ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯದಲ್ಲಷ್ಟೇ ಅಲ್ಲದೇ ಇಡೀ ದೇಶದಾದ್ಯಂತ ಸದ್ದು ಮಾಡಿದೆ. ಮೊದಲು ‘ಶಾಂತಂ ಪಾಪಂ’ ಧಾರಾವಾಹಿಯಲ್ಲಿ ದರ್ಶನ್ ಪ್ರಕರಣವನ್ನು ಹೋಲುವ ರೀತಿಯಲ್ಲಿ ಎಪಿಸೋಡ್ ಮಾಡಲಾಗಿತ್ತು.
Narendra Modi: ಭಾರತೀಯ ರಾಜತಾಂತ್ರಿಕರನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ನಡೆಯುತ್ತಿವೆ: ಪ್ರಧಾನಿ
ಇದೀಗ ಮತ್ತೆ ಜನಪ್ರಿಯ ಧಾರವಾಹಿಯಲ್ಲಿ ಎಪಿಸೋಡ್ ಮಾಡಲಾಗಿದೆ. ಆದಾಗ್ಯೂ ಧಾರಾವಾಹಿಗಳಲ್ಲಿ ಶೆಡ್ ಹಾಗೂ ಮೋರಿಗಳ ಪದ ಬಳಕೆ ತಪ್ಪಿಲ್ಲ. ಈಗ ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿಯಲ್ಲಿ ಈ ರೀತಿಯ ಪದ ಬಳಕೆ ಆಗಿದೆ.
ದರ್ಶನ್ ಹಾಗೂ ಅವರ ಗ್ಯಾಂಗ್ ರೇಣುಕಾಸ್ವಾಮಿಯನ್ನು ಶೆಡ್ನಲ್ಲಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಇದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿ ಮೋರಿಯ ಬದಿಯಲ್ಲಿ ಹಾಕಲಾಗಿತ್ತು. ಈಗ ‘ಅಮೃತಧಾರೆ’ ಧಾರಾವಾಹಿಯಲ್ಲೂ ಶೆಡ್ ಬಗ್ಗೆ ಉಲ್ಲೇಖ ಇದೆ.
ಕಥಾ ನಾಯಕ ಗೌತಮ್ (ರಾಜೇಶ್ ನಟರಂಗ) ತಾಯಿ ಬದುಕಿದ್ದಾಳೆ ಎಂಬ ವಿಚಾರವನ್ನು ಹೇಳಲು ಧನ್ಯಾ ಎಂಬುವವಳು ಬಂದಿದ್ದಳು. ಆದರೆ, ಈ ಸತ್ಯ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಗೌತಮ್ ಮಲತಾಯಿ ಶಂಕುತಲಾ ದೇವಿ ಪ್ರಯತ್ನಿಸುತ್ತಾಳೆ. ಹೀಗಾಗಿ, ತಮ್ಮ ಒಡೆತನದ ಶೆಡ್ಗೆ ಧನ್ಯಾನ ಕರೆತರುತ್ತಾಳೆ ಮತ್ತು ಆಕೆಯನ್ನು ಕೊಲೆ ಮಾಡುತ್ತಾಳೆ. ‘ಈ ಹೆಣವನ್ನು ತೆಗೆದುಕೊಂಡು ಹೋಗಿ ಯಾವುದಾದರೂ ಮೋರಿಗೆ ಎಸೆಯಿರಿ’ ಎಂದು ಹೇಳುತ್ತಾಳೆ.
ಸದ್ಯ ಈ ಧಾರಾವಾಹಿಯಲ್ಲಿ ಶೆಡ್ ಹಾಗೂ ಮೋರಿ ಎರಡೂ ಸ್ಥಳಗಳ ಉಲ್ಲೇಖ ಆಗಿದೆ. ಈ ಧಾರಾವಾಹಿಯ ದೃಶ್ಯ ನೋಡಿದವರಿಗೆ ಅನೇಕರಿಗೆ ದರ್ಶನ್ ಪ್ರಕರಣ ನೆನಪಾಗಿದೆ. ಆದರೆ, ಇದು ಕೇವಲ ಕಾಕತಾಳೀಯ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.