ಬೆಳಗಾವಿ : ಮೌನಿ ಅಮಾವಾಸ್ಯೆಯ ಅಮೃತಸ್ನಾನದ ವೇಳೆ ಪ್ರಯಾಗ್ ರಾಜ್ನಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಬೆಳಗಾವಿಯ ಮೂಲದ ನಾಲ್ವರು ಸಾವನ್ನಪ್ಪಿದ್ದರು. ಪ್ರಯಾಗರಾಜ್ ಯಾತ್ರೆಗೆ ತೆರಳಿದ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ದೇಶಪಾಂಡೆ ಗಲ್ಲಿಯ ರವಿ ಜಟಾರ (61) ಹೃದಯಾಘಾತದಿಂದ ಸಾವನ್ನೊಪ್ಪಿದ್ದಾರೆ. ಪ್ರಯಾಗರಾಜ್ ದಿಂದ ಮರಳಿ ಬರುವಾಗ ಪುಣೆಯಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಇನ್ನೊಂದೆಡೆ ಪ್ರಯಾಗ್ರಾಜ್ ನಲ್ಲಿನ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ನಾಲ್ವರಲ್ಲಿ ಇಬ್ಬರ ಮೃತದೇಹಹಗಳು ರವಾನೆ ಆಗಿವೆ. ದೆಹಲಿಯಿಂದ ಬೆಳಗಾವಿಗೆ ನೇರವಾಗಿ ಎರಡು ಮೃತದೇಹಗಳು ಮಾತ್ರ ರವಾನೆಯಾಗಿದ್ದು, ಮಹಾದೇವಿ ಬಾವನೂರ, ಅರುಣ್ ಕೋಪರ್ಡೆ ಮೃತದೇಹ ಏರ್ಪೋರ್ಟ್ ರವಾನೆ ಮಾಡಲಾಗಿದೆ.
ಎರಡು ಮೃತದೇಹಗಳನ್ನ ದೆಹಲಿಯಿಂದ ವಿಮಾನದಲ್ಲಿ ಗೋವಾಕ್ಕೆ ತಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಳಗಾವಿಗೆ ತರಲು ನಿರ್ಧರಿಸಲಾಗಿದ್ದು, ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ ಶವ ಬರುವುದರಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದೆ.