ವಾಷಿಂಗ್ಟನ್: ದಕ್ಷಿಣ ಕೊರಿಯಾ ಮತ್ತು ಕಝಾಕಿಸ್ತಾನ ವಿಮಾನ ದುರಂತಗಳು ನಡೆದು ಇನ್ನೂ ಒಂದು ವಾರ ಕಳೆದಿಲ್ಲ ಆಗಾಲೇ ಅಮೆರಿಕದಲ್ಲಿ ಅದೇ ರೀತಿಯ ಮತ್ತೊಂದು ವಿಮಾನ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಡೆಲ್ಟಾ ಏರ್ಲೈನ್ಸ್ ಸೇರಿದ ವಿಮಾನವು ಗೊನ್ಜಾಗಾ ವಿಶ್ವವಿದ್ಯಾಲಯದ ಬ್ಯಾಸ್ಕೆಟ್ಬಾಲ್ ತಂಡವನ್ನು ಹೊತ್ತೊಯ್ಯುತ್ತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಆದರೆ ಪೈಲಟ್ ಗಳು ಸಮಯ ಪ್ರಜ್ಞೆ ಮೆರೆದು ತುರ್ತು ಬ್ರೇಕ್ ಅಳವಡಿಸಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿಸಿದ್ದು ಈ ಮೂಲಕ ಹಲವರು ಜೀವ ರಕ್ಷಿಸಿದ್ದಾರೆ.
ಸ್ಥಳೀಯ ಸಮಯ ಸಂಜೆ 4:30 ರ ಸುಮಾರಿಗೆ, ಗೊನ್ಜಾಗಾದ ಚಾರ್ಟರ್ಡ್ ಕೀ ಲೈಮ್ ಏರ್ ಫ್ಲೈಟ್ 563 ರನ್ವೇಯಲ್ಲಿ ಸಾಗುತ್ತಿದ್ದಾಗಲೇ ಅಟ್ಲಾಂಟಾಗೆ ಹೊರಟಿದ್ದ ಏರ್ಬಸ್ A321 ವಿಮಾನ ಡೆಲ್ಟಾ ಫ್ಲೈಟ್ 471, ಟೇಕ್ಆಫ್ ಕಡೆಗೆ ವೇಗವಾಗಿ ಚಲಿಸಿದೆ.
ಇದರಿಂದ ವಿಮಾನಗಳಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕ ಮತ್ತು ಜೀವ ಭಯಕ್ಕೆ ತುತ್ತಾದರು. ಎರಡೂ ವಿಮಾನಗಳು ಸಮೀಪಿಸುತ್ತಿರುವಾಗಲೇ ಪ್ರಯಾಣಿಕರು.. Stop.. Stop.. Stop ಎಂದು ಕೂಗಲಾರಂಭಿಸಿದ್ದು, ಪೈಲಟ್ ಕೂಡಲೇ ಫುಟ್ಬಾಲ್ ಆಟಗಾರರನ್ನು ಹೊತ್ತಿದ್ದ ಪುಟ್ಟ ಚಾರ್ಟೆಡ್ ವಿಮಾನ ತುರ್ತು ಬ್ರೇಕಿಂಗ್ ಅಳವಡಿಸಿದೆ.
ಈ ವೇಳೆ ವಿಮಾನದ ವೇಗ ನಿಯಂತ್ರಣಕ್ಕೆ ಬಂದಿದ್ದು. ಮತ್ತೊಂದು ಬದಿಯಲ್ಲಿ ಸಾಗಿದ್ದ ಡೆಲ್ಟಾ ಪ್ರಯಾಣಿಕ ವಿಮಾನ ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಟೇಕ್ ಆಫ್ ಆಗಿದೆ.