಮೇಲಿದೆ…
ಜೈಲಿನಲ್ಲಿರುವಾಗಲೇ ಪವಿತ್ರಾ ಮತ್ತೊಮ್ಮೆ ಪ್ರೆಗ್ನೆಂಟ್!? : ಹೊಸ ಸಂಚಲನ ಸೃಷ್ಟಿ ಮಾಡಿದ್ರಾ ನಟಿ
ಇತ್ತೀಚೆಗೆ ದಿಗಂತ್ ಹಾಗು ಯೋಗೇಶ್ ನಟನೆಯ ಬ್ಯಾಚುಲರ್ ಪಾರ್ಟಿ ಸಿನಿಮಾ ಬಿಡುಗಡೆಯಾಗಿತ್ತು. ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಪರಮಃ ಸ್ಟುಡಿಯೋ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣ ಮಾಡಿದ್ರು. ಸ್ವಲ್ಪ ಮಟ್ಟಿಗೆ ಯಶಸ್ಸನ್ನ ಕಂಡಿದ್ದ ಈ ಚಿತ್ರ ಈಗ ವಿವಾದಕ್ಕೀಡಾಗಿದೆ. ಈ ಚಿತ್ರದ ನಿರ್ಮಾಪಕರ ವಿರುದ್ಧ ನವೀನ್ ಕುಮಾರ್ ಎಂಬ ಆಡಿಯೋ ಕಂಪನಿ ಉದ್ಯಮಿ ದೂರು ನೀಡಿದ್ದಾರೆ.ಇನ್ನು ಹಳೆಯ ಚಿತ್ರಗಳ ರೈಟ್ಸ್ ಗಳನ್ನ ಪಡೆದು ಅದನ್ನ ಮ್ಯೂಸಿಕ್ ಕಂಪನಿಗಳಿಗೆ ಹಾಗು ಇನ್ನೀತರ ಎಂಟರ್ಟೈನ್ಮೆಂಟ್ ಕೆಲಸಗಳಿಗೆ ಉಪಯೋಗಿಸುವ ಕಂಪನಿ ಎಂ ಆರ್ ಟಿ . ಇದರ ಮಾಲೀಕ ನವೀನ್ ಕುಮಾರ್ . ಈ ಹಿಂದೆ ಇದೇ ನವೀನ್ ಕುಮಾರ್ ಒಡೆತನದಲ್ಲಿರುವ ನ್ಯಾಯಾ ಎಲ್ಲಿದೆ ಹಾಗು ಗಾಳಿ ಮಾತು ಚಿತ್ರದ ಒಮ್ಮೆ ನಿನ್ನನ್ನು ಕಣ್ತುಂಬ ಎಂಬ ಹಾಡನ್ನು ಚಿತ್ರದಲ್ಲಿ ಬಳಕೆ ಮಾಡುವ ಸಲುವಾಗಿ ರಕ್ಷಿತ್ ಶೆಟ್ಟಿ ಆ್ಯಂಡ್ ಟೀಂ, ನವೀನ್ ಅವರನ್ನ ಕಾಂಟಾಕ್ಟ್ ಮಾಡಿದ್ರಂತೆ. ನಂತರ ಹಣದ ಮಾತುಕತೆ ಸರಿಹೋಗದ ಹಿನ್ನಲೆ ಮಾತುಕತೆ ನಿಂತುಹೋಗಿತ್ತು.
ನಂತರದ ದಿನಗಳಲ್ಲಿ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ಎರಡೂ ಹಳೆ ಹಾಡುಗಳನ್ನ ಟಿವಿಯಲ್ಲಿ ಹಾಗು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಆಗಿ ಬಳಕೆ ಮಾಡಿದ್ರಂತೆ. ಚಿತ್ರ ಬಿಡುಗಡೆಯ ಬಳಿಕ ನವೀನ್ ಅವರ ಅನುಮತಿ ಇರದೆ ಆ ಹಾಡು ಬಳಕೆ ಮಾಡಿಕೊಳ್ಳಲಾಗಿದೆ. ನಂತರ ಕೇಳಿದ ಸಂಧರ್ಭದಲ್ಲಿ ಚಿತ್ರಕ್ಕೆ ತೊಂದರೆಯಾಗೋದು ಬೇಡ ಎಂಬ ಕಾರಣಕ್ಕೆ ವಿನಂತಿ ಮಾಡಿದ್ದ ರಕ್ಷಿತ್ ಅಂಡ್ ಟೀಮ್ ಆ ಹಾಡನ್ನು ತೆಗೆಯಿರಿ ಎಂದು ನವೀನ್ , ರಕ್ಷಿತ್ ಶೆಟ್ಟಿ ಅವರಿಗೆ ಹೇಳಿದ್ರಂತೆ . ನಂತರ ಯಾವಾಗ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಹಾಡುಗಳನ್ನ ತೆಗೆಯದೆ ಯಥಾವತ್ ಚಿತ್ರ ಬಿಡುಗಡೆಯಾಯ್ತೊ ನವೀನ್ ದೂರು ಕೊಡಲು ನಿರ್ಧರಿಸಿದ್ದರಂತೆ . ಸದ್ಯ ಈ ಸಂಬಂಧ ದೂರು ದಾಖಲಾದ ಬೆನ್ನಲ್ಲೆ ಯಶ್ವಂತಪುರ ಪೊಲೀಸರು ನಟ ರಕ್ಷಿತ್ ಶೆಟ್ಟಿಗೆ ನೊಟೀಸ್ ನೀಡಿದ್ದಾರೆ. ಸದ್ಯ ಹೊರ ಹೋಗಿರುವ ರಕ್ಷಿತ್ ಶೆಟ್ಟಿ ಅವರ ಮೊಬೈಲ್ ಗೆ ನೊಟೀಸ್ ತಲುಪಿಸಲಾಗಿದೆ .
ಇನ್ನ ಈ ಹಿಂದೆ ಕೂಡ ಕಿರಿಕ್ ಪಾರ್ಟಿ ಚಿತ್ರದಲ್ಲಿ ಟ್ಯೂನ್ ಕದಿಯಲಾಗಿದೆ ಎಂದು ಲಹರಿ ಸಂಸ್ಥೆ ಮುಖ್ಯಸ್ಥ ವೇಲು ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಸದ್ಯ ಬ್ಯಾಚುಲರ್ ಪಾರ್ಟಿ ಸಂಬಂಧ ಯಶ್ವಂತ್ಪುರ ಪೊಲೀಸದ ಠಾಣೆಯಲ್ಲಿ ದೂರು ದಾಖಲಾಗಿದೆ .ರಕ್ಷತ್ ಶೆಟ್ಟಿ ಬೆಂಗಳೂರಿಗೆ ಬಂದ ನಂತರ ಪ್ರಕಾರಣ ಇತ್ಯಾರ್ಥ ವಾಗುತ್ತ ಕಾದು ನೋಡಬೇಕಿದೆ