ಐಶ್ವರ್ಯ ಅನ್ನೋ ಚಾಲಕಿ ಮಹಿಳೆ ಬರೋಬ್ಬರಿ 14 ಕೆಜಿ ಚಿನ್ನ ಪಡೆದು ವಂಚಿನೆ ಮಾಡಿ ಜೈಲು ಪಾಲಿಗೆ ಇದೀಗ ಹೊರಗಡೆ ಬಂದಿದ್ದಾಳೆ.. ಮತ್ತೊಂದು ಪ್ರಕರಣ ನಗರದಲ್ಲಿ ದಾಖಲಾಗಿದೆ. ಅಲ್ಲದೇ ಐಶ್ವರ್ಯ ಗೌಡಗೆ ಮತ್ತೆ ವಿಚಾರಣೆ ಹಾಜರಾಗುವಂತೆ ಖಾಕಿ ನೋಟಿಸ್ ನೀಡಿದೆ… ಹಾಗಾದರೆ ಅದ್ಯಾವ್ ಕೇಸ್ ಅಂತೀರಾ ಹೇಳ್ತೀವಿ ನೋಡಿ.
ಯೆಸ್… ಚಿನ್ನ ಪಡೆದು ವಂಚಿಸಿದ ಪ್ರಕರಣದಲ್ಲಿ ಐಶ್ವರ್ಯಾ ಗೌಡ ದಂಪತಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಐಶ್ವರ್ಯಾ ಗೌಡ ಹಾಗೂ ಪತಿ ಹರೀಶ್ಗೆ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ದೊರಕಿದೆ. ನ್ಯಾಯಮೂರ್ತಿ ಹೇಮಂತ್ ಚಂದನ್ಗೌಡರ್ ಅವರಿದ್ದ ಏಕಸದಸ್ಯ ಪೀಠದ ಆದೇಶ ಹೊರಡಿಸಿದ್ದು, ಐಶ್ವರ್ಯಾ ಹಾಗೂ ಪತಿ ಹರೀಶ್ ತಕ್ಷಣ ಬಿಡುಗಡೆ ಮಾಡಲು ಆದೇಶಿಸಿತು. ಅದರಂತೆ ಮೊನ್ನೆ ರಾತ್ರಿಯೇ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳು ಬಿಡುಗಡೆಯಾಗಿ ಹೊರಗೆ ಬಂದಿದ್ದಾರೆ. ಇದೀಗ ಮತ್ತೊಂದು ಪ್ರಕರಣ ಐಶ್ವರ್ಯ ವಿರುದ್ಧ ಆರ್ ಆರ್ ನಗರದಲ್ಲಿ ದಾಖಲಾಗಿದೆ.
ಹೌದು… ಚಿನ್ನಾಭರಣ ವಂಚನೆ ಕೇಸ್ನಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಐಶ್ವರ್ಯ ಗೌಡ ದಂಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸದ ಡಿ.ಕೆ.ಸುರೇಶ್ ತಂಗಿ ಹೆಸರಲ್ಲಿ ಮತ್ತೊಬ್ಬರಿಗೆ ಐಶ್ವರ್ಯಗೌಡ ವಂಚನೆ ಮಡಿದ್ದಾರೆ ಎಂದು ಐನಾತಿ ವಂಚಕಿ ಐಶ್ವರ್ಯಗೌಡ ವಿರುದ್ಧ ಆರ್.ಆರ್.ನಗರ ಠಾಣೆಯಲ್ಲಿ ಐಶ್ವರ್ಯಗೌಡ ಹಾಗೂ ಆಕೆಯ ಪತಿ ಹರೀಶ್ ಮತ್ತು ಬೌನ್ಸರ್ ಗಜಾ ಎಂಬಾತನ ವಿರುದ್ಧ ಕೇಸ್ ದಾಖಲಾಗಿದೆ.
Chanakya Niti: ನಿಮಗಿರುವ ಕಷ್ಟಗಳನ್ನು ಎದುರಿಸಲು ಚಾಣಕ್ಯ ಹೇಳಿದ ಈ 10 ವಿಷಯಗಳನ್ನು ನೆನಪಿಡಿ ಸಾಕು.!
ಆರ್.ಆರ್.ನಗರ ನಿವಾಸಿ ಶಿಲ್ಪಗೌಡ ಎಂಬುವವರು ದಂಪತಿ ವಿರುದ್ಧ ದೂರು ನೀಡಿದ್ದಾರೆ. ಇವರ ವಿರುದ್ಧ 3.25 ಕೋಟಿ ಹಣ ಹಾಗೂ 430 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾಳೆಂದು ದೂರು ದಾಖಲಿಸಿದ್ದಾರೆ. ಆರ್.ಆರ್.ನಗರದ ನಿವಾಸಿ ಶಿಲ್ಪಗೌಡ ಎಂಬುವವರಿಗೆ 2022ರಲ್ಲಿ ಪರಿಚಿತಳಾಗಿದ್ದ ಐಶ್ವರ್ಯಗೌಡ, ನಾನು ಡಿ.ಕೆ.ಸುರೇಶ್ ತಂಗಿ. ಗೋಲ್ಡ್ ಬ್ಯುಸಿನೆಸ್ ಮಾಡ್ತೀನಿ, ಚಿಟ್ ಫಂಡ್ ವ್ಯವಹಾರ ಮಾಡ್ತೀನಿ. ರಿಯಲ್ ಎಸ್ಟೇಟ್ ಹಾಗೂ ವಿಲ್ಲಾ ನಿರ್ಮಾಣ ಮಾಡ್ತಿನೆಂದು ಪರಿಚಯ ಮಾಡ್ಕೊಂಡಿದ್ದಳಂತೆ.
ಇನ್ನು ಇಷ್ಟೆ ಅಲ್ಲದೇ ಮಂಡ್ಯದಲ್ಲೂ ಕೂಡಾ ಒಂದೂವರೆ ವರ್ಷದ ಹಿಂದೆ ಉದ್ಯಮಿ ಕಮ್ ಕಾಂಗ್ರೆಸ್ ಮುಖಂಡನಿಗೂ ಐಶ್ವರ್ಯ ಗೌಡ ಪರಿಚಯವಾಗಿದ್ದಾಳೆಂತೆ. ಐಷಾರಾಮಿ ಕಾರು, ಬೌನ್ಸರ್, ಗನ್ಮ್ಯಾನ್ ಜೊತೆಗೆ ಬಂದು ಆ ಉದ್ಯಮಿಯನ್ನು ಪರಿಚಯ ಮಾಡಿಕೊಂಡಿದ್ದಾಳೆ. ತದನಂತರ ಇವರಿಬ್ಬರು ಸೇರಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡಿದ್ದಾರೆ. ಆರಂಭದಲ್ಲಿ ಎಲ್ಲಾ ವ್ಯವಹಾರ ಸರಿಯಾಗಿ ನಿಭಾಯಿಸಿದ್ದಾಳೆ… ಇದಾದ ಬಳಿಕ ಆ ವ್ಯಕ್ತಿಯಿಂದ ಚಿನ್ನ ಹಾಗೂ ನಗದು ರೂಪದಲ್ಲಿ 6.5 ಕೋಟಿ ಹಣವನ್ನು ಪಡೆದಿದ್ದಾಳೆ.
ಬಳಿಕ ಹಣವನ್ನು ಆತ ಕೇಳಿದ್ರೆ ಇಂದು, ನಾಳೆ ಎಂದು ಕಥೆ ಹೇಳ್ತಾ ಬಂದಿದ್ದಾಳೆ. ಆಗ ಪ್ರಭಾವಿ ರಾಜಕಾರಣಿ ಮಧ್ಯಸ್ಥಿಕೆ ವಹಿಸಿ ಸಮಯ ನೀಡುವಂತೆ ಹೇಳಿದ್ದಾರೆ. ಇದೀಗ ಈಕೆಯ 9 ಕೋಟಿ ಗೋಲ್ಡ್ ದೋಖಾ ಕಹಾನಿ ಹೊರಬಂದ ಬಳಿಕ ಉದ್ಯಮಿ ಕಮ್ ಕಾಂಗ್ರೆಸ್ ಮುಖಂಡನಿಗೆ ವಂಚನೆಗೆ ಒಳಗಾಗಿರೋದು ಗೊತ್ತಾಗಿದೆ. ಹೀಗಾಗಿ ಆತ ಐಶ್ವರ್ಯ ಗೌಡ ಮೇಲೆ ಮಂಡ್ಯ ಅಥವಾ ಬೆಂಗಳೂರಿನಲ್ಲಿ ದೂರು ದಾಖಲು ಮಾಡಲು ದಾಖಲೆ ಸಮೇತ ಸಿದ್ಧರಾಗಿದ್ದಾರೆ.
ಇನ್ನು ಆರ್ ಆರ್ ನಗರ ಪೊಲೀಸರು ದೂರು ದಾಖಲಿಸಿಕೊಂಡು ಐಶ್ವರ್ಯ ಗೌಡ್ ಗೆ ವಿಚಾರಣೆ ಬರುವಂತೆ ನೋಟಿಸ್ ನೀಡಿದ್ದರು, ಅದ್ರೆ ಇಂದು ಹಾಜರಾಗಿಲ್ಲ. ಸದ್ಯ ಮಂಡ್ಯ ಹಾಗೂ ಬೆಂಗಳೂರಿನಲ್ಲಿ ವಂಚನೆ ದೂರು ದಾಖಲಾಗಿದೆ. ಚಿನ್ನ ಪಡೆದು ವಂಚಿಸಿರೊ ಪ್ರಕರಣಗಳು ದಿನಕ್ಕೊಂದು ತಿರುವು ಪಡೆದುಕೊಳ್ತಿದ್ದು. ಇದು ಮುಂದಕ್ಕೆ ಯಾವೆಲ್ಲ ಸ್ವರೂಪ ಪಡೆದುಕೊಳ್ಳತ್ತೊ ಅನ್ನೋದನ್ನ ಕಾದು ನೋಡಬೇಕಿದೆ..