ಕೋವಿಡ್ ೧೯ ಸಾಂಕ್ರಾಂಮಿಕ ರೋಗದಿಂದ ಹಲವು ದೇಶಗಳು ಈಗ ತಾನೇ ಚೇತರಿಸಿಕೊಳ್ಳುತ್ತಿವೆ. ಈ ಮಧ್ಯೆ ಕೋವಿಡ್ ೧೯ ಸಾಂಕ್ರಾಂಮಿಕ ರೋಗದ ತವರಾದ ಚೀನಾದಿಂದ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆಯಾಗಿದೆ. ಅದೂ ಕೂಡ ಕೊರೊನಾದಂತೆ ಬಾವಲಿಗಳಿಂದಲೇ ಹುಟ್ಟಿಕೊಂಡಿದ್ದು, ಮನುಷ್ಯರ ಮೇಲೂ ದಾಳಿ ಮಾಡಲಿದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಈ ಹೊಸ ವೈರಸ್ಗೆ ವಿಜ್ಞಾನಿಗಳು HKU5-CoV-2 ಎಂದು ಹೆಸರಿಟ್ಟಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ.. COVID-19ಗೆ ಕಾರಣವಾದ ವೈರಸ್ SARS-CoV-2 ನಂತೆಯೇ ಇದು ಮನುಷ್ಯರಿಗೆ ಹರಡುತ್ತದೆ. ಆದರೆ ಇಲ್ಲಿಯವರೆಗೆ HKU5-CoV-2 ಮನುಷ್ಯರಿಗೆ ಹಬ್ಬಿಲ್ಲ ಎನ್ನಲಾಗುತ್ತಿದೆ.
ಬಾವಲಿ ಕೊರೊನಾ ವೈರಸ್ ಬಗ್ಗೆ ಅಧ್ಯಯ ನಡೆಸಿದ್ದ ‘ಬ್ಯಾಟ್ವುಮನ್’ ಎಂದು ಕರೆಯಲ್ಪಡುವ ಪ್ರಸಿದ್ಧ ವೈರಾಲಜಿಸ್ಟ್ ಶಿ ಝೆಂಗ್ಲಿ ಈ ಅಧ್ಯಯನದ ನೇತೃತ್ವ ವಹಿಸಿದ್ದರು. ಜೊತೆಗೆ ಸಂಸ್ಥೆಗಳ ತಜ್ಞರು ಕೂಡ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಪತ್ತೆಯಾದ ಹೊಸ ವೈರಸ್ ಮೆರ್ಬೆಕೊವೈರಸ್ ಉಪಜಾತಿಗೆ ಸೇರಿದೆ.
ಹಾಂಗ್ ಕಾಂಗ್ನಲ್ಲಿರುವ ಜಪಾನಿ ಪೈಪಿಸ್ಟ್ರೆಲ್ ಬಾವಲಿಗಳಲ್ಲಿ ಪತ್ತೆಯಾಗಿದ್ದ HKU5 ಕೊರೊನಾ ವೈರಸ್ನ ಹೊಸ ವಂಶಾವಳಿ. ಬಾವಲಿಗಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್, ಮನುಷ್ಯರಿಗೂ ತಾಗುವ ಅಪಾಯವಿದೆ. ಆದರೆ ಇಲ್ಲಿಯವರೆಗೆ ಯಾರಿಗೂ ವೈರಸ್ನ ಸೋಂಕು ತಗುಲಿಲ್ಲ. ಮುಂದಿನ ದಿನಗಳಲ್ಲಿ ಅಪಾಯ ಇರಬಹುದು ಅನ್ನೋದು ವಿಜ್ಞಾನಿಗಳ ಎಚ್ಚರಿಕೆ ನೀಡಿದ್ದಾರೆ.
ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ತನ್ನ ಲ್ಯಾಬ್ನಿಂದ ಕೋವಿಡ್ -19 ಸೋರಿಕೆಯಾಗಿರಬಹುದು ಎಂಬ ಸಿದ್ಧಾಂತಗಳ ಕುರಿತು ಜಾಗತಿಕ ವಿವಾದದ ಕೇಂದ್ರವಾಗಿದೆ, ಚೀನಾ ಪದೇ ಪದೇ ನಿರಾಕರಿಸಿದೆ. ಕೋವಿಡ್ -19 ರ ಮೊದಲ ದಾಖಲಾದ ಮಾನವ ಪ್ರಕರಣವು ನವೆಂಬರ್ 2019 ರಲ್ಲಿ ವುಹಾನ್ನಲ್ಲಿ ಹೊರಹೊಮ್ಮಿತು, ಅಂತಿಮವಾಗಿ ವಿಶ್ವಾದ್ಯಂತ ಬಿಕ್ಕಟ್ಟನ್ನು ಉಂಟುಮಾಡಿತು.